ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇರೆಯವರ ಮುಲಾಜಿಗೆ ಭಾರತ ಬೀಳುವ ಕಾಲ ಹೋಯಿತು: ಜೈಶಂಕರ್

|
Google Oneindia Kannada News

ನವದೆಹಲಿ, ಏ. 27: ಭಾರತದ ಮೇಲೆ ಬೇರೆಯವರು ಹತೋಟಿ ಸಾಧಿಸುವ ಕಾಲ ಮುಗಿಯಿತು. ಈಗೇನಿದ್ದರೂ ಭಾರತ ಅಂದುಕೊಂಡ ರೀತಿಯಲ್ಲೇ ವ್ಯವಹಾರ ನಡೆಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಇಲ್ಲಿ ನಡೆದ ರಾಯಸೀನಾ ಸಂವಾದ (Raisina Dialogue) ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಎಸ್ ಜೈಶಂಕರ್, ಭಾರತ ಏನು ಮಾಡಬೇಕು ಎಂದು ಬೇರೆಯವರು ದಿಗ್ದರ್ಶಿಸುವ ಯುಗ ಮುಗಿಯಿತು. ಬೇರೆ ದೇಶಗಳ ಮುಲಾಜಿಗೆ ಭಾರತ ಬಗ್ಗುವುದಿಲ್ಲ. ತನ್ನ ಹಿತಾಸಕ್ತಿಗೆ ಯಾವುದು ಮುಖ್ಯವೋ ಆ ನಿಟ್ಟಿನಲ್ಲಿ ನಿರ್ಧಾರಕ್ಕೆ ಭಾರತ ಬದ್ಧವಾಗಿರುತ್ತದೆ ಎಂದು ಸ್ಷಷ್ಪಪಡಿಸಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿ ಭಾರತದ ತಟಸ್ಥ ನಿಲುವಿನ ಬಗ್ಗೆ ಪಾಶ್ಚಿಮಾತ್ಯ ದೇಶಗಳು ಎತ್ತಿರುವ ತಗಾದೆ ಬಗ್ಗೆ ಮಾತನಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ನಿಯಮ ಆಧಾರಿತ ವ್ಯವಸ್ಥೆ (Rules Based Order) ಅಪಾಯಕ್ಕೆ ಸಿಲುಕಿದಾಗ ಮತ್ತು ಅಫ್ಘಾನಿಸ್ತಾನದಲ್ಲಿ ನಾಗರಿಕ ಸಮಾಜವನ್ನ ನಡುನೀರಲ್ಲಿ ಕೈಬಿಟ್ಟಾಗ ಈ ವಿಶ್ವ ದೇಶಗಳು ಎಲ್ಲದ್ದವು ಎಂದು ಪ್ರಶ್ನಿಸಿದ್ದಾರೆ.

ಪೆಟ್ರೋಲ್-ಡೀಸೆಲ್ ತೆರಿಗೆ ಕಡಿತಗೊಳಿಸಲು ರಾಜ್ಯಗಳಿಗೆ ಪ್ರಧಾನಿ ಕರೆಪೆಟ್ರೋಲ್-ಡೀಸೆಲ್ ತೆರಿಗೆ ಕಡಿತಗೊಳಿಸಲು ರಾಜ್ಯಗಳಿಗೆ ಪ್ರಧಾನಿ ಕರೆ

ಏನಿದು ನಿಯಮ ಆಧಾರಿತ ವ್ಯವಸ್ಥೆ:
ರೂಲ್ಸ್ ಬೇಸ್ಡ್ ಆರ್ಡರ್ ಎಂಬುದು ವಿವಿಧ ದೇಶಗಳು ಸಾಮಾನ್ಯ ನಿಯಮಗಳನ್ನ ರೂಪಿಸಿಕೊಂಡು ಅದಕ್ಕೆ ಬದ್ಧವಾಗಿರುವುದು. ಅಂತಾರಾಷ್ಟ್ರೀಯ ಕಾನೂನು, ಭದ್ರತಾ ವ್ಯವಸ್ಥೆ, ವ್ಯಾಪಾರ ಒಪ್ಪಂದ, ವಲಸೆ ನಿಯಮಗಳು, ಸಾಂಸ್ಕೃತಿಕ ವ್ಯವಸ್ಥೆ ಮೊದಲಾದ ವಿಷಯಗಳಲ್ಲಿ ವಿವಿಧ ದೇಶಗಳು ಸಾಮಾನ್ಯ ನಿಯಮಗಳನ್ನ ರಚಿಸಿಕೊಳ್ಳುತ್ತವೆ. ಎಲ್ಲಾ ದೇಶಗಳು ಈ ನಿಯಮಗಳಿಗೆ ಬದ್ಧವಾಗಿರಬೇಕೆಂಬ ಅಘೋಷಿತ ಕಟ್ಟುಪಾಡು ಅಥವಾ ಜವಾಬ್ದಾರಿತನ ಇರುತ್ತದೆ.

