ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯಕ್ಕೆ ನೂತನ ಎಚ್ 1ಬಿ ವೀಸಾ ನಿಯಮ ಇಲ್ಲ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 14: ಅಮೆರಿಕಕ್ಕೆ ಉದ್ಯೋಗ ನಿಮಿತ್ತ ತೆರಳಿರುವ ಲಕ್ಷಾಂತರ ಭಾರತೀಯರಿಗೆ ದುಃಸ್ವಪ್ನವಾಗಿರುವ ಎಚ್ 1ಬಿ ವೀಸಾ ನಿಬಂಧನೆಯನ್ನು ಸದ್ಯಕ್ಕೆ ಜಾರಿಗೊಳಿಸುವುದಿಲ್ಲ ಎಂದು ಅಮೆರಿಕದ ಅಧಿಕಾರಿಯೊಬ್ಬರು ಭರವಸೆ ನೀಡಿದ್ದಾರೆಂದು ಎನ್ ಡಿಟಿವಿ ವರದಿ ಮಾಡಿದೆ.

ಎಚ್ 1ಬಿ ವೀಸಾ ನಿಬಂಧನೆಗಳು ಭಾರತ ಹಾಗೂ ಅಮೆರಿಕ ನಡುವಿನ ಪ್ರವಾಸ ಹಾಗೂ ಔದ್ಯೋಗಿಕ ವಾತಾವರಣಕ್ಕೆ ಧಕ್ಕೆಯುಂಟಾಗುತ್ತದೆ ಎಂಬ ನಿಲುವು ವ್ಯಕ್ತವಾಗಿದೆ. ಇದೇ, ನಿಲುವು ಸೆ. 27ರಂದು ನಡೆಯಲಿರುವ ಭಾರತ ಹಾಗೂ ಅಮೆರಿಕದ ಅಧಿಕಾರಿಗಳ ಸಮಾವೇಶದಲ್ಲಿ ವ್ಯಕ್ತವಾಗಲಿದೆ.

No Restrictions For Now On H-1B Visas

ಈ ಬಗ್ಗೆ ಹೆಸರನ್ನೇಳಲು ಇಚ್ಛಿಸದ ಅಮೆರಿಕದ ರಾಜತಾಂತ್ರಿಕ ಅಧಿಕಾರಿಯೊಬ್ಬರು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭಾರತೀಯರಿಗೆ ಎಚ್1 ಬಿ ವೀಸಾಗಳನ್ನು ಹೆಚ್ಚಾಗಿ ನೀಡಲಾಗಿದೆ.

ನೂತನ ಎಚ್ 1ಬಿ ವೀಸಾ ಮೇಲಿನ ನಿಬಂಧನೆಗಳನ್ನು ಜಾರಿಗೊಳಿಸಿದರೆ ಉಭಯ ದೇಶಗಳ ಕೆಲ ವಿಚಾರಗಳಿಗೆ ಅಡಚಣೆಯಾಗುವುದರಿಂದ ಸದ್ಯಕ್ಕೆ ಈ ನಿಯಮಗಳನ್ನು ಜಾರಿಗೊಳಿಸಲಿದರು ಅಮೆರಿಕದ ಅಧ್ಯಕ್ಷ ಟ್ರಂಪ್ ನಿರ್ಧರಿಸಿದ್ದಾರೆಂದು ಅವರು ತಿಳಿಸಿದ್ದಾರೆಂದು ಎನ್ ಡಿ ಟಿವಿ ಹೇಳಿದೆ.

English summary
For now, the US is making no changes to the H-1B visa policy that affects thousands of Indians, said, American diplomats who asked not to be named because they are not authorized to speak to the media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X