ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು: ಮುಗಿಲಲ್ಲಿ ಕಟ್ಟಿದ ಕಾರ್ಮೋಡ, ಇಳೆಯಲ್ಲಿ ಬಿಡದ ಮಳೆ

By Nayana
|
Google Oneindia Kannada News

ಬೆಂಗಳೂರು, ಜು.12: ಇನ್ನೇನು ಮಳೆಯ ಬಂದೇ ಬಿಡುತ್ತೇನೋ ಎಂದನಿಸುವ ದಟ್ಟ ಕಾರ್ಮೋಡಗಳ ಸಾಲು, ಕೆಳಗಡೆ ಮಳೆಗಾಗಿ ಕಾದು ಕುಳಿತಿರುವ ರೀತಿಯಲ್ಲಿ ಕಾಣುವ ನದಿ ಇದೆಲ್ಲವೂ ಸತಾರಾದ ಕೊಯ್ನಾ ಜಲಾಶಯದಲ್ಲಿ ಕಂಡು ಬಂದ ದೃಶ್ಯ.

ಮುಂಬೈ, ದೆಹಲಿ, ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಕಳೆದ ಎರಡು ವಾರಗಳಿಂದ ಬಿಡದೆ ಮಳೆ ಸುರಿಯುತ್ತಿದೆ, ಮೋಡಗಳು ಈ ಪ್ರದೇಶವನ್ನು ಬಿಟ್ಟು ಚಲಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಕತ್ತರಿಸಿದ ಮುಗಿಲು, ತತ್ತರಿಸಿದ ಮುಂಬೈ: ಚಿತ್ರದಲ್ಲಿ ನೋಡಿ ಕತ್ತರಿಸಿದ ಮುಗಿಲು, ತತ್ತರಿಸಿದ ಮುಂಬೈ: ಚಿತ್ರದಲ್ಲಿ ನೋಡಿ

ತಗ್ಗು ಪ್ರದೇಶಗಳಿಂದ ನೀರನ್ನು ಹೊರ ಹಾಕಲು ಭಾರಿ ಸಾಮರ್ಥ್ಯದ ಪಂಪ್‌ಗಳನ್ನು ಬಳಸಲಾಗುತ್ತಿದೆ, ಆದರೆ ಬಿಡುವು ಕೊಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೀರು ಕಡಿಮೆಯಾಗುತ್ತಿಲ್ಲ, ಭಾರಿ ಮಳೆಗೆ ಪಾಲಘರ್ ಜಿಲ್ಲೆ ತತ್ತರಿಸಿದೆ, ಜಿಲ್ಲೆಯ ಹಲವು ಗ್ರಾಮಗಳು ಎಲ್ಲಾ ರೀತಿಯ ಸಂಪರ್ಕ ಕಡಿದುಕೊಂಡು ದ್ವೀಪದಂತಾಗಿದೆ.

ಆ ಗ್ರಾಮಗಳಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆ ಆರಂಭವಾಗಿದೆ. ಆದರೆ ಮಳೆ ಮತ್ತಷ್ಟು ಜೋರಾದ ಕಾರಣ ಸ್ಥಗಿತಗೊಳಿಸಲಾಗಿದೆ. ರೈಲ್ವೆ ಹಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನೀರು ನಿಂತಿರುವ ಕಾರಣ ರೈಲು ಸಂಚಾರವೂ ಸ್ಥಗಿತಗೊಂಡಿದೆ.

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ

ಡೆಹ್ರಾಡೂನ್‌ನಲ್ಲಿ ಭಾರಿ ಮಳೆಗೆ ಕಟ್ಟಡಗಳು ಕುಸಿದಿದ್ದು ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಇನ್ನು ಕೆಲವು ಮಳೆಯನ್ನೂ ಲೆಕ್ಕಿಸದೆ ಸಮುದ್ರ ದಡದಲ್ಲಿ ಮಕ್ಕಳೊಂದಿಗೆ ಮಳೆಯಲ್ಲೇ ಆಟವಾಡಿ ಸಮಯ ಕಳೆದಿದ್ದಾರೆ.

ಮಳೆ ತರುವ ದಟ್ಟ ಕಾರ್ಮೋಡಗಳ ಸಾಲು ಸಾಲು ಹೇಗಿದೆ ನೋಡಿ

ಮಳೆ ತರುವ ದಟ್ಟ ಕಾರ್ಮೋಡಗಳ ಸಾಲು ಸಾಲು ಹೇಗಿದೆ ನೋಡಿ

ಇಳಿಗೆ ಮಳೆಯನ್ನು ತರಿಸುವ ಕಾರ್ಮೊಡಗಳ ದಟ್ಟ ಸಾಲುಗಳು ಸೆರೆಯಾಗಿದ್ದು ಸತಾರಾದಲ್ಲಿ, ಕೊಯ್ನಾ ಜಲಾಶಯದ ಬಳಿ ಕಪ್ಪು ಆಕಾಶ, ದಟ್ಟ ಮರಗಳ ಸಾಲು, ಮಧ್ಯೆ ಮಳೆಗಾಗಿ ಕಾಯುತ್ತಿರುವಂತೆ ಕಾಣುವ ನದಿ, ಜಲಾಶಯದ ನೀರಿನ ಸಾಮರ್ಥ್ಯದ ಅರ್ಧಭಾಗ ಈಗಾಗಲೇ ಭರ್ತಿಯಾಗಿದೆ.

