• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾರಿಗೂ ಬೇಡವಾದ ಎಐಸಿಸಿ ಅಧ್ಯಕ್ಷ ಹುದ್ದೆಗೆ 'ವೈ ನಾಟ್' ಡಿ ಕೆ ಶಿವಕುಮಾರ್?

|

ಲೋಕಸಭಾ ಚುನಾವಣಾ ಸೋಲಿನ ನಂತರ ಎಐಸಿಸಿ ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿ ರಾಜೀನಾಮೆ ನೀಡಿ ಐವತ್ತು ದಿನದ ಮೇಲಾಯಿತು. ಈ ಹುದ್ದೆಗೆ ದಿಕ್ಕುದೆಶೆ ಯಾರು ಎಂದು ಕೇಳಿದರೆ, ಕಾಂಗ್ರೆಸ್ಸಿನ ಹಿರಿಯ ಮುಖಂಡರು ಆಕಾಶ ನೋಡುತ್ತಿದ್ದಾರೆ, ಅಲ್ಲಿಗೆ ಕಾರ್ಯಕರ್ತರು ತಬ್ಬಿಬ್ಬು.

ಶತಮಾನಗಳ ಇತಿಹಾಸವಿರುವ ರಾಷ್ಟ್ರೀಯ ಪಕ್ಷಕ್ಕೇ ಹೀಗಾದರೆ, ಅದಕ್ಕಿಂತ ಪ್ರಾದೇಶಿಕ ಪಕ್ಷಗಳೇ ಬೆಟರ್ ಅಲ್ಲವೇ ಎನ್ನುವ ಪ್ರಶ್ನೆ ಕಾಡುವುದು ಸಹಜ. ಈ ಹುದ್ದೆಯನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ಸಿನ ಮುಖಂಡರಿಗೆ ಇರುವ ತೊಂದರೆಯಾದರೂ ಏನು?

ಫಲಿತಾಂಶ ಏನೇ ಬರಲಿ ಡಿ ಕೆ ಶಿವಕುಮಾರ್ 'ಖದರ್' ಗೊಂದು ಭಲೇ..ಭಲೇ..

ಸದ್ಯದ ಮಟ್ಟಿಗೆ ನರೇಂದ್ರ ಮೋದಿಯನ್ನು ಎದುರಿಸುವುದು ಕಷ್ಟವಾ, ಬಿಜೆಪಿಯವರ ಆಕ್ರಮಣಕಾರಿ ರಾಜಕೀಯಕ್ಕಾಗಿ ಹಿಂದೆ ಸರಿಯುತ್ತಿದ್ದಾರಾ ಅಥವಾ ಗಾಂಧಿ ಮತ್ತು ನೆಹರೂ ಕುಟುಂಬದ ಹೊರತಾಗಿ ಯಾರೇ ಅಧ್ಯಕ್ಷರಾದರೂ, ಅದು ನಾಮಕೇವಾಸ್ತೆ ಎನ್ನುವ ಭಯನೋ? ಇಲ್ಲಿ, ಬಿಜೆಪಿಗೆ ಈ ಸಮಸ್ಯೆಯಿಲ್ಲ ಅದೇ ಆ ಪಕ್ಷಕ್ಕಾಗುವ ಪ್ಲಸ್ ಪಾಯಿಂಟ್.

