ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೈಲಟ್‌ಗಳಿಗೆ ಏಪ್ರಿಲ್, ಮೇ ಸಂಬಳವಿಲ್ಲ ಎಂದ ಸ್ಪೈಸ್‌ಜೆಟ್

|
Google Oneindia Kannada News

ನವದೆಹಲಿ, ಏಪ್ರಿಲ್ 29: ಸ್ಪೈಸ್‌ಜೆಟ್ ಪೈಲಟ್ ಸೇರಿದಂತೆ ಇತರೆ ಸಿಬ್ಬಂದಿಗೆ ಏಪ್ರಿಲ್, ಮೇ ಸಂಬಳವಿಲ್ಲ ಎಂದು ಸ್ಪೈಸ್‌ಜೆಟ್ ತಿಳಿಸಿದೆ.

Recommended Video

ಬಿಜೆಪಿ ಸಂಸದೆಗೆ ಬೆವರಿಳಿಸಿದ ಪ್ರಯಾಣಿಕರು | BJP | PRAGYA THAKUR | ONEINDIA KANNADA

ಯಾರು ಕಾರ್ಗೊ ವಿಮಾನವನ್ನು ಓಡಿಸುತ್ತಿದ್ದಾರೋ ಅವರಿಗೆ ಗಂಟೆಗಳ ಲೆಕ್ಕದಲ್ಲಿ ಸಂಬಳ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಸ್ಪೈಸ್‌ಜೆಟ್ ವಿಮಾನದ ಮುಖ್ಯಸ್ಥ ಗುರುಚರಣ್ ಅರೋರಾ ಮಾತನಾಡಿ ಈಗ ಶೇ.16ರಷ್ಟು ವಿಮಾನವನ್ನು ಶೇ.20 ರಷ್ಟು ಪೈಲಟ್‌ಗಳು ಓಡಿಸುತ್ತಿದ್ದಾರೆ. ಈಗ ಸದ್ಯಕ್ಕೆ ಕೇವಲ ಐದು ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿವೆ.

No Salaries For April May For SpiceJet Piolts

116 ಪ್ಯಾಸೆಂಜರ್‌ ವಿಮಾನಗಳು ಹಾಗೂ ಇತರೆ ಐದು ವಿಮಾನಗಳು ಹಾರಾಟವನ್ನು ನಿಲ್ಲಿಸಿವೆ.ಮಾರ್ಚ್ 25ರಿಂದ ಭಾರತದಲ್ಲಿ ಲಾಕ್‌ಡೌನ್ ಮಾಡಲಾಗಿದೆ.ಹೀಗಾಗಿ ಎಲ್ಲಾ ಕಮರ್ಷಿಯಲ್, ಪ್ಯಾಸೆಂಜರ್ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಅನಿವಾರ್ಯ ಸಂದರ್ಭಗಳಲ್ಲಿ ಗಂಟೆಗಳ ಲೆಕ್ಕದಲ್ಲಿ ವಿಮಾನ ಹಾರಾಟವನ್ನು ನಡೆಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ವಿಮಾನ ಹಾರಾಟವನ್ನು ಹೆಚ್ಚಿಸಲಾಗುತ್ತದೆ. ವಿಮಾನಗಳ ಹಾರಾಟವನ್ನು ಶೇ.50 ರಷ್ಟು , ಅದರಲ್ಲಿ ಶೇ.100 ರಷ್ಟು ಪೈಲಟ್‌ಗಳು ಕಾರ್ಯ ನಿರ್ವಹಿಸಲಿದ್ದಾರೆ.

ಆದರೆ ಈಗ ಕಂಪನಿ ಇರುವ ಪರಿಸ್ಥಿತಿಯಲ್ಲಿ ಏಪ್ರಿಲ್, ಮೇ ತಿಂಗಳಿನ ಸಂಬಳ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.

English summary
SpiceJet on Wednesday told its pilots that they will not be paid salaries for April and May, and said those who have been operating cargo flights will get paid for “block hours flown”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X