ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ ಜೊತೆ ಮೈತ್ರಿಗೆ ತೃತೀಯ ರಂಗದಲ್ಲಿ ಒಮ್ಮತವಿಲ್ಲ: ದೇವೇಗೌಡ

By Manjunatha
|
Google Oneindia Kannada News

Recommended Video

ತೃತೀಯ ರಂಗದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಎಚ್ ಡಿ ದೇವೇಗೌಡ್ರು ಕೊಟ್ಟ ಮಾಹಿತಿ

ನವ ದೆಹಲಿ, ಜೂನ್ 28: ತೃತೀಯ ರಂಗವು ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ನೇರ ಪ್ರತಿಸ್ಪರ್ಧಿಯೂ ಆಗಲಿದೆ ಎಂದು ಸಂಸದ ದೇವೇಗೌಡ ಅವರು ಹೇಳಿದರು.

ನವ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವು ಕಾಂಗ್ರೆಸ್ ಜೊತೆ ಹೋಗಲಿದೆ ಆದರೆ ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ಇನ್ನೂ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜೊತೆ ಹೊಂದಾಣಿಕೆಗೆ ಸಿದ್ದವಿಲ್ಲ ಎಂದರು.

ಅವಧಿಗೆ ಮುನ್ನ ತೆಲಂಗಾಣ ವಿಧಾನಸಭೆ ಮತ್ತು ಲೋಕಸಭೆಗೂ ಚುನಾವಣೆ?ಅವಧಿಗೆ ಮುನ್ನ ತೆಲಂಗಾಣ ವಿಧಾನಸಭೆ ಮತ್ತು ಲೋಕಸಭೆಗೂ ಚುನಾವಣೆ?

ಎನ್‌ಡಿಎಗೆ ಪರ್ಯಾಯವಾಗಿ ತೃತೀಯ ರಂಗವು ಗಟ್ಟಿಗೊಂಡಿದ್ದು, ಇತ್ತೀಚೆಗೆ ನಡೆದ ಕುಮಾರಸ್ವಾಮಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಅದು ಜಗಜ್ಜಾಹೀರಾಗಿದೆ. ತೃತೀಯ ರಂಗ ಒಡೆದು ಹೋಗಿದೆ ಎಂದವರಿಗೆ ಅದು ತಿರುಗೇಟು ನೀಡಿದೆ ಎಂದರು.

ನವೆಂಬರ್-ಡಿಸೆಂಬರ್ ನಲ್ಲಿ ಚುನಾವಣೆ

ನವೆಂಬರ್-ಡಿಸೆಂಬರ್ ನಲ್ಲಿ ಚುನಾವಣೆ

ಲೋಕಸಭೆಯನ್ನು ಆಗಸ್ಟ್ ತಿಂಗಳಲ್ಲಿ ವಿಸರ್ಜನೆ ಮಾಡುವ ಸಾಧ್ಯತೆ ಇದ್ದು ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಚುನಾವಣೆ ನಡೆಯಲಿದೆ ಎಂದು ದೇವೇಗೌಡ ಅನುಮಾನ ವ್ಯಕ್ತಪಡಿಸಿದರು. ಈಗಾಗಲೇ ಬಿಜೆಪಿಯು ರಾಜ್ಯ ಘಟಕಗಳಿಗೆ ಈ ಬಗ್ಗೆ ಸೂಚನೆ ನೀಡಿದೆ ಎಂದು ಅವರು ಹೇಳಿದರು.

ಉ.ಪ್ರದೇಶದಲ್ಲಿ ಐತಿಹಾಸಿಕ ಮೈತ್ರಿ

ಉ.ಪ್ರದೇಶದಲ್ಲಿ ಐತಿಹಾಸಿಕ ಮೈತ್ರಿ

ಲೋಕಸಭೆ ಚುನಾವಣೆ ವೇಳೆ ಉತ್ತರ ಪ್ರದೇಶವು ಐತಿಹಾಸಿಕ ಮೈತ್ರಿಯತ್ತ ಮುಖ ಮಾಡಿದ್ದು ಅಲ್ಲಿ ಬಹುಕಾಲದ ವಿರೋಧಿಗಳಾದ ಮಾಯಾವತಿ ಮತ್ತು ಅಖಿಲೇಶ್ ಅವರುಗಳು ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಇಬ್ಬರೂ 40:40 ಅನುಪಾತದಲ್ಲಿ ಸೀಟುಗಳ ಹಂಚಿಕೆಗೆ ಮಾತುಕತೆ ಮಾಡುತ್ತಿದ್ದಾರೆ ಎಂದು ದೇವೇಗೌಡ ಹೇಳಿದರು.

ಕೇರಳದಲ್ಲಿ ಮೈತ್ರಿ ಇಲ್ಲ

ಕೇರಳದಲ್ಲಿ ಮೈತ್ರಿ ಇಲ್ಲ

ಕೇರಳದ ಕಮ್ಯೂನಿಸ್ಟ್ ಪಕ್ಷ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಅವರು ಸ್ವತಂತ್ರ್ಯವಾಗಿ ಚುನಾವಣೆ ಎದುರಿಸಲಿದ್ದಾರೆ. ಕೇರಳದಲ್ಲಿ ಜೆಡಿಎಸ್‌ ಪಕ್ಷಕ್ಕೆ ಒಂದು ಸೀಟನ್ನು ಕಮ್ಯೂನಿಸ್ಟ್ ಪಕ್ಷ ಬಿಟ್ಟುಕೊಡಲಿದೆ.

