ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತಮ ಮಳೆ: ಈ ಬಾರಿ ಕಾವೇರಿ ಕಣಿವೆ ಪರಿಶೀಲನೆ ಇಲ್ಲ

By Nayana
|
Google Oneindia Kannada News

ಬೆಂಗಳೂರು, ಜು.4: ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳಲ್ಲಿರುವ ಜಲಾಶಯಗಳ ಸಂಗ್ರಹ ಸಾಮರ್ಥ್ಯ, ಒಳ, ಹೊರ ಹರಿವು ಸೇರಿ ಸಂಪೂರ್ಣ ಮಾಹಿತಿ ನೀಡಬೇಕು ಎನ್ನುವುದರ ಕುರಿತು ಸಾಕಷ್ಟು ಚರ್ಚೆ ನಡೆದಿದೆ.

ಇದರ ಜೊತೆ ಜೊತೆಗೆ ಜಲಾಶಯಗಳಲ್ಲಿ ಆವಿ ಆಗುತ್ತಿರುವ ನೀರಿನ ಪ್ರಮಾಣ ಹಾಗೂ ನೀರಿನ ಕುರಿತು ಮಾಹಿತಿ ಸಂಗ್ರಹಕ್ಕೆ ಯಾವ ರೀತಿ ಸಲಕರಣೆಗಳನ್ನು ಬಳಸಲಾಗುತ್ತಿದೆ, ತಂತ್ರಜ್ಞಾನಗಳ ಬಗ್ಗೆ ಜು.16ರೊಳಗೆ ವರದಿ ನೀಡುವಂತೆ ಕಣಿವೆ ರಾಜ್ಯಗಳಿಗೆ ನಿರ್ದೇಶನ ನೀಡಲಾಗಿದೆ.

ಜು.6ರಿಂದ ಕಾವೇರಿ ಕೊಳ್ಳದ ಮುಖಂಡರ ಸಭೆ: ಡಿಕೆ ಶಿವಕುಮಾರ್‌ಜು.6ರಿಂದ ಕಾವೇರಿ ಕೊಳ್ಳದ ಮುಖಂಡರ ಸಭೆ: ಡಿಕೆ ಶಿವಕುಮಾರ್‌

ಆದರೆ ಈ ಬಾರಿ ಅತ್ಯುತ್ತಮ ಮಳೆಯಾಗುತ್ತಿರುವುದರಿಂದ ಸ್ಥಳ ಪರಿಶೀಲನೆ ಮತ್ತು ವಾಸ್ತವ ಅಧ್ಯಯನ ಮಾಡುವುದಿಲ್ಲ, ತಮಿಳುನಾಡಿಗೆ ಕರ್ನಾಟಕ ಹರಿಸಬೇಕಾದ ನೀರಿನ ಪ್ರಮಾಣ ಕುರಿತು ಸಭೆಯಲ್ಲಿ ಚರ್ಚೆ ಮಾಡಿಲ್ಲ ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಅಧ್ಯಕ್ಷ ನವೀನ್‌ ಕುಮಾರ್‌ ತಿಳಿಸಿದ್ದಾರೆ.

No study and visit in cauvery valley this year

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆ ನಡೆದಿದೆ. ರಾಜ್ಯಗಳಿಂದ ಸಿಗುವ ಮಾಹಿತಿಯನ್ನೂ ಪ್ರಾಧಿಕಾರಕ್ಕೆ ನಾವು ಸಲ್ಲಿಸುತ್ತೇವೆ, ಸಂತಿಮ ನಿರ್ಧಾರವನ್ನು ಪ್ರಾಧಿಕಾರವೇ ತೆಗೆದುಕೊಳ್ಳುತ್ತದೆ. ಜು.19ರಂದು ಮತ್ತೊಂದು ಸಭೆ ನಡೆಯುವುದಾಗಿ ತಿಳಿಸಿದರು.

English summary
Because of good rain there will be no ground study from Cauvery management board. In last meeting there was no that kind of discussion too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X