ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಘುರಾಮ್ ರಾಜನ್ ಗೆ ಕೈತಪ್ಪಿದ ಅರ್ಥಶಾಸ್ತ್ರ ನೊಬೆಲ್

By Sachhidananda Acharya
|
Google Oneindia Kannada News

ಸ್ವೀಡನ್, ಅಕ್ಟೋಬರ್ 9: ರಿಸರ್ಬ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ್ ರಾಜನ್ ಗೆ ನೊಬೆಲ್ ಪ್ರಶಸ್ತಿ ಕೈತಪ್ಪಿದೆ.

ಅರ್ಥಶಾಸ್ತ್ರದ ನೊಬೆಲ್‌ ರೇಸಿನಲ್ಲಿ ರಘುರಾಮ್ ರಾಜನ್ ಮುಂದು!ಅರ್ಥಶಾಸ್ತ್ರದ ನೊಬೆಲ್‌ ರೇಸಿನಲ್ಲಿ ರಘುರಾಮ್ ರಾಜನ್ ಮುಂದು!

ಇಂದು ಪ್ರಕರಣಗೊಂಡ ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಅಮೆರಿಕಾದ ಹಣಕಾಸು ತಜ್ಞ ಹಾಗೂ ಶಿಕಾಗೋ ವಿವಿ ಪ್ರಾಧ್ಯಾಪಕ ರಿಚರ್ಡ್ ಥಾಲರ್ ಪಾಲಾಗಿದೆ.

Nobel Prize in Economic Sciences missed for Raghuram Rajan

ಬಿಹೇವಿಯರಲ್ ಎಕನಾಮಿಕ್ಸ್ ಗೆ ನೀಡಿದ ಕೊಡುಗೆಗಾಗಿ ಅವರಿಗೆ ಈ ಪ್ರಶಸ್ತಿ ಸಂದಿದೆ.

ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆಯಬಹುದಾದ ಸಾಂಭಾವ್ಯರ ಪಟ್ಟಿಯಲ್ಲಿ ವಿಶ್ವದ ಖ್ಯಾತ ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ಸ್ಥಾನ ಪಡೆದಿದ್ದರು. ಆದರೆ ಅವರಿಗೆ ಈ ಪ್ರಶಸ್ತಿ ಕೈ ತಪ್ಪಿದೆ.

ಕ್ಲಾರಿವೇಟ್ಸ್ ಅನಾಲಿಟಿಕ್ಸ್ ಸಂಸ್ಥೆಯು ಸಂಶೋಧನಾ ಉಲ್ಲೇಖಗಳ ಆಧಾರದಲ್ಲಿ ಪ್ರಶಸ್ತಿಗೆ ಅರ್ಹವಾದ ವ್ಯಕ್ತಿಗಳ ಪಟ್ಟಿಯನ್ನು ಸಿದ್ಧಪಡಿಸಿತ್ತು. ಇದರಲ್ಲಿ ರಘುರಾಮ್ ರಾಜನ್ ಸ್ಥಾನ ಪಡೆದಿದ್ದರು.ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಅತ್ಯಂತ ಕಿರಿಯ ಮುಖ್ಯ ಅರ್ಥಶಾಸ್ತ್ರಜ್ಞ ಎಂಬ ಹಿರಿಮೆಗೆ ರಘುರಾಮ್ ಪಾತ್ರರಾಗಿದ್ದರು.

ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಿಸುವ ಬಗ್ಗೆ ಮುಂಚಿತವಾಗಿ ಎಚ್ಚರಿಕೆಯನ್ನೂ ರಘುರಾಮ್ ರಾಜನ್ ನೀಡಿದ್ದರು. ಹೀಗಾಗಿ ಅವರಿಗೆ ನೊಬೆಲ್ ಪಾರಿತೋಷಕ ಸಿಗಬಹುದು ಎಂದುಕೊಳ್ಳಲಾಗಿತ್ತು. ಆದರೆ ಅದೀಗ ಹುಸಿಯಾಗಿದೆ.

English summary
U.S. economist Richard Thaler won the 2017 Nobel Economics Prize for his contributions in the field of behavioral economics. Former RBI governer Raghuram Rajan misses the award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X