ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ 'ನ್ಯೂಕ್ಲಿಯರ್ ಬಟನ್' ಹೇಳಿಕೆಗೆ ಚು.ಆಯೋಗ ಕ್ಲೀನ್ ಚಿಟ್

|
Google Oneindia Kannada News

ಭಾರತದ ಬಳಿ ಅಣ್ವಸ್ತ್ರ ಇರುವುದು ದೀಪಾವಳಿಗೋಸ್ಕರವೇ ಎಂದಿದ್ದರು ಮೋದಿ. ಆ ಹೇಳಿಕೆ ವಿಚಾರದಲ್ಲಿ ಚುನಾವಣೆ ಆಯೋಗವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದೆ. 'ಪ್ರತಿ ಸಲ ಅವರು (ಪಾಕಿಸ್ತಾನ) ನಮ್ಮ ಹತ್ತಿರ ನ್ಯೂಕ್ಲಿಯರ್ (ಅಣ್ವಸ್ತ್ರ) ಬಟನ್ ಇದೆ ಎನ್ನುತ್ತಲೇ ಇರುತ್ತಾರೆ. ಹಾಗಿದ್ದರೆ ನಮ್ಮ ಬಳಿ ಏನಿದೆ? ನಾವದನ್ನು ದೀಪಾವಳಿಗೆ ಇಟ್ಟುಕೊಂಡಿದ್ದೇವಾ?' ಎಂದು ಮೋದಿ ಹೇಳಿದ್ದರು.

ರಾಜಸ್ತಾನದ ಬರ್ಮರ್ ನಲ್ಲಿ ಚುನಾವಣಾ ಭಾಷಣ ಮಾಡುವ ವೇಳೆ, ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ತಮಾನ್ ರ ಬಿಡುಗಡೆಯು ರಾಜತಾಂತ್ರಿಕ ಗೆಲುವು ಎಂದಿದ್ದರು. ಈ ಹೇಳಿಕೆಗಳೆಲ್ಲ ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ ಎಂದು ಕಾಂಗ್ರೆಸ್ ನಿಂದ ಚುನಾವಣೆ ಆಯೋಗದ ಬಳಿ ದೂರಲಾಗಿತ್ತು.

‘No violation of model code’: PM’s nuclear button speech gets EC clean chit

ಚುನಾವಣೆ ಆಯೋಗವು ನೀಡಿದ ಆದೇಶದಲ್ಲಿ, ವಿಚಾರವನ್ನು ಕೂಲಂಕಷವಾಗಿ ಪರಿಶೀಲನೆ ಮಾಡಲಾಗಿದೆ. ಭಾಷಣದ ಪೂರ್ಣ ಪಾಠವನ್ನು ಪರೀಕ್ಷೆ ಮಾಡಿದ ನಂತರ ಚುನಾವಣೆ ನೀತಿ ಸಂಹಿತೆ ಅಡಿಯಲ್ಲಿ ಬರುವ ನಿಯಮಕ್ಕೆ ಒರೆ ಹಚ್ಚಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ನೀತಿ ಸಂಹಿತೆಯ ಉಲ್ಲಂಘನೆ ಆಗಿರುವುದು ಕಂಡುಬಂದಿಲ್ಲ ಎನ್ನಲಾಗಿದೆ.

English summary
Lok Sabha Elections 2019: The Election Commission on Thursday gave PM Narendra Modi a clean chit for his speech in Barmer (Rajasthan) where he had said that India’s nuclear weapons were not meant for Diwali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X