ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್

|
Google Oneindia Kannada News

ಮುಂಬೈ, ಏಪ್ರಿಲ್, 18: ಸಾಲ ಮಾಡಿ ನಾಪತ್ತೆಯಾಗಿರುವ ವಿಜಯ್ ಮಲ್ಯ ವಿರುದ್ಧ ಮುಂಬೈನ ಸಾಲ ವಸೂಲಾತಿ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಜಾರಿ ನಿರ್ದೇಶನಾಲಯ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾಯಾಲಯ ಐಡಿಬಿಐಗೆ ಒಂಬೈನೂರು ಕೋಟಿ ವಂಚಿಸಿದ ಆರೋಪದ ಮೇಲೆ ಮಲ್ಯ ವಿರುದ್ಧ ಸೋಮವಾರ ಜಾಮೀನು ರಹಿತ ವಾರಂಟ್ ಹೊರಡಿಸಿದೆ.[ಮಲ್ಯ ಕೋಟಿ-ಕೋಟಿ ವೇತನ ಪಡೆಯುತ್ತಿದ್ದಾರೆಯೇ?]

mallya

17 ಬ್ಯಾಂಕ್ ಗಳಿಂದ ಮಲ್ಯ ಸುಮಾರು 9 ಸಾವಿರ ಕೋಟಿ ಸಾಲ ಮಾಡಿ ವಿದೇಶಕ್ಕೆ ಹಾರಿದ್ದಾರೆ. ವಾರಂಟ್ ನಿಂದ ಮಲ್ಯ ಕಾನೂನು ಕುಣಿಕೆಗೆ ಮತ್ತಷ್ಟು ಹತ್ತಿರವಾದಂತೆ ಆಗಿದೆ.ಐಡಿಬಿಐನಿಂದ ಪಡೆದುಕೊಂಡಿದ್ದ ಸಾಲದಲ್ಲಿ ಮಲ್ಯ ಅರ್ಧದಷ್ಟನ್ನು ವಿದೇಶದಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಕಿಂಗ್ ಫಿಶರ್ ಇದನ್ನು ನಿರಾಕರಿಸಿತ್ತು.

ಪಡೆದುಕೊಂಡ ಸಾಲವನ್ನು ಮಲ್ಯ ಅವರು ವೈಯಕ್ತಿಕ ಉಪಯೋಗಕ್ಕೆ ಬಳಸಿಕೊಂಡಿಲ್ಲ. ಸಾಲ ತೀರಿಕೆ ವಿಚಾರದ ಬಗ್ಗೆ ಮಲ್ಯ ಸ್ಪಷ್ಟನೆ ನೀಡಿದ್ದಾರೆ ಎಂಬುದು ಸಂಸ್ಥೆಯ ಹೇಳಿಕೆ.[ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]

ಒಟ್ಟಿನಲ್ಲಿ ಕಾಲಾವಕಾಶ ಕೇಳಿಕೊಳ್ಳುತ್ತಿದ್ದ ಮಲ್ಯ ಬತ್ತಳಿಕೆ ಬಾಣಗಳು ಖಾಲಿಯಾಗುತ್ತಿವೆ. ಈಗಾಗಲೇ ಪಾಸ್ ಪೋರ್ಟ್ ಅಮಾನತು ಮಾಡಲಾಗಿದೆ. ಇದೀಗ ಜಾಮೀನು ರಹಿತ ವಾರಂಟ್ ಬೇರೆ ಮಲ್ಯ ಅವರ ಬೆನ್ನು ಹತ್ತಿದೆ.

English summary
The Special Prevention of Money Laundering Act court has issued a non-bailable warrant against former UB group chairman, Vijay Mallya. The court was hearing a petition filed by the Enforcement Directorate seeking a non-bailable warrant to be issued against Mallya in a Rs 900 crore money laundering case
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X