ಈಗಲೂ ನಾವು ವಿಪ್ ಜಾರಿಗೊಳಿಸಬಹುದು, ಸುಪ್ರೀಂ ತೀರ್ಪಿನ ಬಗ್ಗೆ ಡಿಕೆಶಿ

ಅದೇನೇ ಇರಲಿ, ಪಕ್ಷ ಎಂದ ಮೇಲೆ ಅದಕ್ಕೊಂದು ಅಧ್ಯಕ್ಷರು ಬೇಡವೇ? ಇನ್ನು ಕೆಲವು ತಿಂಗಳಲ್ಲಿ ಹಲವು ರಾಜ್ಯಗಳ ಅಸೆಂಬ್ಲಿ ಚುನಾವಣೆ ಎದುರಾಗುತ್ತಿದೆ. ಹೊಸ ಅಧ್ಯಕ್ಷರನ್ನು ನೇಮಿಸುವ ದಿನಾಂಕವನ್ನು ಜುಲೈ 22ಕ್ಕೆ ಕಾಂಗ್ರೆಸ್ ಸದ್ಯಕ್ಕೆ ಮುಂದೂಡಿದೆ. ಹಿರಿಯರನ್ನು ಆಯ್ಕೆ ಮಾಡಬೇಕೋ, ಯುವಕರನ್ನು ಅಧ್ಯಕ್ಷರನ್ನಾಗಿ ಮಾಡಬೇಕೋ ಎನ್ನುವ ಗೊಂದಲದಲ್ಲಿ ಕಾಂಗ್ರೆಸ್ ಇದೆ. ಈ ಸಂದರ್ಭದಲ್ಲಿ, ರಾಜ್ಯದ ಕಾರ್ಯಕರ್ತರಲ್ಲಿ, ಡಿ ಕೆ ಶಿವಕುಮಾರ್ ಈ ಹುದ್ದೆಗೆ ಯಾಕೆ ಅರ್ಹರಲ್ಲ ಎನ್ನುವ ಮಾತು ಅಲ್ಲಲ್ಲಿ ಶುರುವಾಗಿದೆ.

ಎಲ್ಲಾ ತಂತ್ರವನ್ನು ಬಳಸುವ ತಾಕತ್ತನ್ನು ಹೊಂದಿರುವ ಕನಕಪುರದ ಬಂಡೆ

ಎಲ್ಲಾ ತಂತ್ರವನ್ನು ಬಳಸುವ ತಾಕತ್ತನ್ನು ಹೊಂದಿರುವ ಕನಕಪುರದ ಬಂಡೆ

ರಾಜೀವ್ ಗಾಂಧಿ ಕುಟುಂಬಕ್ಕೂ ನಂಬಿಗಸ್ಥ, ರಾಜಕೀಯವಾಗಿ ಎಲ್ಲಾ ತಂತ್ರವನ್ನು ಬಳಸುವ ತಾಕತ್ತನ್ನು ಹೊಂದಿರುವ ನಮ್ಮ ಕನಕಪುರದ ಬಂಡೆ, ಟ್ರಬಲ್ ಶೂಟರ್ ಎಂದೇ ಕರೆಯಲ್ಪಡುತ್ತಿರುವ ಡಿ ಕೆ ಶಿವಕುಮಾರ್ ಅವರನ್ನು ಈ ಹುದ್ದೆಗೆ ಯಾಕೆ ನೇಮಿಸಬಾರದು? ಯಾಕೆಂದರೆ, ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ, ಹಲವು ವಿಧದ ರಾಜಕೀಯವನ್ನು ಡಿಕೆಶಿ ಮಾಡಿ, ಮುಗಿಸಿದ್ದಾರೆ.

