• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಷ್ಟ್ರೀಯ ಪಕ್ಷಗಳನ್ನೇ ಹಿಂದಿಕ್ಕಿದ 'ನೋಟಾ' ಪವರ್ ಫಲಿತಾಂಶ

|

ನವದೆಹಲಿ, ಡಿಸೆಂಬರ್ 12: ಪಂಚರಾಜ್ಯಗಳ ಚುನಾವಣೆ ಫಲಿತಾಂಶವು ಕೆಲವೆಡೆ ನಿರೀಕ್ಷೆಯಂತೆ ಬಂದಿದೆ. ಕೆಲ ರಾಜ್ಯಗಳ ಫಲಿತಾಂಶದಲ್ಲಿ ಕುತೂಹಲಕಾರಿ ಅಂಶಗಳು ಕಂಡು ಬಂದಿವೆ. ಗುಜರಾತ್ ವಿಧಾನಸಭೆ ಚುನಾವಣೆಯಂತೆ ಐದು ರಾಜ್ಯಗಳ ಚುನಾವಣೆಯಲ್ಲೂ ನೋಟಾ ತನ್ನ ಶಕ್ತಿ ತೋರಿಸಿದೆ.

ಐದು ರಾಜ್ಯಗಳಲ್ಲಿ ನೋಟಾ: ಚುನಾವಣಾ ಆಯೋಗದ ವೆಬ್ ತಾಣದ ಮಾಹಿತಿಯಂತೆ ಛತ್ತೀಸ್ ಗಡದಲ್ಲಿ ಶೇ2.1ರಷ್ಟು ಹಾಗೂ ಮಿಜೋರಾಂನಲ್ಲಿ ಶೇ 0.5ರಷ್ಟು ನೋಟಾ ಚಾಲನೆಯಾಗಿತ್ತು.

ಛತ್ತೀಸ್ ಗಡದಲ್ಲಿ 90 ಸ್ಥಾನಗಳ ಪೈಕಿ 89ರಲ್ಲಿ ಸ್ಪರ್ಧಿಸಿದ್ದ ಆಮ್ ಆದ್ಮ್ ಪಕ್ಷ(ಎಎಪಿ) ಅಭ್ಯರ್ಥಿಗಳಿಗಿಂತ ನೋಟಾ ಅಧಿಕ ಮತ ಪಡೆದುಕೊಂಡಿದೆ. ಎಎಪಿಗೆ ಶೇ 0.9ರಷ್ಟು ಮತಗಳು ಬಂದಿದ್ದರೆ, ನೋಟಾಗೆ 2.1ರಷ್ಟು ಮತ ಸಿಕ್ಕಿದೆ.

ಮೋದಿ ಸರ್ಕಾರದ ಪತನಕ್ಕೆ ದಿನಗಣನೆ ಆರಂಭ : ಕೇಜ್ರಿವಾಲ್

ಸಮಾಜ ವಾದಿ ಪಕ್ಷ ಹಾಗೂ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ( ಎನ್ ಸಿಪಿ) ತಲಾ ಶೇ 0.2ರಷ್ಟು ಮತ ಮಾತ್ರ ಗಳಿಸಿವೆ. ಇನ್ನು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ) ಶೇ0.4ರಷ್ಟು ಮಾತ್ರ ಮತಗಳನ್ನು ಪಡೆದುಕೊಂಡಿದೆ.

ಗುಜರಾತಿನಲ್ಲೂ ನೋಟಾ ಉತ್ತಮ ಫಲಿತಾಂಶ

ಗುಜರಾತಿನಲ್ಲೂ ನೋಟಾ ಉತ್ತಮ ಫಲಿತಾಂಶ

ಗುಜರಾತ್ ಚುನಾವಣೆಯಲ್ಲಿ ನಾಲ್ಕನೇ ಸ್ಥಾನವನ್ನು ನೋಟಾ (NOTA - None of the Above) ಪಡೆದುಕೊಂಡಿದ್ದು ರಾಷ್ಟ್ರೀಯ ಪಕ್ಷಗಳಾದ ಎನ್.ಸಿ.ಪಿ ಮತ್ತು ಬಿಎಸ್ಪಿಯನ್ನೇ ಹಿಂದಿಕ್ಕಿದೆ. ಗುಜರಾತ್ ಚುನಾವಣೆಯಲ್ಲಿ ಶೇಕಡಾ 1.8 ನೋಟಾ ಮತಗಳು ಚಲಾವಣೆಯಾಗಿವೆ. ಒಟ್ಟು 5,24,709 ಜನರು ನೋಟಾ ಗುಂಡಿ ಒತ್ತಿದ್ದರು.

