ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

99 ದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಇಲ್ಲ

|
Google Oneindia Kannada News

ನವದೆಹಲಿ, ನವೆಂಬರ್ 16: ಇನ್ನುಮುಂದೆ 99 ದೇಶಗಳಿಂದ ಭಾರತಕ್ಕೆಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಪ್ರಯಾಣ ಕೈಗೊಳ್ಳುವ ಮೊದಲು 72 ಗಂಟೆಗಳ ಒಳಗೆ RT-PCR ಪರೀಕ್ಷೆ ಮಾಡಿಸಬೇಕಾಗುತ್ತದೆ. ಅಲ್ಲದೇ ಪ್ರತಿ ಪ್ರಯಾಣಿಕರು ದೃಢೀಕರಣಕ್ಕೆ ಸಂಬಂಧಿಸಿದಂತೆ ಘೋಷಣೆಯನ್ನು ಸಲ್ಲಿಸಬೇಕು ಮತ್ತು ಇಲ್ಲದಿದ್ದರೆ ಕ್ರಿಮಿನಲ್ ಮೊಕದ್ದಮೆಗೆ ಜವಾಬ್ದಾರರಾಗಿರುತ್ತಾರೆ.

 ಸಿಹಿಸುದ್ದಿ: ಲಸಿಕೆ ಪಡೆದ ಭಾರತೀಯರಿಗೆ ಸಿಂಗಪುರದಲ್ಲಿಲ್ಲ ಕ್ವಾರಂಟೈನ್‌ ಸಿಹಿಸುದ್ದಿ: ಲಸಿಕೆ ಪಡೆದ ಭಾರತೀಯರಿಗೆ ಸಿಂಗಪುರದಲ್ಲಿಲ್ಲ ಕ್ವಾರಂಟೈನ್‌

ಕೇಂದ್ರ ಆರೋಗ್ಯ ಸಚಿವಾಲಯ ನವೆಂಬರ್ 1 ರಂದು ಅಂತಾರಾಷ್ಟ್ರೀಯ ಪ್ರವಾಸಿಗರಿಗಾಗಿ ಪರಿಷ್ಕರಿಸಲಾದ ಮಾರ್ಗಸೂಚಿ ಪ್ರಕಾರ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ , ಜರ್ಮನಿ, ಆಸ್ಟ್ರೇಲಿಯಾ, ನೆದರ್ ಲ್ಯಾಂಡ್ ಮತ್ತು ರಷ್ಯ ಸೇರಿದಂತೆ ಎ ಕೆಟಗರಿ ಪಟ್ಟಿಯಲ್ಲಿ ಬರುವ 99 ರಾಷ್ಟ್ರಗಳ, ಸಂಪೂರ್ಣ ಡೋಸ್ ಪಡೆದ ಪ್ರವಾಸಿಗರು ಕೋವಿಡ್-19 ಆರ್ ಟಿ- ಪಿಸಿಆರ್ ನೆಗೆಟಿವ್ ವರದಿ ಅಪ್ ಲೋಡ್ ಮಾಡುವುದರ ಹೊರತಾಗಿ ಸ್ವಯಂ ಘೋಷಣೆಯ ಫಾರಂ ಒಂದನ್ನು ಏರ್ ಸುವಿಧಾ ಪೋರ್ಟಲ್ ನಲ್ಲಿ ಸಲ್ಲಿಸಬೇಕಾಗುತ್ತದೆ.

no-more-quarantine-for-flyers-from-99-countries

ಪರಸ್ಪರ ಸಂಬಂಧದ ಆಧಾರದ ಮೇಲೆ (ಎ ಕೆಟಗರಿ) ಅಡಿಯಲ್ಲಿ ಬರುವ ಈ ಎಲ್ಲಾ ರಾಷ್ಟ್ರಗಳ ಪ್ರವಾಸಿಗರಿಗೆ ಕ್ವಾರಂಟೈನ್ ಇಲ್ಲದೆ ಮುಕ್ತವಾಗಿ ದೇಶ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ರಾಷ್ಟ್ರೀಯವಾಗಿ ಅಥವಾ ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಲಸಿಕೆಗಳ ಪ್ರಮಾಣಪತ್ರಗಳ ಪರಸ್ಪರ ಗುರುತಿಸುವಿಕೆಯ ಕುರಿತು ಭಾರತದೊಂದಿಗೆ ಒಪ್ಪಂದಗಳನ್ನು ಹೊಂದಿರುವ ದೇಶಗಳಿವೆ.

