ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಮೊದಲು 2 ಡೋಸ್ ನೀಡಿ, ಬೂಸ್ಟರ್ ಡೋಸ್ ಚಿಂತೆ ಬಿಡಿ!

|
Google Oneindia Kannada News

ನವದೆಹಲಿ, ನವೆಂಬರ್ 24: ಭಾರತದಲ್ಲಿ ಸದ್ಯದ ಪರಿಸ್ಥಿತಿಗೆ ಕೊವಿಡ್-19 ಬೂಸ್ಟರ್ ಡೋಸ್ ಲಸಿಕೆಯನ್ನು ನೀಡುವ ಅಗತ್ಯವಿಲ್ಲ. ಅದರ ಬದಲಿಗೆ ಲಸಿಕೆಯು ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪಿಸುವತ್ತ ಹೆಚ್ಚು ಗಮನ ಹರಿಸಬೇಕಿದೆ ಎಂದು ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ತಿಳಿಸಿದ್ದಾರೆ. ದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ಸಾಧ್ಯತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂದು ಹೇಳಿದ್ದಾರೆ.

ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ತಯಾರಿಕೆಯ ಕುರಿತಾಗಿ ಐಸಿಎಂಆರ್ ಮಹಾನಿರ್ದೇಶಕ ಡಾ ಬಲರಾಮ್ ಭಾರ್ಗವ ಬರೆದ "ಗೋಯಿಂಗ್ ವೈರಲ್" ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ ಗುಲೇರಿಯಾ ಮಾತನಾಡಿದ್ದಾರೆ.

ಭಾರತದಲ್ಲಿ 2 ಡೋಸ್ ಪಡೆದವರಿಗೆ 3ನೇ ಡೋಸ್ ಕೊವಿಡ್-19 ಲಸಿಕೆಭಾರತದಲ್ಲಿ 2 ಡೋಸ್ ಪಡೆದವರಿಗೆ 3ನೇ ಡೋಸ್ ಕೊವಿಡ್-19 ಲಸಿಕೆ

"ನಾವೀಗ ಉತ್ತಮವಾದ ಸ್ಥಿತಿಯಲ್ಲಿದ್ದು ಸುರಕ್ಷಿತರಾಗಿದ್ದೇವೆ. ಈ ಹಂತದಲ್ಲಿ ಜನರಿಗೆ ಮೊದಲ ಡೋಸ್ ಮತ್ತು ಎರಡನೇ ಡೋಸ್ ಲಸಿಕೆ ನೀಡುವತ್ತ ನಾವು ಹೆಚ್ಚಿನ ಗಮನ ಹರಿಸಬೇಕಾಗಿದೆ. ಏಕೆಂದರೆ ಮೊದಲ ಎರಡು ಡೋಸ್ ಪಡೆದವರ ಸಂಖ್ಯೆಯನ್ನು ಹೆಚ್ಚಿಸಿದಷ್ಟು ನಾವು ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ, ಎಂದು ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ.

ಭಾರತೀಯರಿಗೆ ಸದ್ಯಕ್ಕೆ ಬೂಸ್ಟರ್ ಡೋಸ್ ಅಗತ್ಯವಿಲ್ಲ

ಭಾರತೀಯರಿಗೆ ಸದ್ಯಕ್ಕೆ ಬೂಸ್ಟರ್ ಡೋಸ್ ಅಗತ್ಯವಿಲ್ಲ

"ಕೊರೊನಾವೈರಸ್ ಲಸಿಕೆಗಳು ಸೋಂಕು ಹರಡುವುದನ್ನು ನಿಯಂತ್ರಿಸುತ್ತಿವೆ. ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಂಕಿನ ಭೀತಿ ಹೆಚ್ಚಾಗುತ್ತಿರುವುದು ಕಂಡು ಬಂದಿಲ್ಲ, ನಮ್ಮ ಸೆರೋ-ಪಾಸಿಟಿವಿಟಿ ದರವು ತುಂಬಾ ಹೆಚ್ಚಾಗಿದೆ. ಇವೆಲ್ಲವೂ ಪ್ರಸ್ತುತವಾಗಿ, ನಮಗೆ ನಿಜವಾಗಿಯೂ ಬೂಸ್ಟರ್ ಡೋಸ್ ಅಗತ್ಯವಿಲ್ಲ ಎಂದು ಸೂಚಿಸುತ್ತದೆ. ಭವಿಷ್ಯದಲ್ಲಿ ನಮಗೆ ಬೂಸ್ಟರ್ ಡೋಸ್ ಬೇಕಾಗಬಹುದು, ಅದು ಖಂಡಿತವಾಗಿಯೂ ಇರುತ್ತದೆ, ಆದರೆ ಸದ್ಯಕ್ಕೆ ನಮಗೆ ಬೂಸ್ಟರ್ ಡೋಸ್ ಅಗತ್ಯವಿಲ್ಲ," ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಕೊರೊನಾವೈರಸ್ ಮೂರನೇ ಅಲೆ

