ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಸದ್ಯಕ್ಕೆ ಬೇರೆ ದೇಶಗಳಿಗೆ ಲಸಿಕೆ ರಫ್ತು ಚರ್ಚೆ ಸೂಕ್ತವಲ್ಲ"

|
Google Oneindia Kannada News

ನವದೆಹಲಿ, ಜೂನ್ 04: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಲಸಿಕೆಗೆ ಜಾಗತಿಕವಾಗಿ ಬೇಡಿಕೆ ಹೆಚ್ಚಾಗಿದೆ. ಸದ್ಯಕ್ಕೆ ದೇಶದಲ್ಲಿ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕಾಗಿ ದೇಶೀಯ ಲಸಿಕಾ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದ್ದು, ಈ ಸಮಯದಲ್ಲಿ ಇತರೆ ದೇಶಗಳಿಗೆ ಲಸಿಕೆ ಪೂರೈಸುವ ಕುರಿತು ಮಾತನಾಡುವುದು ಸೂಕ್ತವಲ್ಲ ಎಂದು ಭಾರತ ಹೇಳಿದೆ.

ದೇಶೀಯ ಬಳಕೆಗಾಗಿ ಲಸಿಕೆ ಪೂರೈಕೆ ಹೆಚ್ಚಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದಮ್ ಬಗಚಿ, ಈ ಪ್ರಯತ್ನದ ಭಾಗವಾಗಿ ಅಮೆರಿಕ ಲಸಿಕೆ ತಯಾರಿಕರಾದ ಫೈಜರ್, ಜಾನ್ಸನ್ ಅಂಡ್ ಜಾನ್ಸನ್ ಹಾಗೂ ಮಾಡೆರ್ನಾದೊಂದಿಗೆ ಭಾರತ ಚರ್ಚೆ ನಡೆಸಿದೆ ಎಂದು ಹೇಳಿದರು.

 3 ಲಸಿಕೆಗಳ ಮೇಲೆ ಹೇರಿದ್ದ ಡಿಪಿಎ ಹಿಂಪಡೆದ ಅಮೆರಿಕ ಸರ್ಕಾರ 3 ಲಸಿಕೆಗಳ ಮೇಲೆ ಹೇರಿದ್ದ ಡಿಪಿಎ ಹಿಂಪಡೆದ ಅಮೆರಿಕ ಸರ್ಕಾರ

ವಿದೇಶದಿಂದ ಲಸಿಕೆಗಳನ್ನು ಸಮರ್ಪಕವಾಗಿ ಪೂರೈಸಲು ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೇನೆ. ಸದ್ಯಕ್ಕೆ ವಿದೇಶಗಳಿಗೆ ಲಸಿಕೆಗಳ ಪೂರೈಕೆಯ ಕುರಿತು ಈಗ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.

Not Right To Speak Of Outside Vaccine Supply Now Says MEA

ನಾವು ಪ್ರಸ್ತುತ ನಮ್ಮದೇ ಆದ ಲಸಿಕಾ ಕಾರ್ಯಕ್ರಮದ ಉದ್ದೇಶಕ್ಕಾಗಿ ದೇಶೀಯ ಲಸಿಕೆ ಉತ್ಪಾದನೆಯನ್ನು ಚುರುಕುಗೊಳಿಸಿದ್ದೇವೆ. ಅದಷ್ಟೇ ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಮಾರ್ಚ್ 23ರಂದು ವಿದೇಶಾಂಗ ವ್ಯವಹಾರಗಳ ಸಚಿವ ವಿ ಮುರಳೀಧರನ್, ಭಾರತ 600 ಮಿಲಿಯನ್ ಡೋಸ್ ‌ಗಳನ್ನು 76 ದೇಶಗಳಿಗೆ ಪೂರೈಕೆ ಮಾಡಿದೆ ಎಂದು ತಿಳಿಸಿದ್ದರು.

ದೇಶದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟದ ನಂತರ ಲಸಿಕೆ ರಫ್ತನ್ನು ಭಾರತ ನಿಲ್ಲಿಸಿತ್ತು.

English summary
As the demand for COVID-19 vaccines rises globally, India said it would not be right to talk about the supply of jabs to other countries now,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X