No one can dictate India now, says EAM S Jaishankar at Raisina Dialogue

"ನಿಯಮ ಆಧಾರಿತ ವ್ಯವಸ್ಥೆ ಏಷ್ಯಾದಲ್ಲಿ ಅಪಾಯಕ್ಕೆ ಸಿಲುಕಿದಾಗ, ವ್ಯಾಪಾರ ಹೆಚ್ಚಿಸಿ ಎಂಬುದು ಯೂರೋಪ್ ಕೊಟ್ಟ ಸಲಹೆಯಾಗಿತ್ತು. ನಾವಂತೂ ಆ ಸಲಹೆಯನ್ನ ನಿಮಗೆ ಕೊಡುತ್ತಿಲ್ಲ" ಎಂದು ಐರೋಪ್ಯ ದೇಶಗಳನ್ನ ಜೈಶಂಕರ್ ಕುಟುಕಿದ್ದಾರೆ.
ಭಾರತಕ್ಕೆ ಈ ಹಿಂದೆ ಭದ್ರತಾ ಅಪಾಯ ಎದುರಾದಾಗ (ಚೀನಾದಿಂದ) ಯೂರೋಪ್ ಕಂಡೂಕಾಣದಂತೆ ಇತ್ತು ಎಂದು ಅವರು ಕಿಡಿಕಾರಿದ್ದಾರೆ.

ಕೊರೊನಾವೈರಸ್ ನಿಯಂತ್ರಣಕ್ಕಾಗಿ ಲಸಿಕೆ ವಿತರಣೆಗೆ ವೇಗ ನೀಡಲು ಪ್ರಧಾನಿ ಕರೆಕೊರೊನಾವೈರಸ್ ನಿಯಂತ್ರಣಕ್ಕಾಗಿ ಲಸಿಕೆ ವಿತರಣೆಗೆ ವೇಗ ನೀಡಲು ಪ್ರಧಾನಿ ಕರೆ

"ಯೂರೋಪ್‌ನಲ್ಲಿ ನಡೆಯುತ್ತಿರುವ ಘಟನೆಗಳು ಮುಂದೆ ಏಷ್ಯಾದಲ್ಲೂ ಎದುರಾಗಬಹುದು ಎಂದು ಎಚ್ಚರಿಸುವ ವಾದಗಳನ್ನ ಯೂರೋಪ್‌ನವರು ಮುಂದಿಡುತ್ತಿದ್ದಾರೆ. ಆದರೆ, ಕಳೆದ 10 ವರ್ಷಗಳಿಂದ ಏಷ್ಯಾದಲ್ಲಿ ಇವು ಘಟಿಸುತ್ತಿವೆ. ಚೀನಾದಕ್ಕಿಂತ ಮುಂಚೆ ಉಕ್ರೇನ್ ಘಟನೆ ನಡೆದದ್ದಲ್ಲ" ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು ತೀಕ್ಷ್ಣ ಹೇಳಿಕೆ ನೀಡಿದ್ದಾರೆ.