ಭಾರತದಲ್ಲಿ ಕೊರೊನಾವೈರಸ್ ಮೂರನೇ ಅಲೆ

"ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನದ ಸಂದರ್ಭದಲ್ಲಿ ನಾವು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇವೆ. ಲಸಿಕೆ ಕೊರತೆ, ಲಸಿಕೆ ಹಾಕಿಸಿಕೊಳ್ಳುವಲ್ಲಿ ಸಾರ್ವಜನಿಕರ ಹಿಂಜರಿಕೆ ನಡುವೆಯೂ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಾಗಿದೆ. ಈ ಹಂತದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಕೊರೊನಾವೈರಸ್ ಮೂರನೇ ಅಲೆಯ ಸಾಧ್ಯತೆಯೂ ಕಡಿಮೆಯಾಗಿದೆ. ನಾವು ದೊಡ್ಡ ಮಟ್ಟದಲ್ಲಿ ಕೊವಿಡ್-19 ಮೂರನೇ ಅಲೆಯನ್ನು ನೋಡುವುದು ತೀರಾ ವಿರಳವಾಗಿರುತ್ತದೆ," ಎಂದು ಡಾ. ರಂದೀಪ್ ಗುಲೇರಿಯಾ ಸ್ಪಷ್ಟಪಡಿಸಿದ್ದಾರೆ.

ಕೊವಿಡ್-19 ಸೋಂಕು ಸಂಪೂರ್ಣವಾಗಿ ನಿಯಂತ್ರಣವಾಗಿಲ್ಲ

ಕೊವಿಡ್-19 ಸೋಂಕು ಸಂಪೂರ್ಣವಾಗಿ ನಿಯಂತ್ರಣವಾಗಿಲ್ಲ

"ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳೇ ಪತ್ತೆಯಾಗುವುದಿಲ್ಲ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಕೊರೊನಾವೈರಸ್ ರೋಗದಿಂದ ಬಳಲುತ್ತಿರುವ ಜನರು ಇಂದಿಗೂ ನಮ್ಮ ನಡುವೆ ಇದ್ದಾರೆ. ಆದರೆ ಮೊದಲ ಮತ್ತು ಎರಡನೇ ಅಲೆಯಲ್ಲಿ ಕಾಣಿಸಿಕೊಂಡಷ್ಟು ಮಾರಕವಾಗಿ ಇರುವುದಿಲ್ಲ. ನಮ್ಮಲ್ಲಿ ಬಹುಪಾಲು ಜನರು ಸುರಕ್ಷಿತವಾಗಿದ್ದೇವೆ," ಎಂದಿದ್ದಾರೆ.

ಭಾರತದಲ್ಲಿ ಬೂಸ್ಟರ್ ಡೋಸ್ ಬಗ್ಗೆ ಹೆಚ್ಚಿನ ಸಂಶೋಧನೆ

ಭಾರತದಲ್ಲಿ ಬೂಸ್ಟರ್ ಡೋಸ್ ಬಗ್ಗೆ ಹೆಚ್ಚಿನ ಸಂಶೋಧನೆ

ದೇಶದಲ್ಲಿ ಕೊವಿಡ್-19 ಲಸಿಕೆಯ ಬೂಸ್ಟರ್ ಡೋಸ್‌ಗಳ ಪ್ರಶ್ನೆಗೆ ಹೆಚ್ಚಿನ ಸಂಶೋಧನೆ ಮಾಡಬೇಕಾಗಿದೆ ಎಂದು ನೀತಿ ಆಯೋಗದ ಸದಸ್ಯ ಡಾ ವಿ ಕೆ ಪಾಲ್ ಹೇಳಿದ್ದಾರೆ. "ನೀವು ಹೆಚ್ಚುವರಿ ಡೋಸ್ ತೆಗೆದುಕೊಳ್ಳುವುದಕ್ಕೆ ನಿರ್ಧರಿಸಿದರೆ, ಅದರ ಬಗ್ಗೆ ಸೂಕ್ತ ಮಾಹಿತಿ ಮತ್ತು ಅಂಶಗಳನ್ನು ಒಳಗೊಂಡಿರಬೇಕು. ಇದು ಇತರೆ ಲಸಿಕೆಗಳಿಗಿಂತ ವಿಭಿನ್ನ ಲಸಿಕೆಯಾಗಿರುತ್ತದೆ. ಒಬ್ಬರಿಗೆ ಅನ್ವಯಿಸುವ ದತ್ತಾಂಶವು ಮತ್ತೊಬ್ಬರಿಗೆ ಅನ್ವಯವಾಗದೇ ಇರಬಹುದು. ಇದರ ಮಧ್ಯೆ ಮತ್ತೊಂದು ಪ್ರಶ್ನೆ ಲಸಿಕೆಯ ಡೋಸ್ ನಡುವಿನ ಅಂತರವಾಗಿವೆ. ಮೂರನೇ ಡೋಸ್ ನೀಡುವುದಕ್ಕೆ ಅಂತರ ಆರು ತಿಂಗಳ ಇರಬೇಕೋ, ಒಂಬತ್ತು ತಿಂಗಳು ಇರಬೇಕೋ ಎಂಬುದರ ಬಗ್ಗೆ ದತ್ತಾಂಶಗಳ ಆಧಾರದ ಮೇಲೆ ವಿಶ್ಲೇಷಣೆ ನಡೆಸಬೇಕಾಗುತ್ತದೆ. ದೇಶದ ಅರ್ಹ ಫಲಾನುಭವಿಗಳಿಗೆ ಎರಡೂ ಡೋಸ್ ಲಸಿಕೆಯನ್ನು ನೀಡಿದ ನಂತರದಲ್ಲಿ ಈ ಬೂಸ್ಟರ್ ಡೋಸ್ ಲಸಿಕೆಗೆ ಆದ್ಯತೆ ನೀಡಬೇಕಾಗುತ್ತದೆ," ಎಂದು ಡಾ ವಿ ಕೆ ಪಾಲ್ ಹೇಳಿದ್ದಾರೆ.

