ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಳ್ಳುಸುಳ್ಳು: 2020ರಲ್ಲಿ ಕೊವಿಡ್-19 ಔಷಧಿ ಸಿಗುತ್ತೆ ಎನ್ನುವುದೇ ಸುಳ್ಳು!

|
Google Oneindia Kannada News

ನವದೆಹಲಿ, ಜುಲೈ.05: ಭಾರತದ ಪಾಲಿಗೆ ಬೆನ್ನು ಬಿಡದ ಭೂತದಂತೆ ಕಾಡುತ್ತಿರುವ ಕೊರೊನಾವೈರಸ್ ನಿವಾರಣೆಗೆ ಆಗಸ್ಟ್.15ರ ಸ್ವಾತಂತ್ರ್ಯ ದಿನಾಚರಣೆ ಹೊತ್ತಿಗೆ ಲಸಿಕೆಯೊಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. 2021ರವರೆಗೂ ಕೊವಿಡ್-19 ಸೋಂಕಿಗೆ ಯಾವುದೇ ಲಸಿಕೆ ಕಂಡು ಹಿಡಿಯುವುದಕ್ಕೆ ಸಾಧ್ಯವಿಲ್ಲ ಎಂಬ ಅಂಶ ಇದೀಗ ಬಟಾಬಯಲಾಗಿದೆ.
2021ಕ್ಕಿಂತ ಮೊದಲು ಕೊರೊನಾವೈರಸ್ ಸೋಂಕಿಗೆ ಯಾವುದೇ ರೀತಿಯಾದ ಲಸಿಕೆಯನ್ನು ಕಂಡು ಹಿಡಿಯುವುದಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಸ್ಪಷ್ಟವಾಗಿ ಹೇಳಿದೆ.

ಸ್ವದೇಶಿ ಲಸಿಕೆ ಕೊವ್ಯಾಕ್ಸಿನ್ ಪ್ರಯೋಗಕ್ಕೆ ಸಿಕ್ತು ಅನುಮತಿ!
ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯು ಎಲ್ಲ ರೀತಿಯ ಕ್ಲಿನಿಕಲ್ ಟೆಸ್ಟ್ ಗಳನ್ನು ಈಗಾಗಲೇ ನಡೆಸಲಾಗುತ್ತಿದೆ. ದೇಶದ ಸ್ವಾತಂತ್ರ್ಯ ದಿನಾಚರಣೆ ದಿನಕ್ಕೂ ಮೊದಲೇ ಅಂದರೆ ಆಗಸ್ಟ್.15ರ ಒಳಗೆ ಲಸಿಕೆಯೊಂದನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು.

No Vaccine Will Be Ready For Coronavirus Patient Before 2021

 ಜಗತ್ತಿನಾದ್ಯಂತ 140ಕ್ಕೂ ಹೆಚ್ಚು ಲಸಿಕೆಗಳ ಪ್ರಯೋಗ

ಜಗತ್ತಿನಾದ್ಯಂತ 140ಕ್ಕೂ ಹೆಚ್ಚು ಲಸಿಕೆಗಳ ಪ್ರಯೋಗ

ಕೊರೊನಾವೈರಸ್ ಸೋಂಕು ನಿವಾರಣೆಗೆ 140ಕ್ಕೂ ಹೆಚ್ಚು ಬಗೆಯ ಲಸಿಕೆಗಳನ್ನು ಕಂಡು ಹಿಡಿಯುವಲ್ಲಿ ಜಗತ್ತಿನಾದ್ಯಂತ ದೈತ್ಯ ಔಷಧೀಯ ಕಂಪನಿಗಳು ಸಂಶೋಧನೆಯನ್ನು ನಡೆಸುತ್ತಿವೆ. ಈ ಪೈಕಿ AZD-1222 ಎಂಬ ಲಸಿಕೆಯನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಜೆನ್ನರ್ ಇನ್‌ಸ್ಟಿಟ್ಯೂಟ್ ಅನ್ನು ಅಭಿವೃದ್ಧಿಪಡಿಸಿದೆ. ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಅಸ್ಟ್ರಾಜೆನೆಕಾ ಬ್ರಿಟಿಷ್-ಸ್ವೀಡಿಷ್ ಬಹುರಾಷ್ಟ್ರೀಯ ಔಷಧೀಯ ಮತ್ತು ಜೈವಿಕ ಔಷಧೀಯ ಕಂಪನಿಗೆ ಪರವಾನಗಿ ನೀಡಲಾಗಿದೆ.

