ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿಗೆ ಈಶಾನ್ಯ ಮಾರುತ ಪ್ರವೇಶ: ಕರ್ನಾಟಕದಲ್ಲೂ ಮಳೆ ಸಾಧ್ಯತೆ

|
Google Oneindia Kannada News

Recommended Video

ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಬಾರಿ ಮಳೆಯಾಗುವ ಸಾಧ್ಯತೆ | Oneindia Kannada

ಚೆನ್ನೈ, ನವೆಂಬರ್ 2: ಈಶಾನ್ಯ ಹಿಂಗಾರು ಮಾರುತ ಚುರುಕಾಗಿದ್ದು ಗುರುವಾರ ತಮಿಳುನಾಡನ್ನು ಪ್ರವೇಶಿಸಿದೆ, ಇದರೊಂದಿಗೆ ಆ ರಾಜ್ಯದಲ್ಲಿ ಅಧಿಕೃತವಾಗಿ ಮಳೆಗಾಲ ಆರಂಭವಾದಂತಾಗಿದೆ. ಮುಂದಿನ 24 ಗಂಟೆಗಳ ಒಳಗಾಗಿ ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಕರಾವಳಿ, ತಮಿಳುನಾಡು, ಪುದುಚೇರಿ, ದಕ್ಷಿಣ ತಮಿಳುನಾಡು, ದಕ್ಷಿಣ ಕೇರಳ ಹಾಗೂ ಆಂಧ್ರ ಪ್ರದೇಶದ ದಕ್ಷಿಣ ಕರಾವಳಿ ಭಾಗಗಳಿಗೆ ಮಳೆ ಮಾರುತಗಳ ಪ್ರದೇಶವಾಗಿದೆ. ಚಂಡಮಾರುತ ಗಾಳಿಯು ಸಮುದ್ರ ಮಟ್ಟದಿಂದ .3.1 ಹಾಗೂ 5.8 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಪಾಂಡಿಚೇರಿ, ನಾಗಪಟ್ಟಣಂ, ಪಂಬನ್ ನಲ್ಲಿ ಸೆ.ಮೀನಷ್ಟು ಮಳೆಯಾಗಿದೆ.

ದೆಹಲಿ, ಗುರ್ ಗಾಂವ್ ನಲ್ಲಿ ಭಾರೀ ಮಳೆ, ಕರ್ನಾಟಕದ ಕರಾವಳಿಯಲ್ಲಿ ಎಚ್ಚರ ದೆಹಲಿ, ಗುರ್ ಗಾಂವ್ ನಲ್ಲಿ ಭಾರೀ ಮಳೆ, ಕರ್ನಾಟಕದ ಕರಾವಳಿಯಲ್ಲಿ ಎಚ್ಚರ

ಶುಕ್ರವಾರ ಈ ಮಾರುತಗಳು ತಮಿಳುನಾಡು, ಕೇರಳ, ಆಂಧ್ರಪ್ರದೇಶದ ರಾಯಲಸೀಮಾ ಹಾಗೂ ದಕ್ಷಿಣ ಕರ್ನಾಟಕದ ಭಾಗಗಳನ್ನು ಆವರಿಸಿಕೊಳ್ಳಲಿದೆ ಎಂದು ಚಂಡಮಾರುತ ಮುನ್ಸೂಚನಾ ಕೇಂದ್ರದ ನಿರ್ದೇಶಕ ಎಸ್ ಬಾಲಚಂದ್ರನ್ ತಿಳಿಸಿದ್ದಾರೆ ನೈಋತ್ಯ ಮುಂಗಾರಿನಿಂದ ತಮಿಳುನಾಡಿನಲ್ಲಿ ಮಳೆಯಾಗುವುದು ಕಡಿಮೆಯೇ, ತಮಿಳುನಾಡು ಸಂಪೂರ್ಣವಾಗಿ ಈಶಾನ್ಯ ಮುಂಗಾರನ್ನು ಅವಲಂಬಿಸಿದೆ.

Northeast monsoon arrives in Tamil Nadu

ಮಳೆ ಹೊಡೆತಕ್ಕೆ ಪ್ರವಾಸಿಗರ ಸುಳಿವಿಲ್ಲದೆ ಪಾತಾಳ ತಲುಪಿದ ಪ್ರವಾಸೋದ್ಯಮ ಮಳೆ ಹೊಡೆತಕ್ಕೆ ಪ್ರವಾಸಿಗರ ಸುಳಿವಿಲ್ಲದೆ ಪಾತಾಳ ತಲುಪಿದ ಪ್ರವಾಸೋದ್ಯಮ

ಇದನ್ನು ಸಾಮಾನ್ಯವಾಗಿ ಹಿಂಗಾರು ಮಾರುತಗಳು ಎಂದು ಕರೆಯಲಾಗುತ್ತದೆ. ಹಾಗಾಗಿ ಈಶಾನ್ಯ ಮುಂಗಾರು ಪ್ರವೇಶದಿಂದ ಅಧಿಕೃತವಾಗಿ ಮುಂಗಾರು ಪ್ರವೇಶಿಸಿದಂತಾಗಿದೆ.

English summary
Northeast monsoon began in Tamil Nadu on Thursday, a couple of weeks later than its normal start every year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X