ಅದೇ ರೀತಿ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನೋಟಾ ಐದನೇ ಸ್ಥಾನ ಪಡೆದುಕೊಂಡಿತ್ತು. ಅಲ್ಲಿ ಶೇಕಡಾ 0.9 ಮತದಾರರು ನೋಟಾಗೆ ಮತ ಹಾಕಿದ್ದಾರೆ. ಹೀಗೆ ಬಿದ್ದಿರುವ ಒಟ್ಟು ನೋಟಾ ಮತಗಳ ಸಂಖ್ಯೆ 29,618.

ಕಾಂಗ್ರೆಸ್ ಮುಕ್ತ ಈಶಾನ್ಯ ಭಾರತ, ಬಿಜೆಪಿ ಕನಸು ನನಸಾಯ್ತು!

ಐದು ರಾಜ್ಯಗಳಲ್ಲಿ ನೋಟಾ

ಐದು ರಾಜ್ಯಗಳಲ್ಲಿ ನೋಟಾ

ಚುನಾವಣಾ ಆಯೋಗದ ವೆಬ್ ತಾಣದ ಮಾಹಿತಿಯಂತೆ ಛತ್ತೀಸ್ ಗಡದಲ್ಲಿ ಶೇ2.1ರಷ್ಟು ಹಾಗೂ ಮಿಜೋರಾಂನಲ್ಲಿ ಶೇ 0.5ರಷ್ಟು ನೋಟಾ ಚಾಲನೆಯಾಗಿತ್ತು.

ಛತ್ತೀಸ್ ಗಡದಲ್ಲಿ 90 ಸ್ಥಾನಗಳ ಪೈಕಿ 89ರಲ್ಲಿ ಸ್ಪರ್ಧಿಸಿದ್ದ ಆಮ್ ಆದ್ಮ್ ಪಕ್ಷ(ಎಎಪಿ) ಅಭ್ಯರ್ಥಿಗಳಿಗಿಂತ ನೋಟಾ ಅಧಿಕ ಮತ ಪಡೆದುಕೊಂಡಿದೆ. ಎಎಪಿಗೆ ಶೇ 0.9ರಷ್ಟು ಮತಗಳು ಬಂದಿದ್ದರೆ, ನೋಟಾಗೆ 2.1ರಷ್ಟು ಮತ ಸಿಕ್ಕಿದೆ.

ಸಮಾಜ ವಾದಿ ಪಕ್ಷ ಹಾಗೂ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ( ಎನ್ ಸಿಪಿ) ತಲಾ ಶೇ 0.2ರಷ್ಟು ಮತ ಮಾತ್ರ ಗಳಿಸಿವೆ. ಇನ್ನು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ) ಶೇ0.4ರಷ್ಟು ಮಾತ್ರ ಮತಗಳನ್ನು ಪಡೆದುಕೊಂಡಿದೆ.

ಮಿಜೋರಾಂ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ ಅಭ್ಯರ್ಥಿ ಡಾ. ಛಕ್ಮಾ

ಮಧ್ಯಪ್ರದೇಶದಲ್ಲಿ ನೋಟಾ ಬಳಕೆ

ಮಧ್ಯಪ್ರದೇಶದಲ್ಲಿ ನೋಟಾ ಬಳಕೆ

ಮಧ್ಯಪ್ರದೇಶದಲ್ಲಿ ನೋಟಾ ಶೇಕಡಾವಾರು ಮತಗಳಿಕೆ 1.5%ನಷ್ಟಿದೆ. ಸಮಾಜವಾದಿ ಪಕ್ಷಕ್ಕೆ ಶೇ 1ರಷ್ಟು ಮತ ಸಿಕ್ಕಿದೆ. ಎಎಪಿಗೆ ಶೇ 0.7 ಮತಗಳು ಮಾತ್ರ ಲಭಿಸಿವೆ. ಮಧ್ಯಪ್ರದೇಶದಲ್ಲಿ ಫಲಿತಾಂಶ ರೋಚಕವಾಗಿದ್ದು, 24 ಗಂಟೆಗಳ ಅವಧಿಗೂ ಮೀರಿ ಮತ ಎಣಿಕೆ ಕಾರ್ಯ ನಡೆಸಿದ್ದು ವಿಶೇಷ. ಅಂತಿಮವಾಗಿ ಕಾಂಗ್ರೆಸ್ 114, ಬಿಜೆಪಿ 109, ಬಿಎಸ್ಪಿ 2, ಸಮಾಜವಾದಿ ಪಕ್ಷ 1 ಹಾಗೂ ಇತರರು 4 ಸ್ಥಾನಗಳಿಸಿದರು. 230 ಸ್ಥಾನಗಳ ವಿಧಾನಸಭೆಗೆ ಅಧಿಕಾರ ಸ್ಥಾಪಿಸಲು 116 ಸ್ಥಾನಗಳು ಬೇಕಾಗುತ್ತದೆ. ಕಾಂಗ್ರೆಸ್ಸಿಗೆ ಬಿಎಸ್ಪಿ ಹಾಗೂ ಎಸ್ಪಿ ಬೆಂಬಲ ಸಿಕ್ಕಿದೆ.

