ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರರಾಜ್ಯ ಆಮ್ಲಜನಕ ಪೂರೈಕೆ ವಾಹನಗಳಿಗೆ ಯಾವುದೇ ನಿರ್ಬಂಧವಿಲ್ಲ

|
Google Oneindia Kannada News

ನವದೆಹಲಿ, ಏಪ್ರಿಲ್ 22: ಹಲವು ರಾಜ್ಯಗಳಲ್ಲಿ ಆಮ್ಲಜನಕ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಅಂತರರಾಜ್ಯಗಳ ನಡುವೆ ಆಮ್ಲಜನಕ ಸಾಗಣೆ ಮಾಡುತ್ತಿರುವ ವಾಹನಗಳನ್ನು ತಡೆಹಿಡಿಯದಂತೆ ಕೇಂದ್ರ ಗೃಹ ಇಲಾಖೆ ಆದೇಶಿಸಿದೆ.

ಕರ್ಫ್ಯೂ ನಡುವೆ ಆಮ್ಲಜನಕ ಸಾಗಣೆಯ ವಾಹನಗಳ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಿ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದ್ದು, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳುವ ಆಕ್ಸಿಜನ್ ಹೊತ್ತ ವಾಹನಗಳನ್ನು ಸಾರಿಗೆ ಇಲಾಖೆ ತಡೆಯುವಂತಿಲ್ಲ ಎಂದು ತಿಳಿಸಿದೆ.

ಆಕ್ಸಿಜನ್ ಕದ್ದು ತರ್ತೀರೋ, ಭಿಕ್ಷೆ ಬೇಡುತ್ತೀರೋ, ಸಾಲ ತರ್ತೀರೋ ತನ್ನಿ: ದೆಹಲಿ ಹೈಕೋರ್ಟ್ಆಕ್ಸಿಜನ್ ಕದ್ದು ತರ್ತೀರೋ, ಭಿಕ್ಷೆ ಬೇಡುತ್ತೀರೋ, ಸಾಲ ತರ್ತೀರೋ ತನ್ನಿ: ದೆಹಲಿ ಹೈಕೋರ್ಟ್

ಆಸ್ಪತ್ರೆಗೆ ಆಮ್ಲಜನಕ ಪೂರೈಸುವ ಉದ್ದೇಶದೊಂದಿಗೆ ಆಮ್ಲಜನಕ ಉತ್ಪಾದನೆಯಲ್ಲಿ ತೊಡಗಿರುವ ಹಾಗೂ ಸರಬರಾಜು ಮಾಡುತ್ತಿರುವ ಕಾರ್ಯದ ಮೇಲೆ ಯಾವುದೇ ನಿರ್ಬಂಧ ಹೇರಲಾಗಿಲ್ಲ. ನಗರಗಳಿಗೆ ಯಾವುದೇ ಸಮಯದಲ್ಲಿ ಬೇಕಾದರೂ ಆಮ್ಲಜನಕ ಸಾಗಣೆ ವಾಹನಗಳು ಸಂಚರಿಸಲು ಅವಕಾಶ ನೀಡಲಾಗಿದೆ. ನಗರದೊಳಗೂ ನಿರ್ಬಂಧವಿಲ್ಲದೇ ಸಂಚರಿಸಬಹುದಾಗಿದೆ ಎಂದು ತಿಳಿಸಿದೆ.

No Restriction On Movement Of Medical Oxygen Between States

ಏಪ್ರಿಲ್ 22ರಿಂದ ಕೈಗಾರಿಕಾ ಉದ್ದೇಶಗಳಿಗೆ ಆಮ್ಲಜನಕ ಸಾಗಣೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

English summary
Ministry of Home Affairs said that no restriction on the movement of medical oxygen between states shall be imposed,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X