• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂದು ಕಣ್ಣೀರುಕ್ಕಿಸುತ್ತಿವೆ, ಅಂದು ನಕ್ಕು ನಲಿಸಿದ್ದ ಸುಷ್ಮಾ ಟ್ವೀಟ್ಸ್

|
Google Oneindia Kannada News

ಸುಷ್ಮಾ ಸ್ವರಾಜ್ ಒಬ್ಬ ರಾಜಕಾರಣಿಯಾಗಿ, ಪ್ರಖರ ಹಿಂದುತ್ವವಾದಿಯಾಗಿ, ದೇಶಭಕ್ತಿಯ ಸಲೆಯಾಗಿ ಮಾತ್ರವಲ್ಲದೆ, ಅವರ ವಿರೋಧಿಗಳಿಗೂ ಹತ್ತಿರವಾಗುತ್ತಿದ್ದಿದ್ದು ತಮ್ಮ ಸಂದರ್ಭೋಚಿತ ಹಾಸ್ಯ ಪ್ರಜ್ಞೆಯಿಂದ! 2019 ರ ಲೋಕಸಭೆ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ ಎಂದು ಸುಷ್ಮಾ ಸ್ವರಾಜ್ ಸ್ವತಃ ಘೋಷಿಸಿದಾಗ ಸಂಸತ್ತಿನ ಗೋಡೆಗಳೂ ಬಿಕ್ಕಿರಲಿಕ್ಕೆ ಸಾಕು! ಎಂಥ ಪ್ರಕ್ಷುಬ್ಧ ಸನ್ನಿವೇಶವನ್ನು ತಮ್ಮ ಹಾಸ್ಯಪ್ರಜ್ಞೆಯ ಮೂಲಕ ತಿಳಿಗೊಳಿಸುತ್ತಿದ್ದ ನಾಯಕಿ ಈ ಬಾರಿ ಸಂಸತ್ತಿಗೆ ಪ್ರವೇಶಿಸದಿದ್ದಿದ್ದು ನಿರ್ವಾತ ಸೃಷ್ಟಿಸಿದ್ದು ಸತ್ಯ.

ತಮ್ಮ ಅವಧಿಯಲ್ಲಿ 'ಅತ್ಯಂತ ಹಾಸ್ಯ ಪ್ರಜ್ಞೆಯ ಸಚಿವೆ' ಎಂಬ ಹೆಗ್ಗಳಿಕೆ ಗಳಿಸಿದ್ದ ಸುಷ್ಮಾ ಸ್ವರಾಜ್ ಹೇಳಬೇಕಾಗಿದ್ದನ್ನು ಹಾಸ್ಯ ಮಿಶ್ರಿತ ಮೊನಚು ಭಾಷೆಯಲ್ಲಿ ಹೇಳುವುದರಲ್ಲಿ ನಿಸ್ಸೀಮರಾಗಿದ್ದವರು. ಸದಾ ನಗುಮುಖ, ಭಾರತೀಯ ಸಾಂಪ್ರದಾಯಿಕ ಮಹಿಳೆಯ ದ್ಯೋತಕ ಎಂಬಂತೆ ಒಪ್ಪವಾಗಿ ಸೀರೆಯುಟ್ಟು, ಹಣೆತುಂಬ ಸಿಂಧೂರ ಇಟ್ಟು, ಎಲ್ಲಕ್ಕಿಂತ ಮಿಗಿಲಾಗಿ ವಯಸ್ಸನ್ನೇ ನಾಚಿಸುವಂತೆ ಕಣ್ತುಂಬ ಹುಮ್ಮಸ್ಸಿನ ಕಾಂತಿ ಹೊತ್ತು, ಚೈತನ್ಯದ ಚಿಲುಮೆಯಾಗಿರುತ್ತಿದ್ದ ಸುಷ್ಮಾ ಸ್ವರಾಜ್ ಒಬ್ಬ ಆದರ್ಶ ರಾಜಕಾರಣಿಯಾಗಿ ಪ್ರತಿ ಭಾರತೀಯನ ಎದೆಯಲ್ಲಿ ಅಜರಾಮರರಾಗಿದ್ದಾರೆ.