ವಿಷ್ಣುವರ್ಧನ್ ಅಭಿನಯದ ಲಯನ್ ಜಗಪತಿ ರಾವ್ ಸಿನಿಮಾ

ವಿಷ್ಣುವರ್ಧನ್ ಅಭಿನಯದ ಲಯನ್ ಜಗಪತಿ ರಾವ್ ಸಿನಿಮಾ

ವಿಷ್ಣುವರ್ಧನ್ ಅಭಿನಯದ 'ಲಯನ್ ಜಗಪತಿ ರಾವ್' ಸಿನಿಮಾದಲ್ಲಿನ ಒಂದು ಡೈಲಾಗ್ ಹೀಗಿದೆ. ರಾಜಕೀಯದಲ್ಲಿ ದಿಗ್ವಿಜಯ ಸಾಧಿಸಬೇಕೆಂದರೆ, ಲಾಯರ್ ಗಿರುವ ಬುದ್ದಿವಂತಿಕೆ, ಪೊಲೀಸರಿಗೆ ಇರುವ ಧೈರ್ಯ, ವೈದ್ಯರಿಗೆ ಇರುವ ತಾಳ್ಮೆ, ಇಂಜಿನಿಯರ್ ಗಿರುವ ಪ್ಲ್ಯಾನ್, ಕಟುಕನಿಗಿರುವ ಕಲ್ಲು ಮನಸ್ಸು, ಚಪ್ಪಲಿ ಹೊಲಿಯುವವನಿಗಿರುವ ಸಹನೆ, ಅವಶ್ಯಕತೆ ಇದ್ದರೆ ಆಕಾಶದಲ್ಲಿ ಭೂಕಂಪ ಎಬ್ಬಿಸುವ ತಾಕತ್ತು ಸಾಗರದಲ್ಲಿ ಕಾಮನಬಿಲ್ಲು ಮೂಡಿಸುವ ಚಾತುರ್ಯ". ಇರಬೇಕೆಂದು.

ವಿರೋಧಿಗಳ ಎಲ್ಲಾ ಪ್ರಯತ್ನಗಳನ್ನೂ ವಿಭಿನ್ನ ತಂತ್ರಗಾರಿಕೆಯ ಮೂಲಕ ಹಿಮ್ಮೆಟ್ಟಿಸಿದ್ದು

ವಿರೋಧಿಗಳ ಎಲ್ಲಾ ಪ್ರಯತ್ನಗಳನ್ನೂ ವಿಭಿನ್ನ ತಂತ್ರಗಾರಿಕೆಯ ಮೂಲಕ ಹಿಮ್ಮೆಟ್ಟಿಸಿದ್ದು

ಈ ಎಲ್ಲಾ ಗುಣಗಳು ಡಿ ಕೆ ಶಿವಕುಮಾರ್ ಅವರಿಗೆ ಇದೆಯೋ, ಅಥವಾ ಇಷ್ಟೆಲ್ಲಾ ರಾಜಕೀಯಕ್ಕೆ ಬೇಕೋ, ಅಥವಾ ಇನ್ನೂ ಜಾಸ್ತಿ ಬೇಕೋ, ಅದು ನಂತರದ ವಿಚಾರ. ಕಳೆದ ಹದಿನಾಲ್ಕು ತಿಂಗಳಲ್ಲಿ ಸಮ್ಮಿಶ್ರ ಸರಕಾರ ಎದುರಿಸಿದ ಅಡೆತಡೆಗಳು ಒಂದೆರಡಲ್ಲ. ವಿರೋಧಿಗಳ ಎಲ್ಲಾ ಪ್ರಯತ್ನಗಳನ್ನೂ ವಿಭಿನ್ನ ತಂತ್ರಗಾರಿಕೆಯ ಮೂಲಕ ಡಿಕೆಶಿ ಹಿಮ್ಮೆಟ್ಟಿಸಿದ್ದು ಒಂದೆಡೆಯಾದರೆ, ಎದುರಾದ ಉಪಚುನಾವಣೆಯಲ್ಲಿ ಉಸ್ತುವಾರಿ ವಹಿಸಿಕೊಂಡ ಕ್ಷೇತ್ರದಲ್ಲೆಲ್ಲಾ ಪಕ್ಷವನ್ನು ದಡಮುಟ್ಟಿಸಿದ್ದು ಇವರ ಹಿರಿಮೆ.

