ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂದು ಕೊರೊನಾ ಬಗ್ಗೆ ಎಚ್ಚರಿಸಿದ್ದ ನೊಬೆಲ್ ಪಡೆದ ವಿಜ್ಞಾನಿ ಇಂದು ಮತ್ತೆ ನುಡಿದ ಭವಿಷ್ಯ

|
Google Oneindia Kannada News

2013ರಲ್ಲಿ ರಸಾಯನ ಶಾಸ್ತ್ರದಲ್ಲಿ (ಕೆಮಿಸ್ಟ್ರಿ) ನೊಬೆಲ್ ಪ್ರಶಸ್ತಿ ಪಡೆದಿದ್ದ ಅಮೆರಿಕ - ಬ್ರಿಟಿಷ್ ಮೂಲದ ಮೈಕಲ್ ಲೆವಿಟ್, ಚೀನಾ ದೇಶಕ್ಕೆ ಕೂರೊನಾ ಎನ್ನುವ ವೈರಾಣು ದಾಳಿ ಮಾಡುವ ಮುನ್ನವೇ ವಿಶ್ವಕ್ಕೆ ಎಚ್ಚರಿಕೆ ನೀಡಿದ್ದರು.

Recommended Video

2 people disobeying home quarentine in Chitradurga | Oneindia Kannada

ಆದರೆ, ಲೆವಿಟ್ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದ ಜಗತ್ತು ಇಂದು ಈ ಮಾರಣಾಂತಿಕ ವೈರಸ್ ನಿಂದ ಪಡಬಾರದ್ದನ್ನು ಅನುಭವಿಸುತ್ತಿದೆ. ಮೈಕಲ್ ಲೆವಿಟ್ ಮತ್ತೆ ವಿಶ್ವ ಸಮುದಾಯಕ್ಕೆ ಎಚ್ಚರ ಎಂದಿದ್ದಾರೆ.

ಕೊರೊನಾ ವೈರಸ್: ಇಟಲಿಯಲ್ಲಿ ಒಂದೇ ದಿನ 1 ಸಾವಿರ ಮಂದಿ ಸಾವುಕೊರೊನಾ ವೈರಸ್: ಇಟಲಿಯಲ್ಲಿ ಒಂದೇ ದಿನ 1 ಸಾವಿರ ಮಂದಿ ಸಾವು

"ಚೀನಾ ಆಯಿತು, ಇನ್ನು ಮುಂದಿನ ಸರದಿ ಅಮೆರಿಕಾ, ಈ ವೈರಾಣುವನ್ನು ತಡೆಯುವುದು ಕಷ್ಟವಲ್ಲ" ಎಂದು ಲೆವಿಟ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಲಾಸ್ ಎಂಜಲೀಸ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಕೊರೊನಾ ವೈರಸ್‌ ಹತ್ತಿಕ್ಕಲು ಲಸಿಕೆ ಸಿದ್ದ ಎಂದ ವೈದ್ಯರುಕೊರೊನಾ ವೈರಸ್‌ ಹತ್ತಿಕ್ಕಲು ಲಸಿಕೆ ಸಿದ್ದ ಎಂದ ವೈದ್ಯರು

ಈ ಮಾರಣಾಂತಿಕ ವೈರಸ್, ಅಧಿಕ ಬಿಸಿಲ ಒತ್ತಡದಲ್ಲಿ ಹೆಚ್ಚುಕಾಲ ಇರುತ್ತದೆಯೇ, ಜಾಸ್ತಿ ನೀರು ಕುಡಿದರೆ ತೊಲಗಿ ಸಾಯುತ್ತದೆಯೇ ಎನ್ನುವುದರ ಬಗ್ಗೆ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸದ ಲೆವಿಟ್, ವಿಶ್ವಕ್ಕೆ ಖುಷಿಯ ಸುದ್ದಿಯನ್ನೂ ನೀಡಿದ್ದಾರೆ.