ಸಮುದ್ರದ ಅಲೆಯೊಂದಿಗೆ ಒಂದು ಆಟ

ಸಮುದ್ರದ ಅಲೆಯೊಂದಿಗೆ ಒಂದು ಆಟ

ಬೆಂಬಿಡದೆ ಸುರಿಯುತ್ತಿರುವ ಭಾರಿ ಮಳೆಯಲ್ಲಿಯೂ ಮಗುವಿನೊಂದಿಗೆ ಪೋಷಕರು ಸಮುದ್ರದ ನೀರಿನೊಂದಿಗೆ ಆಟವಾಡಿ ಸಮಯ ಕಳೆದರು, ಭಾರಿ ಮಳೆಯ ಅಬ್ಬರದಿಂದಾಗಿ, ಮಕ್ಕಳಿಗೆ ಶಾಲೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ, ಮಕ್ಕಳ ಹಿತದೃಷ್ಟಿಯಿಂದ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದು ಈ ಮಕ್ಕಳ ಇನ್ನಷ್ಟು ಸಂತಸಕ್ಕೆ ಕಾರಣವಾಗಿದೆ.

ಡೆಹ್ರಾಡೂನ್‌ನಲ್ಲಿ ಭಾರಿ ಮಳೆ ಮನೆಗಳು ನೆಲಸಮ, 7 ಮಂದಿ ಸಾವು

ಡೆಹ್ರಾಡೂನ್‌ನಲ್ಲಿ ಭಾರಿ ಮಳೆ ಮನೆಗಳು ನೆಲಸಮ, 7 ಮಂದಿ ಸಾವು

ಡೆಹ್ರಾಡೂನ್‌ನಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ, ಅಲ್ಲಿನ ವಸಂತ ವಿಹಾರದಲ್ಲಿರುವ ಶಾಸ್ತ್ರಿ ನಗರದಲ್ಲಿ ಮನೆ ಕುಸಿದಿದ್ದ ನಾಲ್ವರು ಮೃತಪಟ್ಟಿದ್ದಾರೆ, ಮಳೆಯಿಂದ ಒಟ್ಟು 7 ಮಂದಿ ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿದೆ. ಬುಧವಾರ 87 ಮಿ.ಮೀ ಮಳೆಯಾಗಿದ್ದು, ಇನ್ನು 48 ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ವಿಶ್ವ ಜನಸಂಖ್ಯಾ ದಿನ ಘಾಜಿಯಾಬಾದ್‌ ರೈಲಿನಲ್ಲಿ ಕಂಡ ಪ್ರಯಾಣಿಕರು

ವಿಶ್ವ ಜನಸಂಖ್ಯಾ ದಿನ ಘಾಜಿಯಾಬಾದ್‌ ರೈಲಿನಲ್ಲಿ ಕಂಡ ಪ್ರಯಾಣಿಕರು

ಜು.11 ರಂದು ವಿಶ್ವ ಜನಸಂಖ್ಯಾ ದಿನ, ಅಂದು ಘಾಜಿಯಾಬಾದ್‌ನ ನೋಲಿ ರೈಲ್ವೆ ನಿಲ್ದಾಣದಲ್ಲಿ ರೈಲಿನೊಳಗೆ ಜಾಗವಿಲ್ಲದೆ ರೈಲಿನ ಮೇಲೂ ಕುಳಿತು ಪ್ರಯಾಣಿಸಿದ ದೃಶ್ಯ ಕಂಡುಬಂತು, ಈ ದೃಶ್ಯ ನೋಡಿದರೆ ದೇಶದಲ್ಲಿ ಆಗುತ್ತಿರುವ ಜನಸಂಖ್ಯಾ ಸ್ಫೋಟದ ಕುರಿತು ಎಲ್ಲರಿಗೂ ಮನದಟ್ಟಾಗುತ್ತದೆ.

ಜಮ್ಮು ಮತ್ತು ಕಾಶ್ಮೀರದಲ್ಲೂ ಮಳೆ

ಜಮ್ಮು ಮತ್ತು ಕಾಶ್ಮೀರದಲ್ಲೂ ಮಳೆ

ದೆಹಲಿ, ಮುಂಬೈ, ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದೆ, ಅಂತೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಕೂಡ ಮಳೆಯಾಗುತ್ತಿದೆ, ಸಾಧಾರಣ ಮಳೆಯಾಗುತ್ತಿರುವ ಜನರು ಸಂತಸದಿಂದಿದ್ದಾರೆ.

English summary
For the last one week, heavy rain hit normal life in Mumbai. Roads and railway tracks have been flooded and service was interrupted in various routes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X