ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ಸಂತ್ರಸ್ತರ ಕನ್ಯತ್ವ ಪರೀಕ್ಷೆ ಮಾಡ್ಬೇಡಿ: ಹೊಸ ಗೈಡ್ ಲೈನ್ಸ್

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನೆರವು ನೀಡಬೇಕಾದ ವಿಚಾರಕ್ಕೆ ಸಂಬಂಧಿಸಿದಂತೆ ವೈದ್ಯರ ಪಾತ್ರದ ಪ್ರಾಮುಖ್ಯ ತಿಳಿಸುವಂಥ ಕೆಲವು ಸೂಚನೆಗಳನ್ನು ಗೃಹ ಖಾತೆ ವ್ಯವಹಾರಗಳ ಸಚಿವಾಲಯ ನೀಡಿದೆ. ಅಂಥ ಪ್ರಕರಣಗಳನ್ನು ಹೇಗೆ ನಿಭಾಯಿಸಬೇಕು, ಸಂತ್ರಸ್ತರ ವೈದ್ಯಕೀಯ ಪರೀಕ್ಷೆ ನಡೆಸುವಾಗ ಹೇಗೆ ನಡೆದುಕೊಳ್ಳಬೇಕು ಹಾಗೂ ನಡೆದುಕೊಳ್ಳಬಾರದು ಎಂಬುದನ್ನು ಸಹ ತಿಳಿಸಲಾಗಿದೆ.

ಕಳೆದ ಜುಲೈ 25ನೇ ತಾರೀಕು ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಆ ಪ್ರಕಾರವಾಗಿ ವೈದ್ಯರು ಎರಡು ಬಗೆಯ ಪಾತ್ರ ನಿರ್ವಹಿಸಬೇಕಾಗುತ್ತದೆ. ಅಂದರೆ ಅತ್ಯಾಚಾರ ಸಂತ್ರಸ್ತರಿಗೆ ಮೊದಲು ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಿ, ಮಾನಸಿಕ ಬೆಂಬಲಕ್ಕೆ ನಿಲ್ಲಬೇಕು. ಎರಡನೆಯದಾಗಿ ಅಪರಾಧ ಎಸಗಿದವರಿಗೆ ಶಿಕ್ಷೆ ಆಗುವಂತೆ ಮಾಡಲು ನೆರವಾಗಬೇಕು.

ಅತ್ಯಾಚಾರ ಸಂತ್ರಸ್ಥೆಯ ಚಿತ್ರ ಬಳಸುವ ಮಾಧ್ಯಮಗಳಿಗೆ ಸುಪ್ರೀಂ ತಪರಾಕಿಅತ್ಯಾಚಾರ ಸಂತ್ರಸ್ಥೆಯ ಚಿತ್ರ ಬಳಸುವ ಮಾಧ್ಯಮಗಳಿಗೆ ಸುಪ್ರೀಂ ತಪರಾಕಿ

ಕೋರ್ಟ್ ಕಲಾಪಗಳಲ್ಲಿ ವೈದ್ಯಕೀಯ ಕಾನೂನು ವಿಚಾರಣೆ (ಮೆಡಿಕೋ ಲೀಗಲ್ ಪ್ರೊಸಿಡಿಂಗ್ಸ್) ಹೇಗೆ ನಡೆಯುತ್ತದೆ ಎಂಬ ಬಗ್ಗೆ ಅರಿವು ಮೂಡಿಸಬೇಕು. ಸಾಕ್ಷ್ಯ ಸಂಗ್ರಹ ಹಾಗೂ ಸರಿಯಾಗಿ ದಾಖಲೆಗಳ ಒಟ್ಟುಗೂಡಿಸಲು ಸಹಾಯ ಮಾಡಬೇಕು.

No virginity test for rape case victim, new guidelines

ಮಹಿಳೆಯರು ಅಥವಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಹೇಗೆ ಪ್ರಕರಣದ ಪರಿಣಾಮಕಾರಿ ವಿಚಾರಣೆ ನಡೆಸಬೇಕು ಎಂಬ ಮಾರ್ಗದರ್ಶಿ ಸೂತ್ರಗಳನ್ನು ದೇಶದಾದ್ಯಂತ ಇರುವ ಡಿಜಿಪಿಗಳು, ಪೊಲೀಸ್ ಕಮಿಷನರ್ ಗಳಿಗೆ ಕಳುಹಿಸಲಾಗಿದೆ.

ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರ ಜನನಾಂಗದ (ಎರಡು ಬೆರಳಿನ ಪರೀಕ್ಷೆ) ಪರೀಕ್ಷೆ ನಡೆಸಬಾರದು ಎಂದು ವೈದ್ಯರಿಗೆ ಸಲಹೆ ನೀಡಲಾಗಿದೆ. ಲೈಂಗಿಕ ಸಂಪರ್ಕ ಆಗಿದೆಯಾ ಅಥವಾ ಇಲ್ಲವಾ ಎಂಬುದನ್ನು ತಿಳಿಯುವ ಸಲುವಾಗಿ ಹೀಗೆ ಎರಡು ಬೆರಳಿನ ಪರೀಕ್ಷೆ ಮಾಡಲಾಗುತ್ತದೆ. ಜನನಾಂಗ ಎಷ್ಟು ಪ್ರಮಾಣದಲ್ಲಿ ತೆರೆದುಕೊಂಡಿದೆ ಎಂದು ನಿರ್ಧರಿಸುವಂತೆ ಗಾತ್ರದ ಬಗ್ಗೆ ಏನೂ ಹೇಳಬಾರದು ಎಂದು ಸೂಚಿಸಲಾಗಿದೆ.

2014-16ರ ಮಧ್ಯೆ ದೇಶದಲ್ಲಿ ಲಕ್ಷಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣ2014-16ರ ಮಧ್ಯೆ ದೇಶದಲ್ಲಿ ಲಕ್ಷಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣ

ಅದೇ ರೀತಿ ಜನನಾಂಗ ಎಷ್ಟು ಅಗಲವಾಗಿದೆ ಅಂತಾಗಲೀ ಅಥವಾ ಕನ್ಯಾಪೊರೆ ಬಗ್ಗೆಯಾಗಲೀ ಅಥವಾ ಅದಕ್ಕೂ ಮುಂಚಿನ ಲೈಂಗಿಕ ಅನುಭವಗಳ ಬಗ್ಗೆಯಾಗಲೀ ಅಥವಾ ಲೈಂಗಿಕ ಸಂಪರ್ಕ ಅಭ್ಯಾಸ ಇವ್ಯಾವು ಕೂಡ ಲೈಂಗಿಕ ಹಿಂಸೆ ಪ್ರಕರಣಗಳಲ್ಲಿ ಪರಿಗಣಿಸಬಾರದು ಎನ್ನಲಾಗಿದೆ.

ಇನ್ನು ಲಿಂಗತ್ವದ ವಿಚಾರಕ್ಕೆ ಸಂಬಂಧಿಸಿದ ಹಾಗೆ ಕೆಲವು ವಿಶೇಷ ಅಂಶಗಳನ್ನು ಹೇಳಲಾಗಿದೆ. ಸಾಮಾನ್ಯವಾಗಿ ಲೈಂಗಿಕ ದೌರ್ಜನ್ಯವು ಮಹಿಳೆಯರ ಮೇಲೆ ಆಗುತ್ತದೆ ಎಂಬ ನಂಬಿಕೆ ಇದೆ. ಅದು ಪುರುಷರ ಮೇಲೂ ಆಗಬಹುದು, ತೃತೀಯ ಲಿಂಗಿ ಅಥವಾ ಉಭಯ ಲಿಂಗಿಗಳ ಮೇಲೂ ಆಗಬಹುದು. ಇವೇ ಮಾರ್ಗದರ್ಶಿ ಸೂತ್ರಗಳನ್ನೇ ಎಲ್ಲರಿಗೂ ಅನ್ವಯಿಸಬೇಕು ಎಂದು ತಿಳಿಸಲಾಗಿದೆ.

ಈ ಎಲ್ಲ ಮಾರ್ಗದರ್ಶಿಸೂತ್ರಗಳನ್ನು ಚಂಡೀಗಢದ ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯವು (ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ) ಗೃಹ ಖಾತೆ ವ್ಯವಹಾರದ ಸಚಿವಾಲಯಕ್ಕಾಗಿ ರೂಪಿಸಲಾಗಿದೆ.

English summary
No virginity test or comment on sex life of rape case victim, new guidelines laid down by Ministry of Home Affairs, sent to all states and union territories of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X