ನೊಬೆಲ್ ಪ್ರಶಸ್ತಿ ವಿಜೇತ ಮೈಕಲ್ ಲೆವಿಟ್

ನೊಬೆಲ್ ಪ್ರಶಸ್ತಿ ವಿಜೇತ ಮೈಕಲ್ ಲೆವಿಟ್

ನೊಬೆಲ್ ಪ್ರಶಸ್ತಿ ವಿಜೇತ ಮೈಕಲ್ ಲೆವಿಟ್, ವಿಶ್ವಕ್ಕೆ ಕೆಲವೇ ದಿನಗಳಲ್ಲಿ ಕೊರೊನ ವೈರಸ್ ನಿಂದ ಗಂಢಾಂತರ ಕಾದಿದೆ ಎಂದು ಎಚ್ಚರಿಸದ ಕೂಡಲೇ, ಈ ವರ್ಷದ ಆದಿಯಲ್ಲಿ, ಇದಕ್ಕೆ ಪರಿಹಾರ ಏನು ಎನ್ನುವುದನ್ನು ಅಧ್ಯಯನ ಮಾಡಲು ಆರಂಭಿಸಿದರು ಎಂದು ಲಾಸ್ ಎಂಜಲೀಸ್ ಟೈಮ್ಸ್ ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಲೆವಿಟ್‌ ನೀಡಿರುವ ಅಂಕಿಅಂಶಗಳ

ಲೆವಿಟ್‌ ನೀಡಿರುವ ಅಂಕಿಅಂಶಗಳ

ಫೆಬ್ರವರಿ ತಿಂಗಳಲ್ಲಿ ಲೆವಿಟ್‌ ನೀಡಿರುವ ಅಂಕಿಅಂಶಗಳ ಸಂಶೋಧನೆ ಮತ್ತು ಚೀನಾದಲ್ಲಿ ಇದುವರೆಗೆ ಸಂಭವಸಿರುವ ಸಾವು ಬಹುತೇಕ ತಾಳೆಯಾಗುತ್ತಿದೆ. ಸುಮಾರು 3,250 ಸಾವು, ಸುಮಾರು 80,000 ಸೋಂಕು ದೃಢ ಪ್ರಕರಣಗಳು ಕಂಡುಬರುತ್ತವೆ ಎಂದು ಹೇಳಿದ್ದರು.

ಕೊರೊನಾ ವೈರಸ್

ಕೊರೊನಾ ವೈರಸ್

ವಿಶ್ವದೆಲ್ಲಡೆ ಹೊಸಹೊಸ ಪ್ರಕರಣಗಳು ದಾಖಲಾಗುತ್ತಿವೆ. ಕೊರೊನಾ ವೈರಸ್ ನಿಂದ ಚೇತರಿಕೆಯ ಲಕ್ಷಣಗಳು ಕಂಡುಬರುತ್ತಿವೆ. ಜಗತ್ತು ಇದಕ್ಕೆ ಭಯ ಪಡಬೇಕಾಗಿಲ್ಲ. ಮುಂದಿನ ವಾರದಿಂದ ಕೊರೊನಾ ವೈರಸ್ ಹರಡುವುದು ಕಮ್ಮಿಯಾಗಲಿದೆ ಎನ್ನುವ ಸಮಾಧಾನಕಾರಿ ಅಂಶವನ್ನು ಲೆವಿಟ್ ಹೇಳಿದ್ದಾರೆ.

ಕೋವಿಡ್ 19 ಸೋಂಕಿತ ರಾಷ್ಟ್ರಗಳು

ಕೋವಿಡ್ 19 ಸೋಂಕಿತ ರಾಷ್ಟ್ರಗಳು

ಕೋವಿಡ್ 19 ಸೋಂಕಿತ ರಾಷ್ಟ್ರಗಳು ಈ ನಿರ್ಣಾಯಕ ಘಟ್ಟದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತೀ ಮುಖ್ಯ. ಜೊತೆಗೆ, ಶುಚಿತ್ವಕ್ಕೂ ಆದ್ಯತೆಯನ್ನು ನೀಡಬೇಕು. ಸಾರ್ವಜನಿಕರು ಇನ್ನೊಂದು ವಾರ ಜಾಗರೂಕತೆಯಿಂದ ಇದ್ದರೆ, ಎಲ್ಲವೂ ಸರಿಹೋಗಲಿದೆ ಎಂದು ಲೆವಿಟ್ ಹೇಳಿದ್ದಾರೆ.

English summary
Nobel Award Winner Michael Levitt Indicates End Of Coronavirus Soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X