ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿವಾಸಿ ಭಾರತೀಯರಿಗೆ ಅಂಚೆ ಮತದಾನದ ಹಕ್ಕು; ಪ್ರಸ್ತಾವಕ್ಕೆ ಒಪ್ಪಿಗೆ

|
Google Oneindia Kannada News

ನವದೆಹಲಿ, ಡಿಸೆಂಬರ್ 15: ಅನಿವಾಸಿ ಭಾರತೀಯರಿಗೆ ಅಂಚೆ ಮತದಾನದ ಹಕ್ಕು ನೀಡುವಂತೆ ಚುನಾವಣಾ ಆಯೋಗವು ಪ್ರಸ್ತಾವವನ್ನು ಸಲ್ಲಿಸಿದ್ದು, ಅಮೆರಿಕ, ಕೆನಡಾ, ನ್ಯೂಜಿಲೆಂಡ್, ಜಪಾನ್, ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಮತದಾರರಿಂದ ಮೊದಲು ಕಾರ್ಯಗತಗೊಳ್ಳಲಿರುವುದಾಗಿ ತಿಳಿದುಬಂದಿದೆ.

ಚುನಾವಣಾ ಆಯೋಗ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಕುರಿತು ಕಳೆದ ವಾರ ಸಭೆಯನ್ನು ಹಮ್ಮಿಕೊಂಡಿದ್ದು, ಅನಿವಾಸಿ ಭಾರತೀಯರ ಅಂಚೆ ಮತದಾನಕ್ಕೆ ಅನುಕೂಲವಾಗುವಂತೆ ವಿದೇಶಗಳಲ್ಲಿ ಕಾರ್ಯಾಚರಣೆಗೆ ಅಗತ್ಯವಿರುವ ಅಧಿಕಾರಿಗಳನ್ನು ಒದಗಿಸುವ ಷರತ್ತಿನ ಅನ್ವಯ ಒಪ್ಪಿಗೆ ನೀಡಿರುವುದಾಗಿ ತಿಳಿದುಬಂದಿದೆ.

ಕೊರೊನಾ ಭೀತಿ: ಮತದಾನ ನಿಯಮದಲ್ಲಿ ಮಹತ್ವದ ಬದಲಾವಣೆಕೊರೊನಾ ಭೀತಿ: ಮತದಾನ ನಿಯಮದಲ್ಲಿ ಮಹತ್ವದ ಬದಲಾವಣೆ

ಪ್ರಾಯೋಗಿಕ ಹಂತದಲ್ಲಿ ಯಾವ ದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಮೊದಲು ಅಂಚೆ ಮತದಾನದ ಹಕ್ಕು ನೀಡಬೇಕೆಂಬುದನ್ನು ತಜ್ಞರ ತಂಡವು ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಸೂಚಿಸಿದೆ. ಸದ್ಯಕ್ಕೆ ಕೊಲ್ಲಿ ರಾಷ್ಟಗಳು ಈ ಪ್ರಾಯೋಗಿಕ ಹಂತದಲ್ಲಿ ಹೊರಗುಳಿದಿವೆ.

 Non Resident Indians To Get Postal Voting Rights

ಪ್ರಜಾಪ್ರಭುತ್ವ ವ್ಯವಸ್ಥೆಯಿಲ್ಲದ ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರಿಗೆ, ಅಲ್ಲಿನ ಆಡಳಿತದ ಒಪ್ಪಿಗೆ ಪಡೆದ ನಂತರ ಮುಂದೆ ಮೀಸಲು ನೀಡಲಿರುವುದಾಗಿ ತಿಳಿಸಿದೆ.

