ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಮನಿಸಿ, 120 ರು.ಗಿಂತ ಹೆಚ್ಚಿನ ದರಕ್ಕೆ ಬೇಳೆಕಾಳು ಮಾರುವಂತಿಲ್ಲ

By Madhusoodhan
|
Google Oneindia Kannada News

ಪಟ್ನಾ, ,ಮೇ 18: ಬೇಳೆ ಕಾಳುಗಳ ಬೆಲೆ ನಿಯಂತ್ರಣ, ಕಾಳಸಂತೆ ಮಾರಾಟದ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಯಾವುದೇ ರಾಜ್ಯವು ಕೆಜಿ ಉದ್ದು ಮತ್ತು ತೊಗರಿಯನ್ನು 120 ರು. ಗೂ ಅಧಿಕ ದರದಲ್ಲಿ ಮಾರಾಟ ಮಾಡಬಾರದು ಎಂದು ಕೇಂದ್ರ ಆಹಾರ ಸಚಿವ ರಾಮವಿಲಾಸ್‌ ಪಾಸ್ವಾನ್‌ ಸೂಚನೆ ನೀಡಿದ್ದಾರೆ.

ಮಳೆ ಕೊರತೆ, ಬರದ ಹಿನ್ನೆಲೆಯಲ್ಲಿ ಆಹಾರ ಧಾನ್ಯಗಳ ಬೆಲೆ ವಿಪರೀತ ಹೆಚ್ಚಳವಾಗಿದೆ. ಉದ್ದು ಮತ್ತು ಉದ್ದು ಕೆಜಿಗೆ 200 ರು. ತಲುಪಿದೆ. ಪರಿಹಾರಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ತನ್ನಲ್ಲಿರುವ ಲಭ್ಯ ದಾಸ್ತಾನಿನ ಮೂಲಕ ಕೆಜಿಗೆ 60 ರೂ. ದರದಲ್ಲಿ ತೊಗರಿಬೇಳೆ, 82 ರೂ. ದರದಲ್ಲಿ ಉದ್ದಿನಬೇಳೆಯನ್ನು ನೀಡಲು ಮುಂದಾಗಿದೆ.[ತೊಗರಿ ಬೇಳೆಗೆ ಬಂಗಾರದ ಬೆಲೆ ಬರಲು ಕಾರಣವೇನು?]

tur dal

ಸದ್ಯ ಮಾರುಕಟ್ಟೆ ದರ: ಬೆಂಗಳುರು ಸೇರಿದಂತೆ ಕರ್ನಾಟಕದ ವಿವಿಧೆಡೆ ಬೇಳೆ ಕಾಳುಗಳ ದರ ಗಗನದತ್ತ ಮುಖ ಮಾಡಿರುವುದು ಗೊತ್ತೆ ಇದೆ. ತೊಗರಿ ಬೇಳೆ 180-200 ರು ಇದ್ದರೆ ಉದ್ದಿನ ಬೇಳೆ 190-210 ರು. ಇದೆ.[ಚಿನ್ನ 30 ಸಾವಿರ ದಾಟಲು ಕಾರಣವೇನು]

ರಾಜ್ಯ ಸರ್ಕಾರಗಳು ಕೇಂದ್ರದ ದಾಸ್ತಾನಿನಿಂದ ಖರೀದಿ ಮಾಡಿ ಮಾರಾಟ ಮಾಡಿದರೆ ಮಾತ್ರ ದರ ನಿಯಂತ್ರಣ ಸಾಧ್ಯವಾಗಲಿದೆ. ಈಗಿರುವಂತೆ ಮಾರುಕಟ್ಟೆ ಸ್ಥಿತಿ ಮುಂದುವರಿದರೆ ಗ್ರಾಹಕರು ಇನ್ನಷ್ಟು ಬಸವಳಿಯುವುದು ನಿಶ್ಚಿತ.

English summary
Union Food Minister Ram Vilas Paswan said the Centre is ready to make available unmilled tur to states at Rs. 60 a kg and urad at Rs. 82 per kg, which should provide enough room to state governments to sell pulses below Rs.120.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X