ರಾಜಸ್ಥಾನದಲ್ಲಿ ನೋಟಾ ಪವರ್

ರಾಜಸ್ಥಾನದಲ್ಲಿ ನೋಟಾ ಪವರ್

ರಾಜಸ್ಥಾನದಲ್ಲಿ ಒಟ್ಟಾರೆ ಮತ ಎಣಿಕೆಯಲ್ಲಿ ನೋಟಾಕ್ಕೆ 1.3% ಮತಗಳು ಸಿಕ್ಕಿವೆ. ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಹಾಗೂ ಸಮಾಜವಾದಿ ಪಕ್ಷಕ್ಕೆ ಕ್ರಮವಾಗಿ ಶೇ 1.3 ಹಾಗೂ ಶೇ 0.2ರಷ್ಟು ಮತ ಮತಗಳು ಸಿಕ್ಕಿವೆ. ಇನ್ನು ಎಎಪಿ ಹಾಗೂ ರಾಷ್ಟ್ರೀಯ ಲೋಕದಳ (ಆರ್ ಎಲ್ ಡಿ) ಗೆ ಶೇ 0.4ರಷ್ಟು ಮತಗಳು ಮಾತ್ರ ಲಭಿಸಿವೆ. 199 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನ ಗಳಿಸಿದ್ದು, ಬಿಜೆಪಿಗೆ 73 ಸ್ಥಾನ ಸಿಕ್ಕಿದೆ, ಬಿಎಸ್ಪಿ 6, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ 3, ಸಿಪಿಐ(ಎಂ) 2 ಭಾರತೀಯ ಟ್ರೈಬಲ್ ಪಾರ್ಟಿ 2, ರಾಷ್ಟ್ರೀಯ ಲೋಕದಳ 1 ಮತ್ತು ಇತರರು 13 ಸ್ಥಾನದಲ್ಲಿ ಗೆದ್ದಿದ್ದಾರೆ. ಅಧಿಕಾರ ಸ್ಥಾಪಿಸಲು 100 ಸ್ಥಾನಗಳು ಸಾಕು.

ತೆಲಂಗಾಣ ಹಾಗೂ ಮಿಜೋರಾಂನಲ್ಲಿ ಫಲಿತಾಂಶ

ತೆಲಂಗಾಣ ಹಾಗೂ ಮಿಜೋರಾಂನಲ್ಲಿ ಫಲಿತಾಂಶ

ತೆಲಂಗಾಣದಲ್ಲಿ ನೋಟಾ ಶೇ1.1ರಷ್ಟು ಬಂದಿದೆ, ಎನ್ ಸಿಪಿಗೆ ಶೇ 0.2 ಮತಗಳು ಮಾತ್ರ ದಕ್ಕಿವೆ. ಸಿಪಿಐ(ಎಂ) ಶೇ 0.4ರಷ್ಟು ಹಾಗೂ ಸಿಪಿಐ ಕೂಡಾ ಶೇ 0.4ರಷ್ಟು ಮಾತ್ರ ಮತಗಳಿಸಿವೆ. ಮಿಜೋರಾಂನಲ್ಲಿ ಒಟ್ಟಾರೆ ಶೇ 0.5ರಷ್ಟು ನೋಟಾ ದಾಖಲಾಗಿದೆ. ಪೀಪಲ್ಸ್ ರೆಪ್ರೆಸೆಂಟ್ ಫಾರ್ ಐಡೆಂಟಿಟಿ ಅಂಡ್ ಸ್ಟೇಟಸ್ ಆಫ್ ಮಿಜೋರಾಂ(ಪಿಸ್ಮಂ) ಶೇ 0.2ರಷ್ಟು ಮತಗಳನ್ನು ಗಳಿಸಿದೆ.

English summary
The NOTA or None of The Above option appeared to have outperformed several political parties, including AAP and Samajwadi Party, which contested the assembly polls in the five states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X