ದೇಶದಲ್ಲಿ ಕೊವಿಡ್-19 ಎರಡು ಡೋಸ್ ಲಸಿಕೆ ಪಡೆಯುವುದಕ್ಕಾಗಿಯೇ ಇಂದಿಗೂ ಜನರು ಕಾಯುತ್ತಿದ್ದಾರೆ. ಈ ಮಧ್ಯೆ ಮೂರನೇ ಡೋಸ್ ಲಸಿಕೆ ಬಗ್ಗೆ ಮತ್ತಷ್ಟು ಕೆಲಸಗಳನ್ನು ಪೂರ್ಣಗೊಳಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಕೊವ್ಯಾಕ್ಸಿನ್ ಉತ್ಪಾದನೆ ಹಿಂದಿನ ಮೈಲಿಗಲ್ಲು ಬಗ್ಗೆ ಉಲ್ಲೇಖ

ಕೊವ್ಯಾಕ್ಸಿನ್ ಉತ್ಪಾದನೆ ಹಿಂದಿನ ಮೈಲಿಗಲ್ಲು ಬಗ್ಗೆ ಉಲ್ಲೇಖ

ಕೋವಾಕ್ಸಿನ್ ಸಂಶೋಧನೆ ಮತ್ತು ಅನುಮೋದನೆಯ ಪ್ರಯಾಣದ ಹಾದಿಯಲ್ಲಿ ಸೃಷ್ಟಿಸಿದ ಮೈಲುಗಲ್ಲುಗಳ ಬಗ್ಗೆ ಐಸಿಎಂಆರ್ ಮಹಾನಿರ್ದೇಶಕ ಡಾ ಬಲರಾಮ್ ಭಾರ್ಗವ ಉಲ್ಲೇಖಿಸಿದ್ದಾರೆ. ಭಾರತದಲ್ಲಿ ಜನವರಿ 2020ರಂದು ಪತ್ತೆಯಾದ ಮೊದಲ ಪ್ರಕರಣದ ಸಂಪರ್ಕಗಳನ್ನು ಪತ್ತೆಹಚ್ಚುವ ಮೂಲಕ ಕೊರೊನಾವೈರಸ್ ಒತ್ತಡವನ್ನು ಪ್ರತ್ಯೇಕಿಸಿದ ಐದನೇ ದೇಶವಾಯಿತು. ಕೊವಿಡ್-19 ಸೋಂಕಿನ ಪರೀಕ್ಷೆ ಚುರುಕುಗೊಳಿಸುವುದು, ಪ್ರತಿಜನಕ ಪರೀಕ್ಷೆಗಳನ್ನು ಬಳಸಿದ ಮೊದಲ ವ್ಯಕ್ತಿ, ಸೆಪ್ಟೆಂಬರ್‌ನಲ್ಲಿ ಬೇಡಿಕೆಯ ಮೇಲೆ ಪರೀಕ್ಷೆಯನ್ನು ಪ್ರಾರಂಭಿಸುವುದು, ವಿಶ್ವದ ಇತರ ಭಾಗಗಳಿಗೆ ಪರೀಕ್ಷಾ ಕಿಟ್‌ಗಳನ್ನು ಕಳುಹಿಸಲು ಪ್ರಾರಂಭಿಸುವುದು ಮತ್ತು 20 ಕೋತಿಗಳ ಮೇಲೆ ಭಾರತೀಯ ಲಸಿಕೆಯನ್ನು ಯಶಸ್ವಿ ಪರೀಕ್ಷೆಯ ಬಗ್ಗೆ ಅವರು ಮಾತನಾಡಿದರು.

Recommended Video

ಪುನೀತ್ ರಾಜ್‍ಕುಮಾರ್ ರನ್ನು ಪಕ್ಷಕ್ಕೆ ಕರೆತರಲು BJP ಮಾಡಿದ ಪ್ರಯತ್ನ ಒಂದಾ ಎರಡಾ? | Oneindia Kannada

English summary
No Need for Covid-19 Booster Dose for now in India, Says Randeep Guleria.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X