ಆಂದ್ರ-ತೆಲಂಗಾಣದಲ್ಲಿ ಸ್ವತಂತ್ರ ಸ್ಪರ್ಧೆ

ಆಂದ್ರ-ತೆಲಂಗಾಣದಲ್ಲಿ ಸ್ವತಂತ್ರ ಸ್ಪರ್ಧೆ

ಆಂದ್ರ ಪ್ರದೇಶದ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣದ ಚಂದ್ರಶೇಖರ ರಾವ್ ಅವರುಗಳು ಸ್ವತಂತ್ರ್ಯವಾಗಿ ಚುನಾವಣೆ ಎದುರಿಸುವ ನಿರ್ಧಾರದ ಪ್ರಕಟಿಸಿದ್ದಾರೆ ಅವರು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ.

ಆರ್‌ಜೆಡಿ-ಕಾಂಗ್ರೆಸ್ ಒಗ್ಗಟ್ಟು

ಆರ್‌ಜೆಡಿ-ಕಾಂಗ್ರೆಸ್ ಒಗ್ಗಟ್ಟು

ರಾಷ್ಟ್ರೀಯ ಕಾಂಗ್ರೆಸ್‌ ಪಾರ್ಟಿಯ ಶರದ್ ಪವಾರ್ ಅವರು ಕೂಡಾ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲದೆ ಚುನಾವಣೆಗೆ ಹೋಗುವುದಾಗಿ ಹೇಳಿದ್ದಾರೆ. ಆದರೆ ಬಿಹಾರದಲ್ಲಿ ಆರ್‌ಜೆಡಿಯು ಕಾಂಗ್ರೆಸ್‌ ಜೊತೆ ಚುನಾವಣೆ ಎದುರಿಸಲಿದೆ ಎಂದಿದ್ದಾರೆ. ಕೇಜ್ರಿವಾಲ್ ಏನು ಮಾಡುತ್ತಾರೋ ಗೊತ್ತಿಲ್ಲ ಎಂದು ದೇವೇಗೌಡರು ಹೇಳಿದರು.

ಆರ್‌ಜೆಡಿ-ನಿತೀಶ್ ಕುಮಾರ್‌ ಮತ್ತೆ ಮೈತ್ರಿ?

ಆರ್‌ಜೆಡಿ-ನಿತೀಶ್ ಕುಮಾರ್‌ ಮತ್ತೆ ಮೈತ್ರಿ?

ಬಿಜೆಪಿಯಿಂದ ಹೊರಬಂದಿರುವ ನಿತೀಶ್ ಕುಮಾರ್ ಮತ್ತೆ ಆರ್‌ಜೆಡಿಯೊಂದಿಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಆದರೆ ಆರ್‌ಜೆಡಿ ಮುಖ್ಯಸ್ಥ ತೇಜಸ್ ಯಾದವ್‌ಗೆ ಇದು ಇಷ್ಟವಿಲ್ಲ ಹಾಗಾಗಿ ಅವರು ಕಾಂಗ್ರೆಸ್ ಜೊತೆ ಹೋಗುವ ಸಾಧ್ಯತೆ ಇದೆ ಎಂದು ದೇವೇಗೌಡ ಹೇಳಿದ್ದಾರೆ.

ಬಿಹಾರದಲ್ಲಿ ಜೆಡಿಯು-ಬಿಜೆಪಿ ಬ್ರೇಕ್ ಅಪ್ ಸೂಚನೆ?!ಬಿಹಾರದಲ್ಲಿ ಜೆಡಿಯು-ಬಿಜೆಪಿ ಬ್ರೇಕ್ ಅಪ್ ಸೂಚನೆ?!

ಕೇಜ್ರಿವಾಲ್ ಕತೆ ಗೊತ್ತಿಲ್ಲ

ಕೇಜ್ರಿವಾಲ್ ಕತೆ ಗೊತ್ತಿಲ್ಲ

ದೆಹಲಿಯ ಕ್ರೇಜಿವಾಲ್ ಅವರು ಕಾಂಗ್ರೆಸ್ ಜೊತೆ ಮೈತ್ರಿ ಮಾಡುಕೊಳ್ಳುತ್ತಾರೊ ಇಲ್ಲವೋ ಗೊತ್ತಿಲ್ಲ ಅಲ್ಲದೆ ಮಮತಾ ಬ್ಯಾನರ್ಜಿ ಅವರ ನಿರ್ಣಯವೂ ಇನ್ನೂ ಅಂತಿಮವಾಗಿಲ್ಲ ಎಂದು ದೇವೇಗೌಡ ಅವರು ತೃತೀಯ ರಂಗದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಹೇಳಿದರು.

English summary
JDS president and MP Deve Gowda said that not all third front parties were ready to join hands with COngress party in Lok sabha elections. Kerala, Andhra Pradesh, Telangana, NCP, Trinamool congress were contesting independently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X