ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್; ದಾಖಲೆ ಬರೆದ ಈಶಾನ್ಯ ಗಡಿ ರೈಲ್ವೆ

|
Google Oneindia Kannada News

ನವದೆಹಲಿ, ಮೇ 06 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಮಾರ್ಚ್ 25ರಿಂದ ಏಪ್ರಿಲ್ 30ರ ತನಕ ಎನ್‌ಎಫ್‌ಆರ್ 622 ರೈಲುಗಳನ್ನು ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ಓಡಿಸಿದ್ದು, ದಾಖಲೆ ಬರೆದಿದೆ.

ಹೌದು, ಲಾಕ್ ಡೌನ್ ಅವಧಿಯಲ್ಲಿ ಈಶಾನ್ಯ ಗಡಿ ರೈಲ್ವೆ (ಎನ್‌ಎಫ್‌ಆರ್‌) ದಾಖಲೆ ಮಾಡಿದೆ. 622 ರೈಲುಗಳ ಮೂಲಕ 2 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಅಗತ್ಯ ವಸ್ತುಗಳನ್ನು ಈಶಾನ್ಯ ರಾಜ್ಯಗಳಿಗೆ ತಲುಪಿಸಿದೆ.

ವಲಸೆ ಕಾರ್ಮಿಕರಿಗಾಗಿ ಬೇಡಿಕೆ ಇಟ್ಟಿದ್ದ ರೈಲು ರದ್ದುಗೊಳಿಸಿದ ಕರ್ನಾಟಕ ವಲಸೆ ಕಾರ್ಮಿಕರಿಗಾಗಿ ಬೇಡಿಕೆ ಇಟ್ಟಿದ್ದ ರೈಲು ರದ್ದುಗೊಳಿಸಿದ ಕರ್ನಾಟಕ

"ಸಾಮಾನ್ಯ ಅವಧಿಯಲ್ಲಿ ಸಾಗಣೆ ಮಾಡುವುದಕ್ಕಿಂತ ಎರಡು ಪಟ್ಟು ಹೆಚ್ಚು ಸರಕುಗಳನ್ನು ಈ ಅವಧಿಯಲ್ಲಿ ಸಾಗಣೆ ಮಾಡಿದ್ದೇವೆ" ಎಂದು ಎನ್‌ಎಫ್‌ಆರ್ ಮಾಧ್ಯಮ ಸಂಯೋಜಕ ಸುಬಾನ್ ಚಾಂದಾ ಹೇಳಿದ್ದಾರೆ.

ಶ್ರಮಿಕ್ ವಿಶೇಷ ರೈಲಿನ ದರ; ರೈಲ್ವೆ ಇಲಾಖೆಯ ಸ್ಪಷ್ಟನೆ ಶ್ರಮಿಕ್ ವಿಶೇಷ ರೈಲಿನ ದರ; ರೈಲ್ವೆ ಇಲಾಖೆಯ ಸ್ಪಷ್ಟನೆ

Lock Down NFR Made Record Runs 622 Trains

ಈ ಅವಧಿಯಲ್ಲಿ ರೈಲಿನಲ್ಲಿ ಅಕ್ಕಿ, ಗೋಧಿ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ, ಪೆಟ್ರೋಲಿಯಂ ಉತ್ಪನ್ನ, ಈರುಳ್ಳಿ, ಆಲೂಗೆಡ್ಡೆ ಸೇರಿದಂತೆ ಅಗತ್ಯ ವಸ್ತುಗಳನ್ನು ರೈಲಿನಲ್ಲಿ ಸಾಗಣೆ ಮಾಡಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಿಪಿಇ ಕಿಟ್ ಉತ್ಪಾದನೆ ಆರಂಭಿಸಿದ ನೈಋತ್ಯ ರೈಲ್ವೆ ಪಿಪಿಇ ಕಿಟ್ ಉತ್ಪಾದನೆ ಆರಂಭಿಸಿದ ನೈಋತ್ಯ ರೈಲ್ವೆ

383 ರೈಲುಗಳಲ್ಲಿ ಅಸ್ಸಾಂ ರಾಜ್ಯವೊಂದಕ್ಕೆ ಅಗತ್ಯ ವಸ್ತುಗಳನ್ನು ತರಲಾಗಿದೆ. 63 ರೈಲುಗಳು ಈಶಾನ್ಯ ಭಾಗದ ಬೇರೆ-ಬೇರೆ ರಾಜ್ಯಗಳಿಗೆ ಸಂಚರಿಸಿವೆ. 176 ರೈಲುಗಳನ್ನು ಪಶ್ಚಿಮ ಬಂಗಾಳ ಮತ್ತು ಬಿಹಾರಕ್ಕೆ ಓಡಿಸಲಾಗಿದೆ ಎಂದು ವಿವರಣೆ ಕೊಟ್ಟಿದ್ದಾರೆ.

ಪ್ರಯಾಣಿಕ ರೈಲುಗಳ ಸಂಚಾರ ಇಲ್ಲದ ಕಾರಣ ಸರಕು ಸಾಗಣೆ ರೈಲಿಗೆ ಹೆಚ್ಚಿನ ಆದ್ಯತೆ ನೀಡಲಾಯಿತು. ರೈಲುಗಳ ಓಡಾಟ ಕಡಿಮೆ ಇದ್ದ ಅವಧಿಯಲ್ಲಿ ರಿಪೇರಿ ಕೆಲಸಗಳನ್ನು ಎನ್‌ಎಫ್‌ಆರ್ ಪೂರ್ಣಗೊಳಿಸಿದೆ.

ಭಾರತೀಯ ಆಹಾರ ನಿಗಮ (ಎಫ್‌ಸಿಐ) 142 ರೈಲುಗಳನ್ನು ಅಸ್ಸಾಂಗೆ ತಂದಿದೆ. 50 ರೈಲುಗಳನ್ನು ಇತರ ರಾಜ್ಯಗಳಿಗೆ ತರಲಾಗಿದೆ. ಬಿಹಾರಕ್ಕೆ 29, ಪಶ್ಚಿಮ ಬಂಗಾಳಕ್ಕೆ 42 ರೈಲುಗಳನ್ನು ಓಡಿಸಿದೆ.

ರೈಲಿನಲ್ಲಿ ಆಹಾರ ಪದಾರ್ಥಗಳನ್ನು ಸಾಗಣೆ ಮಾಡುವಾಗ ಸ್ವಚ್ಚತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಂತಾದ ಸುರಕ್ಷಾ ಕ್ರಮಗಳಿಗೆ ಆದ್ಯತೆ ನೀಡಲಾಗಿದೆ.

English summary
Northeast Frontier Railway (NFR) made record during the time of lock down. Between March 25 and April 30 NFR has run a 622 freight trains and transport more than two million metric tons of essential commodities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X