ಅಂತೆಯೇ, ಭಾರತದೊಂದಿಗೆ ಅಂತಹ ಒಪ್ಪಂದವನ್ನು ಹೊಂದಿಲ್ಲದ ದೇಶಗಳಿವೆ, ಆದರೆ ಅವರು ಈಗಾಗಲೇ ಭಾರತೀಯ ಲಸಿಕೆ ಪ್ರಮಾಣ ಪತ್ರ ಅಥವಾ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ಪಡೆದ ಲಸಿಕೆ ಹಾಕಿದ ಭಾರತೀಯರ ಪ್ರಯಾಣಿಕರ ಪ್ರವೇಶಕ್ಕೆ ಅನುಮತಿ ಕಲ್ಪಿಸಿವೆ.

ಭಾರತದಲ್ಲಿ ತಯಾರಾಗುವ ಕೋವ್ಯಾಕ್ಸಿನ್‌ ಲಸಿಕೆಯನ್ನು ಮಾನ್ಯತೆ ಹೊಂದಿದ ಕೋವಿಡ್‌ ಲಸಿಕೆಗಳ ಪಟ್ಟಿಗೆ ಸೇರ್ಪಡೆಗೊಳಿಸಿರುವುದಾಗಿ ಬ್ರಿಟನ್‌ ಮತ್ತು ಹಾಂಕಾಂಗ್ ಸರ್ಕಾರಗಳು ಹೇಳಿವೆ.

ಈ ನಿರ್ಧಾರ ಈ ತಿಂಗಳ 22 ರಂದು ಬೆಳಿಗ್ಗೆ 4 ರಿಂದ ಅಂತಾರಾಷ್ಟ್ರೀಯ ಪ್ರಯಾಣಗಳಿಗೆ ಅನ್ವಯಿಸುತ್ತದೆ ಎಂದು ಬ್ರಿಟನ್ ಸರ್ಕಾರ ಮಾಹಿತಿ ನೀಡಿದೆ. ಅಲ್ಲದೆ ಭಾರತ್‌ ಬಯೋಟೆಕ್ ತಯಾರಿಸಿರುವ ಕೊವಾಕ್ಸಿನ್ ಲಸಿಕೆಯ ಎರಡು ಡೋಸ್ ಪಡೆದು ಬ್ರಿಟನ್‌ ಗೆ ತೆರಳಿದ ಪ್ರಯಾಣಿಕರು ಇನ್ನು ಮುಂದೆ ಐಸೋಲೇಷನ್‌ ಒಳಗಾಗಬೇಕಾದ ಅಗತ್ಯವಿಲ್ಲ ಎಂದು ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಹೇಳಿದ್ದಾರೆ.

ಹಾಂಕಾಂಗ್ ನಲ್ಲೂ ಕೋವ್ಯಾಕ್ಸಿನ್ ಗೆ ಮಾನ್ಯತೆ
ಇನ್ನು ಬ್ರಿಟನ್ ಬೆನ್ನಲ್ಲೇ ಹಾಂಕಾಂಗ್ ಸರ್ಕಾರ ಕೂಡ ಕೋವ್ಯಾಕ್ಸಿನ್ ಲಸಿಕೆಗೆ ಮಾನ್ಯತೆ ನೀಡಿದ್ದು, ಅದರೊಂದಿಗೆ ಲಸಿಕೆ ಮಾನ್ಯತೆ ಸಂಬಂಧ ಭಾರತ ಸರ್ಕಾರ ನಡೆಸಿದ್ದ ನಿರಂತರ ಚರ್ಚೆ ಫಲನೀಡಿದಂತಾಗಿದೆ. ಕೋವ್ಯಾಕ್ಸಿನ್ ಲಸಿಕೆಗೆ ಮಾನ್ಯತೆ ನೀಡಿ ಹಾಂಕಾಂಗ್ ಸರ್ಕಾರ ಆದೇಶ ಹೊರಡಿಸಿದೆ. ಆದರೆ ನಿರ್ಬಂಧ ಸಡಿಲಿಕೆ ಸಂಬಂಧ ಇನ್ನೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಬ್ರಿಟನ್‌ ಪ್ರವೇಶಿಸುವ 18 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗೂ ಪ್ರಯಾಣ ನಿಯಮಗಳನ್ನು ಸರ್ಕಾರ ಸರಳಗೊಳಿಸಿದೆ. ವ್ಯಾಕ್ಸಿನೇಷನ್ ಪೂರ್ಣಗೊಂಡಿದೆ ಎಂದು ಪರಿಗಣಿಸಿ ಐಸೋಲೇಷನ್‌ ನಲ್ಲಿರಿಸುವುದು ಅಗತ್ಯವಿಲ್ಲ ಎಂದು ಅವರಿಗೆ ತಿಳಿಸಲಾಗಿದೆ.