"ಯೂರೋಪ್ ಇದನ್ನು (ಉಕ್ರೇನ್ ಯುದ್ಧ) ಎದುರುನೋಡಿರಲಿಲ್ಲ. ಏಷ್ಯಾದಲ್ಲಿನ ಬೆಳವಣಿಗೆಯನ್ನ ಗಮನಿಸಲು ಯೂರೋಪ್‌ಗೆ ಇದು ಒಂದು ಕರೆಗಂಟೆಯಾಗಿದೆ. ಬಗೆಹರಿಯದ ಗಡಿಕಗ್ಗಂಟು, ಭಯೋತ್ಪಾದನೆ ಸಮಸ್ಯೆಗಳು ಹಾಗು ನಿಯಮ ಆಧಾರಿ ವ್ಯವಸ್ಥೆಗೆ ನಿರಂತರವಾಗಿ ಒದಗಿಬರುವ ಸವಾಲುಗಳನ್ನ ನಾವು ಏಷ್ಯಾದಲ್ಲಿ ಕಾಣಬಹುದು. ಸಮಸ್ಯೆಗಳು ಎದುರಾಗಬಹುದು ಎನ್ನುವುದಕ್ಕಿಂತ ಸಮಸ್ಯೆಗಳು ಈಗಾಗಲೇ ಚಾಲನೆಯಲ್ಲಿವೆ ಎಂಬುದನ್ನು ಏಷ್ಯೇತರ ದೇಶಗಳು ಅರಿಯಬೇಕು" ಎಂದು ಜೈಶಂಕರ್ ತಿಳಿಹೇಳಿದ್ದಾರೆ. ಇನ್ನು, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಬಗ್ಗೆ ಭಾರತದ ಸಲಹೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯುದ್ಧ ನಿಲ್ಲಿಸಿ ಮಾತುಕತೆ ನಡೆಸುವುದೇ ಸೂಕ್ತ ಪರಿಹಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಏನಿದು ರಾಯಸಿನಾ ಡೈಲಾಗ್:
ಕಳೆದ 6 ವರ್ಷಗಳಿಂದ ಭಾರತದಲ್ಲಿ ನಡೆಯುತ್ತಿರುವ ವಿಶೇಷ ಚಿಂತನಾ ಸಮಾವೇಶವಾಗಿದೆ. ಇದು ಪ್ರತೀ ವರ್ಷ ನಡೆಯುತ್ತದೆ. ರಾಜಕೀಯ ಮತ್ತು ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸುವ ಪ್ರತಿಷ್ಠಿತ ವೇದಿಕೆಯಾಗಿದೆ. ವಿಶ್ವದ ಹಲವು ದೇಶಗಳ ಪ್ರಮುಖರು ಅಥವಾ ಪ್ರತಿನಿಧಿಗಳು ಈ ವಾರ್ಷಿಕ ಚಿಂತನಾ ಸಮಾವೇಶಕ್ಕೆ ಬಂದು ತಮ್ಮ ಅಭಿಪ್ರಾಯ ಮಂಡನೆ ಮಾಡುತ್ತಾರೆ, ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ಕೇವಲ ಸರಕಾರಿ ಮುಖ್ಯಸ್ಥರು ಮಾತ್ರವಲ್ಲ, ಶೈಕ್ಷಣಿಕ ಪರಿಣಿತರು, ಮಾಧ್ಯಮದವರು, ಖಾಸಗಿ ಉದ್ಯಮ ವಲಯದ ಪ್ರಮುಖರು ರಾಯಸಿನಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

No one can dictate India now, says EAM S Jaishankar at Raisina Dialogue

ರಾಯಸಿನಾ ಹೆಸರೇಕೆ?
ರಾಷ್ಟ್ರಪತಿಗಳ ಬಂಗಲೆ ಇರುವ ದೆಹಲಿಯ ರಾಯಸಿನಾ ಹಿಲ್ ಪ್ರದೇಶದಲ್ಲಿ ಈ ಕಾರ್ಯಕ್ರಮ ನಡೆಯುವುದರಿಂದ ರಾಯಸಿನಾ ಡೈಲಾಗ್ ಎಂದು ಹೆಸರಿಸಲಾಗಿದೆ. ಈ ವರ್ಷ ನಡೆಯುತ್ತಿರುವುದು ಇದು 7ನೇ ಕಾರ್ಯಕ್ರಮವಾಗಿದೆ. ಏಪ್ರಿಲ್ 25ರಂದು ಆರಂಭಗೊಂಡ ಇದು ಇವತ್ತು ಮುಕ್ತಾಯವಾಗುತ್ತಿದೆ.

ಕೆನಡಾ, ಆಸ್ಟ್ರೇಲಿಯಾ, ನೆದರ್‌ಲೆಂಡ್ಸ್, ಜಪಾನ್, ಅಮೆರಿಕ, ಯುಎಇ, ಆರ್ಮೇನಿಯಾ, ಪೋರ್ಚುಗಲ್, ನೈಜೀರಿಯಾ ಮೊದಲಾದ ದೇಶಗಳಿಂದ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

(ಒನ್ಇಂಡಿಯಾ ಸುದ್ದಿ)

English summary
India will engage with the world on its own terms and the country does not require anyone's approval to do so, External Affairs Minister S. Jaishankar asserted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X