ಚುನಾವಣಾ ಆಯೋಗವು ಅಂಚೆ ಮತದಾನಕ್ಕೆ ಒಬ್ಬರು ಅಧಿಕಾರಿಯನ್ನು ನಿಯೋಜಿಸಿ ಅವರು ಈ ಮತಪತ್ರಗಳನ್ನು ಡೌನ್ ಲೋಡ್ ಮಾಡಿ ಮತದಾರರಿಗೆ ತಲುಪಿಸುವ ಕೆಲಸವನ್ನು ಮಾಡಲಿರುವರು. ಆನಂತರ ಮತದಾರರು ತಮ್ಮ ಆಯ್ಕೆಯನ್ನು ನಮೂದಿಸಿ, ಅದರೊಂದಿಗೆ ಸ್ವಯಂ ಘೋಷಣೆಯ ಅರ್ಜಿಯನ್ನು ಆ ನಿಯೋಜಿತ ಅಧಿಕಾರಿಗಳಿಗೆ ಹಸ್ತಾಂತರಿಸಲಿರುವರು. ಅಂತಿಮವಾಗಿ ಚುನಾವಣಾ ಅಧಿಕಾರಿಗೆ ಈ ಅಂಚೆ ಮತದಾನದ ಪತ್ರಗಳನ್ನು ತಲುಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ಮುನ್ನವೂ ಚುನಾವಣಾ ಆಯೋಗ, ಚುನಾವಣೆಯ ಕಾರಣಕ್ಕಾಗಿ ವಿದೇಶಗಳಿಂದ ಭಾರತಕ್ಕೆ ಪ್ರಯಾಣಿಸುವುದು "ದುಬಾರಿ" ಎನಿಸಿದ್ದು, ಅಂಚೆ ಮತದಾನದ ಮೂಲಕ ಅನುಕೂಲ ಮಾಡಿಕೊಡುವಂತೆ ಅನಿವಾಸಿ ಭಾರತೀಯರು ಮನವಿ ಮಾಡಿರುವುದಾಗಿ ತಿಳಿಸಿತ್ತು.

ಆನಂತರ ಅನಿವಾಸಿ ಭಾರತೀಯರಿಗೆ ವಿದ್ಯುನ್ಮಾನ ಅಂಚೆ ಮತದಾನದ ವ್ಯವಸ್ಥೆ (ಇಟಿಪಿಬಿಎಸ್) (Electronically Transmitted Postal Ballot System-ETPBS) ಒದಗಿಸಲು ತಾಂತ್ರಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಸಿದ್ಧವಿದ್ದು, ಮುಂದಿನ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಹಾಗೂ ಪುದುಚೇರಿ ಚುನಾವಣೆಗಳಿಗೆ ಸಿದ್ಧವಾಗಬಹುದೆಂದು ತಿಳಿಸಿದೆ.

ಸದ್ಯಕ್ಕೆ ಇಟಿಪಿಬಿಎಸ್ ವ್ಯವಸ್ಥೆಯು ರಕ್ಷಣಾ ಸೇವೆಯಲ್ಲಿರುವವರಿಗೆ ಮಾತ್ರ ಲಭ್ಯವಿದೆ. ಈ ಸೌಲಭ್ಯವನ್ನು ಅನಿವಾಸಿ ಭಾರತೀಯರಿಗೂ ವಿಸ್ತರಿಸುವ ಪ್ರಸ್ತಾವವಿದ್ದು, ಚುನಾವಣಾ ನಿಯಮ 1961ರಲ್ಲಿ ತಿದ್ದುಪಡಿ ತರಬೇಕಿದೆ.

ಸದ್ಯದ ಪ್ರಸ್ತಾವದ ಪ್ರಕಾರ, ಅಂಚೆ ಮತದಾನ ಬಯಸುವ ಅನಿವಾಸಿ ಭಾರತೀಯರು ಚುನಾವಣೆ ನಡೆಯುವ ಐದು ದಿನದ ಮುನ್ನ ರಿಟರ್ನಿಂಗ್ ಆಫೀಸರ್ ಗೆ ಮಾಹಿತಿ ನೀಡಿದರೆ, ಅವರು ಅಂಚೆ ಮತದಾನಕ್ಕೆ ವ್ಯವಸ್ಥೆಯನ್ನು ಮಾಡಿಕೊಡಲಿರುವರು ಎಂದು ತಿಳಿದುಬಂದಿದೆ.

English summary
The Election Commission’s proposal to grant postal voting rights to Non-Resident Indians (NRIs) may get implemented first for voters based in the US, Canada, New Zealand, Japan, Australia, Germany, France and South Africa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X