ಯುಕೆಗೆ ಬಂದ ನಂತರ ಅವರು ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದು, ಪಾಸಿಟಿವ್ ಬಂದರೆ ಮಾತ್ರ ಪಿ ಸಿ ಆರ್ ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಗುವುದು.ಸಂಪೂರ್ಣವಾಗಿ ಕೋವಿಡ್‌ ಲಸಿಕೆಯನ್ನು ಪಡೆದ ಭಾರತೀಯರಿಗೆ ಕ್ವಾರಂಟೈನ್‌ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಲು ಸಿಂಗಪುರವು ಮುಂದಾಗಿದೆ. ಭಾರತ ಮಾತ್ರವಲ್ಲದೇ ಇಂಡೋನೇಷಿಯಾ ದೇಶದ ಪ್ರವಾಸಿಗರಿಗೆ ತನ್ನ ಕೋವಿಡ್ ನಿರ್ಬಂಧವನ್ನು ಸಿಂಗಪುರ ಸಡಿಲಿಕೆ ಮಾಡಿದೆ.

ನವೆಂಬರ್‌ 29 ರಿಂದ ಭಾರತ, ಇಂಡೋನೇಷಿಯಾ ದೇಶಗಳ ಪ್ರಯಾಣಿಕರು ಸಂಪೂರ್ಣವಾಗಿ ಕೋವಿಡ್‌ ಲಸಿಕೆಯನ್ನು ಪಡೆದಿದ್ದರೆ ಕ್ವಾರಂಟೈನ್‌ ಇಲ್ಲದೆಯೇ ಸಿಂಗಪುರಕ್ಕೆ ಹೋಗಬಹುದಾಗಿದೆ.

ಇನ್ನೂ ಮೂರು ದೇಶಗಳನ್ನು ಈ ಪಟ್ಟಿಗೆ ಮುಂದಿನ ತಿಂಗಳು ಸೇರಿಸಲು ಸಿಂಗಪುರ ನಿರ್ಧಾರ ಮಾಡಿದೆ. ಪ್ರಸ್ತುತ ಕೆನಡಾ, ಆಸ್ಟ್ರೇಲಿಯಾ ಹಾಗೂ ಜರ್ಮನಿ ಸೇರಿದಂತೆ ಒಟ್ಟು 13 ರಾಷ್ಟ್ರಗಳು ಸಿಂಗಪುರಕ್ಕೆ ಪ್ರವೇಶ ಮಾಡಲು ಅವಕಾಶ ಹೊಂದಿರುವ ದೇಶಗಳಲ್ಲಿ ಇದೆ. ಸಂಪೂರ್ಣ ಲಸಿಕೆ ಪಡೆದ ಈ 13 ರಾಷ್ಟ್ರಗಳ ಜನರು ಸಿಂಗಪುರದ ವ್ಯಾಕ್ಸಿನೇಷನ್‌ ಟ್ರಾವೆಲ್‌ ಲೇನ್‌ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ

English summary
India on Monday resumed quarantine-free entry for foreign travellers from 99 countries, which have agreed to a mutual recognition of COVID-19 vaccination certificates with it, almost 20 months after restrictions were imposed due to COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X