ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರನ್ನು ಅಪವಿತ್ರಗೊಳಿಸುವ ಹಕ್ಕು ಮಹಿಳೆಯರಿಗಿಲ್ಲ: ಸ್ಮೃತಿ ಇರಾನಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 23: ವಿವಾದಿತ ಶಬರಿಮಲೆ ತೀರ್ಪಿನ ಕುರಿತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿಕೆ ನೀಡಿದ್ದು, ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವುದನ್ನು ಅವರು ವಿರೋಧಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸ್ಮೃತಿ ಇರಾನಿ ಅವರು, ಋತು ಸ್ರಾವದ ಸಮಯದಲ್ಲಿ ಸ್ನೇಹಿತರ ಮನೆಗೆ
ಹೋಗುವುದಿಲ್ಲ, ಅಂತಹದರಲ್ಲಿ ದೇವರ ಮನೆಗೆ ಹೋಗುವುದು ಸರಿಯೇ? ಎಂದು ಅವರು ಪ್ರಶ್ನಿಸಿದ್ದಾರೆ.

not have right to desecrate: Smriti Irani on Sabarimala verdict

'ಪೂಜೆ ಮಾಡುವ, ಪ್ರಾರ್ಥನೆ ಮಾಡುವ ಹಕ್ಕಿದೆ ಆದರೆ ಅಪವಿತ್ರಗೊಳಿಸುವ ಹಕ್ಕಿಲ್ಲ. ಸುಪ್ರಿಂ ಕೋರ್ಟ್‌ ತೀರ್ಪಿನ ವಿರುದ್ಧ ಮಾತನಾಡಲು ನಾನು ಯಾರು ಕೂಡಾ ಅಲ್ಲ ನಾನು ಕೇವಲ ಕ್ಯಾಬಿನೆಟ್‌ ಸಚಿವೆ ಅಷ್ಟೆ ಎಂದು ಅವರು ಸುಪ್ರಿಂಕೋರ್ಟ್‌ ತೀರ್ಪಿನ ವಿರುದ್ಧ ಮಾತನಾಡುವುದು ಸರಿ ಅಲ್ಲವೆಂಬ ಅಭಿಪ್ರಾಯವನ್ನೂ ತಳೆದಿದ್ದಾರೆ.

ಸಮಾನತೆ ಹೆಸರಿನಲ್ಲಿ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ, ಅಯ್ಯಪ್ಪ ಭಕ್ತರ ಪರವಾಗಿ ನಿಂತ ಡಾ.ವೀರೇಂದ್ರ ಹೆಗ್ಗಡೆ ಸಮಾನತೆ ಹೆಸರಿನಲ್ಲಿ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ, ಅಯ್ಯಪ್ಪ ಭಕ್ತರ ಪರವಾಗಿ ನಿಂತ ಡಾ.ವೀರೇಂದ್ರ ಹೆಗ್ಗಡೆ

ಋತುಸ್ರಾವದ ರಕ್ತ ಮೆತ್ತಿದ ಸ್ಯಾನಿಟೆರಿ ನ್ಯಾಪ್ಕಿನ್‌ಗಳನ್ನು ನೀವು ನಿಮ್ಮ ಸ್ನೇಹಿತರ ಮನೆಗೆ ತೆಗೆದುಕೊಂಡು ಹೋಗುತ್ತೀರಾ? ಹಾಗಿದ್ದರೆ ಏಕೆ ಅವನ್ನು ದೇವರ ಮನೆಗೆ ತೆಗೆದುಕೊಂಡು ಹೋಗಬೇಕು ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಕೆಲವು ಸಂದರ್ಭ, ಕಾರಣಗಳಿಗಾಗಿ ಈ ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲಕೆಲವು ಸಂದರ್ಭ, ಕಾರಣಗಳಿಗಾಗಿ ಈ ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ

ಸ್ಮೃತಿ ಇರಾನಿ ಅವರ ಈ ಹೇಳಿಕೆ ಪ್ರಗತಿಪರ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಋತುಸ್ರಾವನ್ನು ಕೀಳಾದ, ಆ ಪ್ರಕ್ರಿಯಿಯೆಂದ ಮಹಿಳೆ ಅಶುದ್ಧಳಾಗುತ್ತಾಳೆ ಎಂಬ ದೃಷ್ಟಿಕೋನವನ್ನು ತೆಗೆದುಹಾಕಬೇಕು ಎಂಬ ಒತ್ತಾಯ ಪ್ರಗತಿಪರ ಮಹಿಳೆಯರದ್ದು.

ಶಬರಿಮಲೆಯನ್ನುRSS ರಣರಂಗವನ್ನಾಗಿಸಿದೆ: ಪಿಣರಾಯಿ ವಿಜಯನ್ ಶಬರಿಮಲೆಯನ್ನುRSS ರಣರಂಗವನ್ನಾಗಿಸಿದೆ: ಪಿಣರಾಯಿ ವಿಜಯನ್

English summary
Central Minister Smriti Irani opposed women going to Sabarimala temple. She said Would you take sanitary napkins soaked in menstrual blood into a friend's home? So why would you take them into the house of God.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X