ಚಿತ್ರಗಳಲ್ಲಿ ಸುಷ್ಮಾ ಸ್ವರಾಜ್ ಅಂತಿಮ ದರ್ಶನ

ಕಳೆದ ಐದು ವರ್ಷಗಳಲ್ಲಿ ವಿದೇಶಾಂಗ ಸಚಿವೆಯಾಗಿ ಅವರು ಬೆಳೆಸಿಕೊಂಡ ವರ್ಚಸ್ವೀ ವ್ಯಕ್ತಿತ್ವ ಎಂದಿಗೂ ಮರೆಯುವುದಕ್ಕೆ ಸಾಧ್ಯವಾಗದಂಥದ್ದು. ಸಾಮಾಜಿಕ ಜಾಲತಾಣವನ್ನು ಎಂಥ ಪ್ರಭಾವಶಾಲಿ ಸಾಧನವನ್ನಾಗಿ ಬಳಸಿಕೊಳ್ಳಬಹುದು ಎಂಬುದನ್ನು ಸಮರ್ಥವಾಗಿ ತೋರಿಸಿಕೊಟ್ಟಿದ್ದೇ ಸುಷ್ಮಾ ಸ್ವರಾಜ್.

Sush 'Maa' We Will Miss u ಸದಾನಂದ ಗೌಡ ಟ್ವೀಟ್Sush 'Maa' We Will Miss u ಸದಾನಂದ ಗೌಡ ಟ್ವೀಟ್

ಪ್ರತಿ ವ್ಯಕ್ತಿಗೂ ಧ್ವನಿ ಇದೆ ಎಂಬುದನ್ನು ತೋರಿಸಿಕೊಟ್ಟವರು. ಸಾಮಾನ್ಯ ಮನುಷ್ಯನೂ ಆಯಕಟ್ಟಿನ ಹುದ್ದೆಯ ಸಚಿವರೊಂದಿಗೆ ಮಾತನಾಡುವುದಕ್ಕೆ, ತನ್ನ ಅಹವಾಲನ್ನು ತೋಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟವರು ಸುಷ್ಮಾ ಮಾ. ಸುಷ್ಮಾ ಸ್ವರಾಜ್ ಅವರ ಟ್ವಿಟ್ಟರ್ ಖಾತೆಯನ್ನು ಅವರು ನಿರ್ವಹಿಸುವುದಿಲ್ಲ, ಯಾರೋ ಅಧಿಕಾರಿ ನಿರ್ವಹಿಸುತ್ತಾರೆ ಎಂದಿದ್ದ ವ್ಯಕ್ತಿಯೊಬ್ಬರಿಗೆ "ಇದು ನಾನೇ, ನನ್ನ ದೆವ್ವವಲ್ಲ" ಎಂದೊಮ್ಮೆ ಸುಷ್ಮಾ ಉತ್ತರಿಸಿದ್ದರು! ಅವರ ಇಂಥ ಹತ್ತಾರು ಟ್ವೀಟ್ ಗಳು ಟ್ವೀಟ್ಟರ್ ನಲ್ಲಿ ಅವರ ಫಾಲೋವರ್ ಗಳ ಸಂಖ್ಯೆಯನ್ನು 13.2 ಮಿಲಿಯನ್ ಗೆ ಏರಿಸಿವೆ. ಆದರೆ ಸುಷ್ಮಾ ಸ್ವರಾಜ್ ಅವರಾಗಿಯೇ ಯಾರನ್ನೂ ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿರಲಿಲ್ಲ. ಘಟಾನುಘಟಿಗಳು ಅವರಾಗಿಯೇ ಸುಷ್ಮಾ ಅವರನ್ನು ಫಾಲೋ ಮಾಡುತ್ತಿದ್ದರು. ಅದು ಸುಷ್ಮಾ ಮಾ ತಾಕತ್ತು!

ನೀವು ಮಂಗಳಗ್ರಹದಲ್ಲಿದ್ದರೂ...

ನೀವು ಮಂಗಳಗ್ರಹದಲ್ಲಿದ್ದರೂ...

