ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ್ ಮಲ್ಯ ಕಿಂಗ್ ಫಿಶರ್ ಮನೆ ಯಾರಿಗೂ ಬೇಡ

|
Google Oneindia Kannada News

ಮುಂಬೈ, ಮಾರ್ಚ್, 17: ಸಾಲ ಮಾಡಿಕೊಂಡು ನಾಪತ್ತೆಯಾಗಿರುವ ವಿಜಯ್ ಮಲ್ಯರ ಮುಂಬೈ ಮನೆ ಯಾರಿಗೂ ಬೇಡವಾಗಿದೆ. ಸಾಲ ಮರುಪಾವತಿ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಲ್ಯರ ಮುಂಬೈ ನಿವಾಸವನ್ನು ಸುಪರ್ದಿಗೆ ತೆಗೆದುಕೊಂಡು ಹರಾಜು ಮಾಡುವುದರಲ್ಲಿತ್ತು. ಆದರೆ ಮನೆ ಖರೀದಿಗೆ ಯಾರೂ ಆಸಕ್ತಿ ತೋರಿಸಿಲ್ಲ.

ಎಸ್ ಬಿಐ ಕಿಂಗ್ ಫಿಶರ್ ಹೌಸ್ ಅನ್ನು ಆರಂಭಿಕ ಬೆಲೆ 150 ಕೋಟಿ ರೂಪಾಯಿ ಎಂದು ನಿಗದಿ ಮಾಡಿ ಇ ಹರಾಜು ಮಾಡಲು ನಿರ್ಧರಿಸಿತ್ತು. ಆದರೆ ಖರೀದಿಗೆ ಯಾರೂ ಆಸಕ್ತಿ ತೋರಿಸದ ಹಿನ್ನೆಲೆಯಲ್ಲಿ ಎಸ್ ಬಿಐ ಹರಾಜು ಪ್ರಕ್ರಿಯೆಯನ್ನು ಕೈ ಬಿಟ್ಟಿದೆ. [ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]

mallya

ಮದ್ಯದ ದೊರೆ ವಿಜಯ್ ಮಲ್ಯ 17ಕ್ಕೂ ಅಧಿಕ ಬ್ಯಾಂಕ್ ಗಳಿಂದ ಸುಸ್ತಿದಾರ ಎಂದು ಕರೆಸಿಕೊಂಡಿದ್ದಾರೆ. ಎಸ್ ಬಿಐನಿಂದ 1,600 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ.[ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]

ಒಂದೆಡೆ ಬ್ಯಾಂಕ್ ಗಳು ಮತ್ತು ಮಾಧ್ಯಮ ವಿಜಯ್ ಮಲ್ಯ ನಾಪತ್ತೆಯಾಗಿದ್ದಾರೆ ಎಂದು ಹೇಳುತ್ತಿದ್ದರೆ, ಮಲ್ಯ ಟ್ವೀಟ್ ಮಾಡಿವ ಮೂಲಕ ತಿರುಗೇಟು ನೀಡುತ್ತಿದ್ದಾರೆ. ಎನ್ ಡಿಎ ಮೇಲೆ ವಿಪಕ್ಷಗಳು ಇದೇ ಪ್ರಕರಣವನ್ನು ಇಟ್ಟುಕೊಂಡು ಆರೋಪ ಮಾಡಿವೆ. ಒಟ್ಟಿನಲ್ಲಿ ಮಲ್ಯ ಮನೆ ಖರೀದಿಗೆ ಯಾರೂ ಮುಂದೆ ಬಂದಿಲ್ಲ. ಸಾಲ ಮರುಪಾವತಿ ಮಾಡಿಕೊಳ್ಳಬೇಕು ಎಂದಿದ್ದ ಎಸ್ ಬಿಐ ಈಗ ಪರ್ಯಾಯ ಕ್ರಮಗಳ ಬಗ್ಗೆ ಚಿಂತನೆ ನಡೆಸಬೇಕಾಗಿದೆ.

ಜಾರಿ ನಿರ್ದೇಶನಾಲಯದ ಎದುರು ಹಾಜರಾಗಲು ವಿಜಯ್ ಮಲ್ಯ ಕಾಲಾವಕಾಶ ಕೇಳಿದ್ದಾರೆ ಎಂದು ಹೇಳಲಾಗಿದೆ. ಇನ್ನೊಂದೆಡೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಒಡೆತನವನ್ನು ಮಲ್ಯ ತೊರೆದಿದ್ದಾರೆ.

English summary
Mumbai: An online auction of one of Vijay Mallya's flagship properties in Mumbai, Kingfisher House, opened and closed today without any bidders. The base price of Rs. 150 crore for the office at Andheri in Mumbai's western suburbs. The e-auction was managed by an arm of the state-run State Bank of India, one of the 17 banks trying to recover at least a billion dollars loaned to Mr Mallya's grounded Kingfisher Airlines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X