ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೋಲ್‌ಪ್ಲಾಜಾಗಳಲ್ಲಿ 100 ಮೀಟರ್‌ಗಿಂತ ಹೆಚ್ಚು ಸರತಿಯಿದ್ದರೆ ತೆರಿಗೆ ಪಾವತಿಸಬೇಕಿಲ್ಲ

|
Google Oneindia Kannada News

ನವದೆಹಲಿ, ಮೇ 26: ವಾಹನ ಸವಾರರು ಟೋಲ್‌ಗಳಲ್ಲಿ ಕ್ಯೂನಿಂದ ಅನುಭವಿಸುತ್ತಿರುವ ಕಿರಿಕಿರಿಗೆ ಅಂತ್ಯಹಾಡುವ ಕಾಲ ಸನ್ನಿಹಿತವಾದಂತಿದೆ. ಇನ್ನು ಮುಂದೆ 100 ಮೀಟರ್‌ಗಿಂತ ಹೆಚ್ಚು ದೂರ ವಾಹನಗಳ ಸರದಿ ಸಾಲಿದ್ದರೆ ಟೋಲ್ ಪ್ಲಾಜಾಗಳಲ್ಲಿ ತೆರಿಗೆ ಕಟ್ಟಬೇಕಾಗಿಲ್ಲ. ತೆರಿಗೆಯಿಲ್ಲದೆ ವಾಹನಗಳನ್ನು ಬಿಡಲು ಅವಕಾಶವನ್ನು ನೀಡಲಾಗಿದೆ.

Recommended Video

NITHIN GHADHKARI - ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ !! | Oneindia Kannada

ಟೋಲ್ ಸಂಗ್ರಹಣ ಸ್ಥಳಗಳಲ್ಲಿ 100 ಮೀಟರ್‌ ಅಂತರದಲ್ಲಿ ಹಳದಿ ರೇಖೆಯನ್ನು ಎಳೆಯಲಾಗುತ್ತದೆ. ಆ ರೇಖೆಗಿಂತಲೂ ಹೆಚ್ಚು ವಾಹನಗಳು ಸರದಿಯಲ್ಲಿದ್ದರೆ ಆಗ ಸಂಚಾರವನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಂದರೆ ನೂರು ಮೀಟರ್‌ಗೂ ಹೆಚ್ಚು ವಾಹನಗಳು ಕ್ಯೂನಲ್ಲಿ ಇದ್ದಾಗ ನೀವು ಉಚಿತವಾಗಿ ಟೋಲ್‌ನಲ್ಲಿ ಪ್ರಯಾಣಿಸಬಹುದಾಗಿದೆ.

ಹಾಗಂದ ಮಾತ್ರಕ್ಕೆ ಈ ನಿಯಮ ಹೊಸತೇನೂ ಅಲ್ಲ. ಎರಡು ವರ್ಷಗಳ ಹಿಂದೆ ಆರ್‌ಟಿಐ ಮೂಲಕ ಕೇಳಲಾದ ಮಾಹಿತಿಯಲ್ಲಿ ಟೋಲ್ ಪ್ಲಾಜಾಗಳಲ್ಲಿ 3 ನಿಮಿಷಕ್ಕಿಂತ ಹೆಚ್ಚು ಕಾಯುವಂತಾಗಬಾರದು ಎಂಬ ನಿಯಮವಿದೆ. ಆದರೆ ಈ ನಿಯಮಗಳು ವಾಸ್ತವದಲ್ಲಿ ಜಾರಿಯಾಗಿರಲಿಲ್ಲ ಜನರಿಗೆ ಈ ಬಗ್ಗೆ ಯಾವುದೇ ಅರಿವು ಇರಲಿಲ್ಲ ಎಂಬುದು ಮಾತ್ರ ಸತ್ಯ.

No Toll tax if queue more than 100 meter long in toll Plazas

ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರೆ ಪ್ರಾಧಿಕಾರ ಟೋಲ್ ಸಂಗ್ರಹಕ್ಕೆ ಹೊಸ ಮಾರ್ಗಸೂಚಿಯನ್ನು ತಂದಿತ್ತು. ಇದರ ಹಿನ್ನೆಲೆಯಲ್ಲಿ ದೇಶಾದ್ಯಂತದ ಎಲ್ಲಾ ಟೋಲ್ ಬೂತ್‌ಗಳಲ್ಲಿ, ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಸಿಸ್ಟಮ್ (ಇಟಿಎಸ್) ಅನ್ನು ಜಾರಿಗೆ ತರಲಾಗಿದೆ. ಈ ಮೂಲಕ ಟೋಲ್ ತೆರಿಗೆಯನ್ನು ಫಾಸ್‌ಟ್ಯಾಗ್ ಮೂಲಕ ಸಂಗ್ರಹಿಸಲಾಗುತ್ತಿದೆ.

ಕಳೆದ ಫೆಬ್ರವರಿಯಲ್ಲಿ ಎಲ್ಲಾ ಟೋಲ್‌ಗೇಟ್‌ಗಳಲ್ಲಿ ತೆರಿಗೆ ಪಾವತಿಸಲು ಫಾಸ್‌ಟ್ಯಾಗ್ಅನ್ನು ಕಡ್ಡಾಯಗೊಳಿಸಲಾಗಿದೆ. ಫಾಸ್‌ಟ್ಯಾಗ್ ಇಲ್ಲದ ಪ್ರಯಾಣ ಅಥವಾ ಅಮಾನ್ಯವಾಗಿರುವ ಫಾಸ್‌ಟ್ಯಾಗ್ ಹೊಂದಿದ್ದರೆ ದ್ವಿಗುಣ ತೆರಿಗೆಯನ್ನು ಪಾವತಿ ಮಾಡಬೇಕಿದೆ.

ಕೊರೊನಾ ವೈರಸ್‌ನ ಎರಡನೇ ಅಲೆ ಕಂಡುಬಂದ ಹಿನ್ನೆಲೆಯಲ್ಲಿ ತುರ್ತು ಸೇವೆಗಳನ್ನು ಸರಾಗಗೊಳಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಕಳೆದ ಮಾರ್ಚ್‌ನಲ್ಲಿ ಘೋಷಿಸಲಾಯಿತು. ಭಾರತದಾದ್ಯಂತ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಿಸಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾರ್ಚ್ 25 ರಂದು ಪ್ರಕಟಿಸಿದ್ದಾರೆ.

English summary
No Toll tax if there is a queue or traffic jam more than 100 meter long in toll Plazas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X