ವ್ಯಕ್ತಿಯೊಬ್ಬರು ಬೇಕೆಂದೇ ಸುಷ್ಮಾ ಅವರಲ್ಲಿ, "ನಾನು ಮಂಗಳಗ್ರಹದಲ್ಲಿ ಸಿಲುಕಿಕೊಂಡಿದ್ದೇನೆ. ದಯವಿಟ್ಟು ನನ್ನನ್ನು ಕಾಪಾಡಿ" ಎಂದು ಸಂದೇಶ ಕಳಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸುಷ್ಮಾ, "ನೀವು ಮಂಗಳಗ್ರಹದಲ್ಲಿದ್ದರೂ ನಮ್ಮ ಭಾರತೀಯ ರಾಯಭಾರಿ ಸಿಬ್ಬಂದಿ ನಿಮ್ಮ ನೆರವಿಗೆ ಅಲ್ಲಿಗೇ ಧಾವಿಸುತ್ತಾರೆ" ಎಂದು ಉತ್ತರ ನೀಡಿದ್ದರು!

ಕೊಟ್ಟ ಮಾತು ಮರೆತು ಹೋದೆಯಲ್ಲಾ: ಸ್ಮೃತಿ ಇರಾನಿ ಭಾವುಕ ಟ್ವೀಟ್ಕೊಟ್ಟ ಮಾತು ಮರೆತು ಹೋದೆಯಲ್ಲಾ: ಸ್ಮೃತಿ ಇರಾನಿ ಭಾವುಕ ಟ್ವೀಟ್

ರೆಫ್ರಿಜಿರೇಟರ್ ರಿಪೇರಿ!

ರೆಫ್ರಿಜಿರೇಟರ್ ರಿಪೇರಿ!

ವ್ಯಕ್ತಿಯೊಬ್ಬರು ಸುಷ್ಮಾ ಸ್ವರಾಜ್ ಅವರ ಕಾಲೆಳೆಯುವ ಸಲುವಾಗಿ, "ಮೇಡಂ, ದಯವಿಟ್ಟು ಕೆಟ್ಟು ಹೋಗಿರುವ ನಮ್ಮ ರೆಫ್ರಿಜಿರೇಟರ್ ರಿಪೇರಿಗೆ ನೆರವು ನೀಡುತ್ತೀರಾ?" ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸುಷ್ಮಾ, "ಬ್ರದರ್ ರೆಫ್ರಿಜಿರೇಟರ್ ವಿಷಯದಲ್ಲಿ ನಾನು ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ಏಕೆಂದರೆ ಕಷ್ಟದಲ್ಲಿರುವ ಮನುಷ್ಯರಿಗೆ ನೆರವು ನೀಡುವಲ್ಲಿ ನಾನು ಬ್ಯುಸಿಯಾಗಿದ್ದೇನೆ" ಎಂದಿದ್ದರು!

ಸುಷ್ಮಾ ಸ್ವರಾಜ್ ನೆನಪು ಹಸಿರಾಗಿಸುವ ಸುಂದರ ಚಿತ್ರಗಳು

ನನಗೆ ಎಲ್ಲ ರೀತಿಯ ಇಂಗ್ಲಿಷ್ ಅರ್ಥವಾಗುತ್ತೆ!

ನನಗೆ ಎಲ್ಲ ರೀತಿಯ ಇಂಗ್ಲಿಷ್ ಅರ್ಥವಾಗುತ್ತೆ!

ಮಲೇಶಿಯದಲ್ಲಿದ್ದ ತನ್ನ ಸ್ನೇಹಿತನಿಗೆ ಯಾವುದೋ ಸಮಸ್ಯೆ ಉಂಟಾದಾಗ ಸಹಾಯ ಕೇಳಲು ವ್ಯಕ್ತಿಯೊಬ್ಬರು ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿ ಮನವಿ ಮಾಡಿದ್ದರು. ಆ ಟ್ವೀಟ್ ನಲ್ಲಿ ಕೆಲವು ವ್ಯಾಕರಣ ದೋಷಗಳಿದ್ದವು. ಅದನ್ನು ಕಂಡ ಇನ್ನೋರ್ವ ವ್ಯಕ್ತಿ, 'ಇಂಗ್ಲಿಷ್ ಬಾರದಿದ್ದರೆ ಹಿಂದಿ ಅಥವಾ ಪಂಜಾಬಿಯಲ್ಲಿ ಟ್ವೀಟ್ ಮಾಡಿ' ಎಂದು ಕಮೆಂಟ್ ಹಾಕಿದ್ದರು. ಆ ಟ್ವೀಟ್ ಗೆ ಉತ್ತರಿಸಿದ್ದ ಸುಷ್ಮಾ, "ಸಮಸ್ಯೆಯಿಲ್ಲ. ನಾನು ವಿದೇಶಾಂಗ ಸಚಿವೆಯಾದ ನಂತರ ಎಲ್ಲ ರೀತಿಯ ಇಂಗ್ಲಿಷ್ ಉಚ್ಚರಣೆ, ವ್ಯಾಕರಣವನ್ನೂ ಅರ್ಥಮಾಡಿಕೊಳ್ಳಬಲ್ಲೆ" ಎಂದಿದ್ದರು!