ಭಾರತದ ಜೊತೆಗೆ ಲಸಿಕೆ ತಯಾರಿಸಲು ಒಪ್ಪಂದ

ಭಾರತದ ಜೊತೆಗೆ ಲಸಿಕೆ ತಯಾರಿಸಲು ಒಪ್ಪಂದ

ವಾಷಿಂಗ್ಟನ್‌ನ ಕೈಸರ್ ಪರ್ಮನೆಂಟೆ ವಾಷಿಂಗ್ಟನ್ ಹೆಲ್ತ್ ರಿಸರ್ಚ್ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಮತ್ತು ಯುಎಸ್ ಮೂಲದ ಮಾಡರ್ನಾ ಔಷಧೀಯ ಉತ್ಪಾದನಾ ಕಂಪನಿ MRNA-1273 ಲಸಿಕೆ ಕಂಡು ಹಿಡಿಯುವಲ್ಲಿ ಒಂದು ಹೆಜ್ಜೆ ಹಿಂದಿದೆ. ಈ ಎರಡೂ ಸಂಸ್ಥೆಗಳು ಈಗಾಗಲೇ COVID ಲಸಿಕೆಗಳ ಉತ್ಪಾದನೆಗೆ ಭಾರತೀಯ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿವೆ.

ಲಸಿಕೆ ಸಂಶೋಧನಾ ಕಾರ್ಯದಲ್ಲಿ ಭಾರತದ ಆರು ಕಂಪನಿ

ಲಸಿಕೆ ಸಂಶೋಧನಾ ಕಾರ್ಯದಲ್ಲಿ ಭಾರತದ ಆರು ಕಂಪನಿ

ಹೈದರಾಬಾದ್ ಮೂಲದ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್ ತಯಾರಿಸಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಕ್ಲಿನಿಕಲ್ ಟ್ರಯಲ್ ಗೆ ಬಳಸಬಹುದು ಎಂದು ಡ್ರಗ್ ಕಂಟ್ರೋಲರ್ ಜನರಲ್ ಅಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದೆ. ಭಾರತ್ ಬಯೋಟೆಕ್ ಕಂಪನಿಗೆ ಇಂಡಿಯನ್ ಕೌನ್ಸಿಲ್ ಅಫ್ ಮೆಡಿಕಲ್ ರಿಸರ್ಚ್ ( ಐಸಿಎಂಆರ್) ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್ಐಜಿ) ಸಹಕಾರ ನೀಡಿವೆ. ಭಾರತದಲ್ಲಿ ಕೊವಿಡ್-19 ಲಸಿಕೆ ಕಂಡು ಹಿಡಿಯುವ ಕಾರ್ಯದಲ್ಲಿ ಆರು ಕಂಪನಿಗಳು ನಿರತವಾಗಿವೆ.

ಕೊವಿಡ್-19 ಸೋಂಕಿತರ ಮೇಲೆ ಪ್ರಯೋಗಕ್ಕೆ ಲಸಿಕೆ ಸಿದ್ಧ

ಕೊವಿಡ್-19 ಸೋಂಕಿತರ ಮೇಲೆ ಪ್ರಯೋಗಕ್ಕೆ ಲಸಿಕೆ ಸಿದ್ಧ

ಜಗತ್ತಿನಾದ್ಯಂತ 140 ಲಸಿಕೆಗಳ ಪೈಕಿ 11 ಲಸಿಕೆಗಳನ್ನು ಕೊರೊನಾವೈರಸ್ ಸೋಂಕಿತರ ಮೇಲೆ ಪ್ರಯೋಗಿಸುವುದಕ್ಕೆ ಅನುಮತಿ ನೀಡಲಾಗಿದೆ. ಈ ಪೈಕಿ ಭಾರತದ CAVAXIN ಮತ್ತು ZyCov-D ಎಂಬ ಎರಡು ಲಸಿಕೆಗಳನ್ನು ಸೋಂಕಿತರ ಮೇಲೆ ಪ್ರಯೋಗಿಸಲು ಸಮ್ಮತಿಸಲಾಗಿದೆ. ಆದರೆ ಈ ಪೈಕಿ ಯಾವುದೇ ಲಸಿಕೆಯು 2021ಕ್ಕಿಂತ ಮೊದಲು ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಬಳಸುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ.
ಈ ಹಿಂದೆ ಚೀನಾದಲ್ಲಿ ಮೊದಲು ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಈ ಬಗ್ಗೆ ಸ್ಪಷ್ಟವಾಗಿ ಹೇಳಿತ್ತು. ಮಹಾಮಾರಿ ಕೊವಿಡ್-19ಗೆ ಲಸಿಕೆ ಅಥವಾ ಯಾವುದೇ ಔಷಧಿಯನ್ನು ಪತ್ತೆ ಮಾಡುವುದಕ್ಕೆ ಕನಿಷ್ಠ 18 ತಿಂಗಳುಗಳಾದರೂ ಬೇಕಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿತ್ತು.

English summary
No Vaccine Will Be Ready For Coronavirus Patient Before 2021. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X