ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೊಬೆಲ್ ಪಾರಿತೋಷಕ ವಿಜೇತ ಕೈಲಾಶ್ ಸತ್ಯಾರ್ಥಿ

By Mahesh
|
Google Oneindia Kannada News

ಶಾಂತಿ ಪ್ರತಿಪಾದಕ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ತತ್ತ್ವ ಚಿಂತನೆಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಕೈಲಾಶ್ ಸತ್ಯಾರ್ಥಿ ಈಗ ವಿಶ್ವದ ಗಮನ ಸೆಳೆದಿದ್ದಾರೆ. ಸಾವಿರಾರು ಬಾಲ ಕಾರ್ಮಿಕರ ದಾಸ್ಯಕ್ಕೆ ಮುಕ್ತಿ ಹಾಡಿದ ಕೈಲಾಶ್ ಅವರಿಗೆ 2014ನೇ ಸಾಲಿನ ನೊಬೆಲ್ ಶಾಂತಿ ಪಾರಿತೋಷಕ ಲಭಿಸಿದೆ.

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ನಡೆಸುತ್ತಾ ಬಂದಿರುವ ಪಾಕಿಸ್ತಾನದ ಮಲಾಲ ಯೂಸಫಾಜೆ ಅವರೊಟ್ಟಿಗೆ ಕೈಲಾಶ್ ಅವರಿಗೂ ನೊಬೆಲ್ ಸಂಸ್ಥೆಯಿಂದ ಉನ್ನತ ಗೌರವಾದರ ಗಳಿಸಿದ್ದಾರೆ.

ಕೈಲಾಶ್ ಅವರ ಬಚ್ ಪನ್ ಬಚಾವೋ ಆಂದೋಲನ್ ಸಂಸ್ಥೆ 1980ರಿಂದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ,ಮಕ್ಕಳಿಗೆ ಶಿಕ್ಷಣ ಹಕ್ಕು, ದಾಸ್ಯ ವಿಮೋಚನೆ ಮುಂತಾದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಇಲ್ಲಿವರೆಗೂ ಸರಿ ಸುಮಾರು 80,000ಕ್ಕೂ ಅಧಿಕ ಮಕ್ಕಳನ್ನು ಜೀತ ಪದ್ಧತಿಯಿಂದ ಮುಕ್ತಗೊಳಿಸಿ ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ. [ಮಲಾಲಾ, ಸತ್ಯಾರ್ಥಿಗೆ ನೊಬೆಲ್ ಶಾಂತಿ ಪುರಸ್ಕಾರ ]

ಸರ್ವ ಶಿಕ್ಷ ಅಭಿಯಾನವನ್ನು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕೈಲಾಶ್ ಸಮರ್ಥವಾಗಿ ಬಳಸಿಕೊಂಡರು. ಬಾಲ ಕಾರ್ಮಿಕ ಪದ್ಧತಿ ಮಾನವ ಹಕ್ಕುಗಳ ಉಲ್ಲಂಘನೆ ಎಂಬುದನ್ನು ವಿವಿಧ ರೀತಿಯಲ್ಲಿ ಸಮಾಜಕ್ಕೆ ಮನವರಿಕೆ ಮಾಡಿಕೊಟ್ಟರು.

ಮಕ್ಕಳನ್ನು ಕಾರ್ಮಿಕರಾಗಿ ಬಳಸಿಕೊಂಡು ಉತ್ಪಾದಿಸಲಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದರು. ಇದಕ್ಕಾಗಿ rug mark(ನಂತರ goldweave) ಎಂಬ ಅಭಿಯಾನ ಆರಂಭಿಸಿದರು. ಇದು ದೇಶ ವಿದೇಶಗಳಲ್ಲೂ ಪರಿಣಾಮಕಾರಿ ಕೆಲಸ ಮಾಡಿತು. ಬಾಲ ಕಾರ್ಮಿಕರು ಉತ್ಪಾದಿಸಿದ ಉತ್ಪನ್ನ ಬಳಕೆಗೆ ಗ್ರಾಹಕರು ಹಿಂದೇಟು ಹಾಕಿದರು.

ಮಕ್ಕಳ ಕಳ್ಳಸಾಗಾಣಿಕೆ ಹೆಚ್ಚಾಗುತ್ತಿದೆ : ಬಾಲಕಾರ್ಮಿಕ ಪದ್ಧತಿಗಿಂತ ಭಾರತದಲ್ಲಿ ಈಗ ಮಕ್ಕಳ ಕಳ್ಳಸಾಗಾಣಿಕೆ ಹೆಚ್ಚಾಗುತ್ತಿದೆ. ದೆಹಲಿ, ಮುಂಬೈ, ಕೋಲ್ಕತ್ತಾ ಮಹಾನಗರಿಗಳಲ್ಲಿ ದುಷ್ಕೃತ್ಯಗಳು ಹೆಚ್ಚಿವೆ. ಸುಮಾರು 50 ಮಿಲಿಯನ್ ಬಾಲ ಕಾರ್ಮಿಕರನ್ನು ಗುರುತಿಸಬಹುದಾದರೆ ಇವರಲ್ಲಿ 10 ಮಿಲಿಯನ್ ಗೂ ಅಧಿಕ ಮಕ್ಕಳು ಕಳ್ಳಸಾಗಾಣಿಕೆ ಮೂಲಕ ದೇಶದೊಳಗೆ ಮಾರಾಟವಾಗಿದ್ದಾರೆ ಎಂಬುದು ಆತಂಕಕಾರಿ.