ನಾನು ಚೌಕಿದಾರಳೇ!

ನಾನು ಚೌಕಿದಾರಳೇ!

ಕಳೆದ ಲೋಕಸಭೆ ಚುನಾವಣೆಯಲ್ಲಿ 'ಚೌಕಿದಾರ್ ಚೋರ್ ಹೈ' ಎಂದ ರಾಹುಲ್ ಗಾಂಧಿ ಅವರಿಗೆ ಮುಖಭಂಗವಾಗುವಂತೆ ಬಿಜೆಪಿಯ ಎಲ್ಲಾ ನಾಯಕರೂ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಹೆಸರಿನ ಹಿಂದೆ 'ಚೌಕಿದಾರ್' ಎಂಬ ಪದವನ್ನು ಬಳಸಿದ್ದರು. ಈ ಬಗ್ಗೆ ವ್ಯಕ್ತಿಯೊಬ್ಬರು ಸುಷ್ಮಾ ಅವರಲ್ಲಿ, "ಮೇಡಂ ನಾವು ನಿಮ್ಮನ್ನು ವಿದೇಶಾಂಗ ಸಚಿವೆ ಎಂದುಕೊಂಡಿದ್ದೆವು. ಬಿಜೆಪಿಯಲ್ಲಿರುವ ಸೂಕ್ಷ್ಮ ಸಂವೇದನೆಯ ವ್ಯಕ್ತಿ ನೀವು ಮಾತ್ರ. ಆದರೆ ನೀವ್ಯಾಕೆ ನಿಮ್ಮನ್ನು ಚೌಕಿದಾರ್ ಎಂದು ಕರೆದುಕೊಳ್ಳುತ್ತಿದ್ದೀರಿ?" ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ್ದ ಸುಷ್ಮಾ, "ಯಾಕಂದ್ರೆ ನಾನು ಭಾರತೀಯ ಹಿತಾಸಕ್ತಿ ಮತ್ತು ವಿದೇಶದಲ್ಲಿರುವ ಭಾರತೀಯರ ಚೌಕಿದಾರಿಕೆಯನ್ನು ಮಾಡುತ್ತಿದ್ದೇನೆ" ಎಂದಿದ್ದರು!

ಮಾಧ್ಯಮಕ್ಕೆ ಬಿಸಿಮುಟ್ಟಿಸಿದ್ದ ಸುಷ್ಮ ಾ!

ಮಾಧ್ಯಮಕ್ಕೆ ಬಿಸಿಮುಟ್ಟಿಸಿದ್ದ ಸುಷ್ಮ ಾ!

2016 ರಲ್ಲಿ 19 ಕೌನ್ಸಿಲ್ ಸಚಿವರ ಪ್ರಮಾಣವಚನ ಸ್ವೀಕಾರಕ್ಕಾಗಿ ರಾಷ್ಟ್ರಪತಿ ಭವನಕ್ಕೆ ಬರಲು ಸುಷ್ಮಾ ಅವರಿಗೆ ವೈಯಕ್ತಿಕ ಕಾರಣದಿಂದ ಸಾಧ್ಯವಾಗಿರಲಿಲ್ಲ. ಆದ್ದರಿಂದ ಅಂದೇ ಅವರು ಮಾಧ್ಯಮಗಳಿಗೆ ಟ್ವೀಟ್ ಮೂಲಕ ಟಾಂಗ್ ನೀಡಿದ್ದರು. "ಮಾಧ್ಯಮದವರೇ-ದಯವಿಟ್ಟು'ಸುಷ್ಮಾ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರು!' ಎಂಬ ಹೆಡ್ ಲೈನ್ ಅನ್ನು ಬಳಸಬೇಡಿ! " ಎಂದಿದ್ದರು.

English summary
Late Mrs Sushma Swaraj, Former External affairs minister had an unbeatable sense of humor. These tweets are witness for that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X