• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈಶಾನ್ಯ ರಾಜ್ಯಗಳಲ್ಲಿ ಕೇಸರಿ ರಂಗು ಚೆಲ್ಲಿದ 'ನಿಪುಣ' ಹಿಮಂತ

By Mahesh
|

ಬೆಂಗಳೂರು, ಮಾರ್ಚ್ 03: ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಕನಸು ಕಂಡಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ 'ರಾಜಕೀಯ ನಿಪುಣ' ಹಿಮಂತ ಬಿಸ್ವಾ ಶರ್ಮ ಭರ್ಜರಿ ಉಡುಗೊರೆ ನೀಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಎಲ್ಲರ ಕಣ್ಣು ಹಿಮಂತ ಅವರ ಮೇಲೆ ನೆಟ್ಟಿದೆ.

ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಸಿಕ್ಕಿಂ ನಂತರ ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾದಲ್ಲಿ ಕೇಸರಿ ರಂಗು ಚೆಲ್ಲುವ ಹೊಣೆ ಹೊತ್ತ ಹಿಮಂತ ಬಿಸ್ವಾ ಶರ್ಮ ಭರ್ಜರಿ ಫಲಿತಾಂಶ ತಂದು ಕೊಟ್ಟಿದ್ದಾರೆ.

ಮೇಘಾಲಯದಲ್ಲಿ ಕಾಂಗ್ರೆಸ್ ಬಿಟ್ಟರೆ, ಎನ್ ಪಿ ಪಿಗೆ ಸಕತ್ ಚಾನ್ಸ್

ತ್ರಿಪುರಾ ಹಾಗೂ ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಬಹುಮತ ಸಾಧಿಸಿದ್ದರೆ, ಮೇಘಾಲಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮತ್ತೊಮ್ಮೆ ಬರದಂತೆ ತಡೆಯುವ ಎಲ್ಲಾ ಪ್ರಯತ್ನ ನಡೆದಿದೆ.

ಈಶಾನ್ಯ ರಾಜ್ಯ ಚುನಾವಣೆ: ಟ್ವಿಟ್ಟರ್ ನಲ್ಲಿ ಕೃತಜ್ಞತೆ ಹೇಳಿದ ಮೋದಿ

ಬಿಜೆಪಿ 60 ಸ್ಥಾನಗಳ ಪೈಕಿ 47 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಕೇಂದ್ರದಲ್ಲಿ ಬಿಜೆಪಿ ಜತೆ ಮೈತ್ರಿ ಹೊಂದಿರುವ ಪಿ.ಎ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ 52 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿದಿತ್ತು.

ಪ್ರತ್ಯೇಕತಾವಾದಿಗಳ ಜತೆ ಕೈ ಜೋಡಿಸಿ ತ್ರಿಪುರಾದಲ್ಲಿ ಗೆದ್ದ ಬಿಜೆಪಿ

ಈಗ ಕಾಂಗ್ರೆಸ್ ವಿರುದ್ಧವಾಗಿ ಎನ್ ಪಿಪಿ, ಯುಡಿಪಿ, ಬಿಜೆಪಿ ಮೈತ್ರಿ ಸಾಧಿಸಿ ಸರ್ಕಾರ ರಚಿಸಲು ಮುಂದಾಗಿವೆ. ಆದರೆ, 60 ಸ್ಥಾನಗಳ ಪೈಕಿ ಸರ್ಕಾರ ರಚನೆಗೆ ಬೇಕಾದ 31 ಮ್ಯಾಜಿಕ್ ನಂಬರ್ ದಾಟಲು ಸಾಧ್ಯವಾಗುತ್ತಿಲ್ಲ.

ತ್ರಿಪುರಾದಲ್ಲಿ ಕೇಸರಿ ರಂಗು

ತ್ರಿಪುರಾದಲ್ಲಿ ಕೇಸರಿ ರಂಗು

ತ್ರಿಪುರಾದಲ್ಲಿ ಅಂತಿಮ ಫಲಿತಾಂಶ 60 : ಬಿಜೆಪಿ ಮೈತ್ರಿಕೂಟ 43, ಸಿಪಿಐ(ಎಂ) 16. ಈ ಮೂಲಕ 25ವರ್ಷಗಳ ನಂತರ ಕಮ್ಯೂನಿಸ್ಟ್ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಬಂದಿದೆ.