ಮಣಿಶಂಕರ್ ಅಯ್ಯರ್ ಕೂಡಾ ಅವರ ಡೆಡಿಕೇಷನ್ ಅವರನ್ನು ಮುಕ್ತಕಂಠದಿಂದ ಹೊಗಳಿದ್ದರು

ಮಣಿಶಂಕರ್ ಅಯ್ಯರ್ ಕೂಡಾ ಅವರ ಡೆಡಿಕೇಷನ್ ಅವರನ್ನು ಮುಕ್ತಕಂಠದಿಂದ ಹೊಗಳಿದ್ದರು

ಮುಂಬೈನಲ್ಲಿ ಅತೃಪ್ತರನ್ನು ಕರೆದುಕೊಂಡು ಬರಲು ಹೋಗಿದ್ದು, ಭೇಟಿ ಸಾಧ್ಯವಾಗದೇ ಇದ್ದಾಗ ಹೊಟೇಲ್ ನಲ್ಲಿ ಹೊರಗೆ ಕೂತಿದ್ದು, ಇದೆಲ್ಲಾ ರಾಜಕೀಯ ಹೈಡ್ರಾಮಾ, ನ್ಯಾಷನಲ್ ಚಾನೆಲ್ ಗಳಲ್ಲಿ ಭಾರೀ ಪ್ರಚಾರವಾಗಿತ್ತು. ಪಕ್ಷದ ಸಂದಿಗ್ದ ಪರಿಸ್ಥಿತಿಯಲ್ಲಿ ಡಿ ಕೆ ಶಿವಕುಮಾರ್ ತೋರುತ್ತಿರುವ ನಿಯತ್ತು ಪ್ರಶ್ನಾತೀತ. ಇತ್ತೀಚೆಗೆ ಮಣಿಶಂಕರ್ ಅಯ್ಯರ್ ಕೂಡಾ ಅವರ ಡೆಡಿಕೇಷನ್ ಅವರನ್ನು ಮುಕ್ತಕಂಠದಿಂದ ಹೊಗಳಿದ್ದರು.

ಡಿಕೆಶಿ ಹಿ ಈಸ್ ದ ರಈತ್ ಚಾಯ್ಸ್ ಬೇಬಿ

ಡಿಕೆಶಿ ಹಿ ಈಸ್ ದ ರಈತ್ ಚಾಯ್ಸ್ ಬೇಬಿ

ಜ್ಯೋತಿರಾದಿತ್ಯ ಸಿಂಧಿಯಾ, ಸಚಿನ್ ಪೈಲಟ್ ಅಧ್ಯಕ್ಷ ಹುದ್ದೆಯ ರೇಸಿನಲ್ಲಿ ಕೇಳಿ ಬರುತ್ತಿರುವಂತಹ ಹೆಸರುಗಳು. ಇನ್ನು ಕೆಲವು ಕಾಂಗ್ರೆಸ್ಸಿಗರು, ಪ್ರಿಯಾಂಕ ಗಾಂಧಿ ಆಗಲೆಂದು ಒತ್ತಾಯ ಶುರು ಮಾಡಿದ್ದಾರೆ. ಇವೆಲ್ಲದರ ನಡುವೆ, ಪಕ್ಷಕ್ಕಾಗಿ ಡಿಕೆಶಿ ತೋರುತ್ತಿರುವ ಕಮಿಟ್ಮೆಂಟಿಗೆ ಕಾಂಗ್ರೆಸ್ ಹೈಕಮಾಂಡ್ ಪ್ರತಿಯಾಗಿ ಉನ್ನತ ಹುದ್ದೆ ನೀಡಲು ಮುಂದಾದರೆ, ಅವರ ಇದುವರೆಗಿನ ಪಕ್ಷದ ನಿಯತ್ತಿಗೆ ಬೆಲೆ ನೀಡಿದಂತಾಗಬಹುದು. ಇನ್ನು, ಪಕ್ಕದ ಆಂಧ್ರ, ತೆಲಂಗಾಣದಲ್ಲೂ ಪ್ರಚಾರ ನಡೆಸಿದ್ದಾರೆ, ಇಂಗ್ಲಿಷ್ ಮೇಲೆನೂ ಇವರಿಗೆ ಹಿಡಿತಾನೂ ಇದೆ, ಗಾಂಧಿ ಕುಟುಂಬದ ಮೇಲಿನ ನಿಷ್ಠೆಯ ಬಗ್ಗೆ ಮಾತನಾಡುವಹಾಗಿಲ್ಲ, ಹಿ ಈಸ್ ದಿ ರೈಟ್ ಚಾಯ್ಸ್ ಬೇಬಿ..

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It is almost 50+ days after Rahul Gandhi resignation from party President post, no one is interested in AICC President post. Why can't Karnataka Minister DK Shivakumar for that post?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more