ಕಳ್ಳ ಸಾಗಾಣಿಕೆ ಕೂಪಕ್ಕೆ ಸಿಲುಕಿದ ಮಕ್ಕಳನ್ನು ಜೀತ ಪದ್ಧತಿ, ಕೂಲಿ ಕಾರ್ಮಿಕರು, ವೇಶ್ಯಾವಾಟಿಕೆ, ಭಿಕ್ಷಾಟನೆ, ಗಾರ್ಮೆಂಟ್ಸ್ ಉದ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ. [ಬಾಲ ಕಾರ್ಮಿಕರ ಉಳಿಸಲು ಇ ಪತ್ರಿಕೆ]

ಸರಿಯಾದ ಕಾನೂನಿಲ್ಲ: ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ, ಮಾನವ ಕಳ್ಳ ಸಾಗಾಣಿಕೆ ನಿರ್ಮೂಲನೆ ಸರಿಯಾದ ಕಾನೂನು ನಮ್ಮಲ್ಲಿಲ್ಲ. ಇರುವ ಕಾನೂನು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಕೈಲಾಶ್ ಅವರು ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯಲ್ಲಿ ಪತ್ನಿ, ಮಗಳು, ಮಗ, ಸೊಸೆ ಹಾಗೂ ಎನ್ ಜಿಒನ ಸದಸ್ಯರೊಂದಿಗೆ ಕೈಲಾಶ್ ನೆಲೆಸಿದ್ದು, ನೊಬೆಲ್ ಪ್ರಶಸ್ತಿ ನನಗೊಬ್ಬನಿಗೆ ಸಂದ ಗೌರವವಲ್ಲ ಮಕ್ಕಳ ಹಕ್ಕು ಹೋರಾಟಗಾರರೆಲ್ಲರಿಗೂ ಸಂದ ಗೆಲುವು ಎಂದಿದ್ದಾರೆ.

Nobel laureate of India Kailash Satyarthi

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ, ಬಾಲ ವಿವಾಹ ತಡೆಗಟ್ಟಲು, ಮಕ್ಕಳ ಶಿಕ್ಷಣ ಹಕ್ಕು ದೊರೆಕಿಸಿಕೊಡಲು ಕೈಲಾಶ್ ಅವರ ಸಂಸ್ಥೆ ನಿರಂತರವಾಗಿ ದುಡಿಯುತ್ತಾ ಬಂದಿದೆ. ದೇಶದ 11 ರಾಜ್ಯಗಳಲ್ಲಿನ 365 ಗ್ರಾಮಗಳಲ್ಲಿ ಮಕ್ಕಳ ಬಾಲ್ಯ, ಬದುಕು ಹಸನುಗೊಳಿಸಿದ್ದಾರೆ.

ವೈಯಕ್ತಿಕ ವಿವರ:
* 1954ರಲ್ಲಿ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಜನನ.
* ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಹಾಗೂ ಹೈ ವೋಲ್ಟೇಜ್ ಇಂಜಿನಿಯರಿಂಗ್ ನಲ್ಲಿ ಪಿಜಿ ಡಿಪ್ಲೋಮಾ.
* ಭೋಪಾಲ್ ನಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭ ನಂತರ ಸಾಮಾಜಿಕ ಕಾರ್ಯಕರ್ತರಾಗಿ ಬದಲಾದರು.
* 1980ರಲ್ಲಿ ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ ಬಚ್ಪನ್ ಬಚಾವೋ ಆಂದೋಲನ ಎನ್ ಜಿಒ ಸ್ಥಾಪನೆ ಬಾಲಕಾರ್ಮಿಕರ ಮುಕ್ತಿಗೆ ಪಣ.
* 1988ರಲ್ಲಿ ಬಾಲಕಾರ್ಮಿಕರ ಮುಕ್ತಿಗಾಗಿ ಕೈಲಾಶ್ ನೇತೃತ್ವದಲ್ಲಿ ಜಾಗತಿಕ ಮೆರವಣಿಗೆ 103 ದೇಶಗಳ 7.2 ಮಿಲಿಯನ್ ಜನ 20,000 ನಾಗರಿಕ ಸಂಘಟನೆಗಳು ಭಾಗವಹಿಸಿದ್ದವು.
* 1994ರಲ್ಲಿ ರಗ್ ಮಾರ್ಗ್ ಸ್ಥಾಪನೆ. ಬಾಲ ಕಾರ್ಮಿಕ ಮುಕ್ತ ಉತ್ಪನ್ನಗಳ ಬಳಕೆಗೆ ಕರೆ.
* ಬಾಲ ಮಿತ್ರ ಗ್ರಾಮ, ಬಾಲ ಗ್ರಾಮ ಪಂಚಾಯಿತಿ ಸ್ಥಾಪನೆ

English summary
Kailash Satyarthi Nobel Peace Prize 2014 winner who has been relentless crusader of child rights. His New Delhi based Bachpan Bachao Andolan is fighting against child labour Since 1980.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X