ಮತ ಸೆಳೆಯಲು ಕಾರಣವಾಗಿದ್ದು, ಆಸ್ಸಾಂ ಮಾದರಿಯಲ್ಲಿ (Indigenous Peoples Front of Tripura) ಐಪಿಎಫ್ ಟಿ ಪಕ್ಷದ ಜತೆ ಬಿಜೆಪಿ ಮೈತ್ರಿ ಸಾಧಿಸಿ ಸಿಪಿಐಎಂಗೆ ಹೊಡೆತ ನೀಡಿದರು. ಟಿಎಂಸಿ ಜತೆಗೂ ಬಿಜೆಪಿ ಕೈಜೋಡಿಸಿ ಕಾರ್ಯನಿರ್ವಹಿಸಲು ಅಮಿತ್ ಶಾ ಅವರ ನಿರ್ದೇಶನ ಕಾರಣವಾಯಿತು ಎಂದು ಹಿಮಂತ ಹೇಳಿದ್ದಾರೆ.

ಅಸ್ಸಾಂನ ಸಚಿವ ಹಿಮಂತ

ಅಸ್ಸಾಂನ ಸಚಿವ ಹಿಮಂತ

2015ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ ಹಿಮಂತ ಅವರಿಗೆ ಕಾಂಗ್ರೆಸ್ಸಿನ ಹಳೆ ತಂತ್ರಗಾರಿಕೆಯ ಸಂಪೂರ್ಣ ಪರಿಚಯವಿದ್ದು, ಇದರ ಲಾಭವನ್ನು ಅಮಿತ್ ಶಾ ಪಡೆದುಕೊಂಡಿದ್ದಾರೆ.

49ವರ್ಷ ವಯಸ್ಸಿನ ಹಿಮಂತ ಅವರು ಅಸ್ಸಾಂನಲ್ಲಿ ಆರೋಗ್ಯ, ಶಿಕ್ಷಣ ಹಾಗೂ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಾರಿ ಈಶಾನ್ಯ ರಾಜ್ಯಗಳಲ್ಲಿ ಸಂಘಟನೆಯ ಉಸ್ತುವಾರಿಯನ್ನು ವಹಿಸಿಕೊಂಡು ಯಶ ಸಾಧಿಸಿದ್ದಾರೆ.

ಕಾಂಗ್ರೆಸ್ ಮುಕ್ತ ಈಶಾನ್ಯ ರಾಜ್ಯ

ಕಾಂಗ್ರೆಸ್ ಮುಕ್ತ ಈಶಾನ್ಯ ರಾಜ್ಯ

ಕಾಂಗ್ರೆಸ್ ಮುಕ್ತ ಈಶಾನ್ಯ ರಾಜ್ಯ ಎಂಬ ಶಪಥ ಕೈಗೊಂಡ ಬಳಿಕ ಸುಮಾರು 250ಕ್ಕೂ ಅಧಿಕ ಪ್ರಚಾರ ಸಮಾವೇಶಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆಸ್ಸಾಂ ಮೂರು ಕಣಿವೆ, ಮೇಘಾಲಯದ ಮೂರು ಬೆಟ್ಟಗಳಲ್ಲಿನ ಮತದಾರರ ನಾಡಿ ಮಿಡಿತವನ್ನು ಸರಿಯಾಗಿ ಹಿಡಿದ ಹಿಮಂತ ಅವರಿಗೆ ಹೊಸದಾಗಿ ರಚನೆಯಾದ ಈಶಾನ್ಯ ರಾಜ್ಯಗಳ ಡೆಮಾಕ್ರಾಟಿಕ್ ಮೈತ್ರಿಕೂಟ( ಎನ್ ಇಡಿಎ) ಸಂಚಾಲಕರಾಗುವ ಹೊಣೆ ಸಿಕ್ಕಿತ್ತು.

ಕ್ರೀಡೆಗೆ ಮಹತ್ವ ನೀಡಿದ ಹಿಮಂತ

ಕ್ರೀಡೆಗೆ ಮಹತ್ವ ನೀಡಿದ ಹಿಮಂತ

ಈಶಾನ್ಯ ರಾಜ್ಯಗಳ ಕ್ರೀಡಾಪಟುಗಳಿಗೆ ಮಹತ್ವ ನೀಡುವ ಯೋಜನೆ ಹಾಕಿಕೊಂಡ ಹಿಮಂತ ಅವರಿಗೆ ಅಧಿಕಾರವೂ ಸಿಕ್ಕಿತು. ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್, ಬಾಡ್ಮಿಂಟನ್ ಅಸೋಸಿಯೇಷನ್ ಗಳ ಅಧ್ಯಕ್ಷರಾಗಿರುವ ಹಿಮಂತ ಅವರು ತ್ರಿಪುರಾದಲ್ಲಿ ಯುವ ಜನಾಂಗವನ್ನು ಟಾರ್ಗೆಟ್ ಮಾಡಿ, ಮೋದಿ ಅಲೆಯಲ್ಲಿ ತೇಲುವಂತೆ ಮಾಡಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Northeast Elections 2018 : Himanta Biswa Sarma, 49 year old Assam’s minister of health, education and finance and the party’s Tripura in-charge, has maintained a 100 percent strike rate in North East elections. BJP set to win Tripura, Nagaland and strikes good vote share in Meghalaya
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more