ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಸ್ಸಿ ವಯೋಮಿತಿ ಬದಲಾವಣೆ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

|
Google Oneindia Kannada News

ನವದೆಹಲಿ, ಡಿಸೆಂಬರ್ 26: ಕೇಂದ್ರೀಯ ಲೋಕಸೇವಾ ಆಯೋಗ(ಯುಪಿಎಸ್ ಸಿ) ದ ಹುದ್ದೆಗಳ ಆಕಾಂಕ್ಷಿಗಳ ವಯೋಮಿತಿ ಇಳಿಕೆ ಮಾಡುವಂತೆ ನೀತಿ ಆಯೋಗ ನೀಡಿದ್ದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

ಕೇಂದ್ರದ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಈ ಕುರಿತಂತೆ ನಾಲ್ಕು ವರ್ಷಗಳ ಹಿಂದೆಯೇ ಅಧಿಸೂಚನೆ ಹೊರಡಿಸಿತ್ತು. ಆದರೆ, ಸರ್ಕಾರದಲ್ಲಿ ಈ ಬಗ್ಗೆ ಒಮ್ಮತ ಮೂಡದ ಕಾರಣ, ಆದೇಶ ಬಂದಿರಲಿಲ್ಲ.

ಯುಪಿಎಸ್‌ಸಿ ವ್ಯಕ್ತಿತ್ವ ಪರೀಕ್ಷೆ: ಕರ್ನಾಟಕದ 52 ಮಂದಿ ಅರ್ಹ
ಈ ಬಗ್ಗೆ ಮೂಡಿದ್ದ ಗೊಂದಲಕ್ಕೆ ಉತ್ತರಿಸಿರುವ ಪ್ರಧಾನಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್, 'ದೇಶದ ಅತ್ಯುನ್ನತ ಹುದ್ದೆಗಳಾದ ಭಾರತೀಯ ಆಡಳಿತಾತ್ಮಕ ನಾಗರಿಕ ಸೇವಾ ಪ್ರವೇಶ ಪರೀಕ್ಷಾರ್ಥಿಗಳ ವಯಸ್ಸಿನ ಮಿತಿ ಇಳಿಸುವ ಚಿಂತನೆ ಕೇಂದ್ರದ ಮುಂದೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

No Such Proposal Under Contemplation: Government Clarifies On UPSC Age Criteria

2022-23ಕ್ಕೆ ಭಾರತ ಸ್ವಾತಂತ್ರ್ಯ ಪಡೆದು 75 ವರ್ಷ ಪೂರೈಸಲಿದೆ. ನೀತಿ ಆಯೋಗ ಇದನ್ನು ದೃಷ್ಟಿಯಲ್ಲಿ ಇರಿಸಿಕೊಂಡು 'ಸ್ಟ್ರಾಟರ್ಜಿ ಫಾರ್​ ನ್ಯೂ ಇಂಡಿಯಾ@ 75'ನಲ್ಲಿ ನಾಗರಿಕ ಸೇವಾ ಪರೀಕ್ಷಾರ್ಥಿಗಳ ವಯಸ್ಸಿನ ಮಿತಿಯನ್ನು ಹಂತ ಹಂತವಾಗಿ ಇಳಿಸಬೇಕು ಎಂದು ಶಿಫಾರಸು ಮಾಡಿತ್ತು.

ಯುಪಿಎಸ್​ಸಿ ಪರೀಕ್ಷೆಯ ವಯಸ್ಸಿನ ಮಿತಿ 32 ಇದ್ದು, ಇದನ್ನು 27ಕ್ಕೆ ಇಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸುದ್ದಿ ಹರಿಡಿ ನಾಲ್ಕು ವರ್ಷಗಳಾಗಿವೆ. 'ಇಂಥ ಸುದ್ದಿಗಳನ್ನು ಹರಡಬಾರದು' ಎಂದು ಸಚಿವ ಡಾ. ಜಿತೇಂದ್ರ ಸಿಂಗ್ ಮನವಿ ಮಾಡಿದ್ದಾರೆ.

ಯುಪಿಎಸ್ ಸಿ ನೇಮಕಾತಿ, 10 ಹುದ್ದೆಗಳಿಗೆ ಅರ್ಜಿ ಹಾಕಿ ಯುಪಿಎಸ್ ಸಿ ನೇಮಕಾತಿ, 10 ಹುದ್ದೆಗಳಿಗೆ ಅರ್ಜಿ ಹಾಕಿ

ನಾಗರಿಕ ಸೇವಾ ಪರೀಕ್ಷೆ ಬರೆಯುವ ಸಾಮಾನ್ಯ ವರ್ಗದವರಿಗೆ ವಯಸ್ಸಿನ ಮಿತಿ 32 ವರ್ಷ ಹಾಗೂ ಹಿಂದುಳಿದ ವರ್ಗದವರಿಗೆ 37 ವರ್ಷ ಇದೆ. 2022-23ರ ವೇಳೆಗೆ ಇದನ್ನು 27ಕ್ಕೆ ತಗ್ಗಿಸಬೇಕು ಎಂದು ನೀತಿ ಆಯೋಗ ಶಿಫಾರಸು ಮಾಡಿತ್ತು.

ಎಷ್ಟು ಬಾರಿ ಪರೀಕ್ಷೆ ಯತ್ನಿಸಬಹುದು: * ಸಾಮಾನ್ಯ ವರ್ಗ: 3 ಬಾರಿ * ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ : 6 * ಇತರೆ ಹಿಂದುಳಿದ ವರ್ಗಗಳಿಗೆ : 5

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 27ರಿಂದ 29ರ ವಯೋಮಿತಿ ಇರಲಿ ಎಂದು ಕೇಂದ್ರ ಸರ್ಕಾರ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಕೂಡಾ ಅನುಮೋದನೆ ನೀಡಿತ್ತು.

English summary
Regarding NITI Aayog's recommendation on revising age limit for civil services exam, which created a stir among aspirants last week, the government said that there is no such proposal under contemplation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X