ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬಂಕ್ ಗಳಲ್ಲಿ ಡಿಜಿಟಲ್ ಪೇಮೆಂಟ್ ಕ್ಯಾಶ್‌ಬ್ಯಾಕ್ ಕಟ್

|
Google Oneindia Kannada News

Recommended Video

ಪೆಟ್ರೋಲ್ ಬಂಕ್ ಗಳಲ್ಲಿ ಡೆಬಿಟ್ ಹಾಗು ಕ್ರೆಡಿಟ್ ಕಾರ್ಡ್ ಪೇಮೆಂಟ್ ಮೇಲಿನ ಡಿಸ್ಕೌಂಟ್ ಕಟ್ | Oneindia kannada

ಮುಂಬೈ, ಸೆ.22: ಪೆಟ್ರೋಲ್ ಬಂಕ್ ಗಳಲ್ಲಿರುವ ಡಿಜಿಟಲ್ ಪೇಮೆಂಟ್ ಮೇಲೆ ನೀಡುತ್ತಿದ್ದ ರಿಯಾಯಿತಿಯನ್ನು ನಿಲ್ಲಿಸಲು ತೈಲ ಕಂಪನಿಗಳು ಮುಂದಾಗಿವೆ.

ನೋಟು ಅಪನಗದೀಕರಣ ವೇಳೆ ನಗದು ಬಿಕ್ಕಟ್ಟು ಹಾಗೂ ಡಿಜಿಟಲ್ ಪಾವತಿ ವ್ಯವಸ್ಥೆಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಕ್ಯಾಶ್‌ಬ್ಯಾಕ್ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು.

ಸೆ.18ರಿಂದ ಕರ್ನಾಟಕದಲ್ಲಿ ಪೆಟ್ರೋಲ್-ಡೀಸೆಲ್ ತೆರಿಗೆ 2 ರುಪಾಯಿ ಇಳಿಕೆ ಸೆ.18ರಿಂದ ಕರ್ನಾಟಕದಲ್ಲಿ ಪೆಟ್ರೋಲ್-ಡೀಸೆಲ್ ತೆರಿಗೆ 2 ರುಪಾಯಿ ಇಳಿಕೆ

ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡವರಿಗೆ ಕ್ಯಾಶ್ ಬ್ಯಾಕ್ ಅಥವಾ ರಿಯಾಯಿತಿ ಕೊಡುಗೆಯನ್ನು ನೀಡಿತ್ತು ಅದನ್ನು ಹಿಂಪಡೆಯಲು ಮುಂದಾಗಿದ್ದಾರೆ. ಇನ್ನು ಮೂರು ತಿಂಗಳು ಕಳೆದ ನಂತರ ಅಂದರೆ 2019 ಆರಂಭದಿಂದ ಪೆಟ್ರೋಲ್ ಬಂಕ್ ಗಳಲ್ಲಿ ಆನ್‌ಲೈನ್ ಅಥವಾ ಕಾರ್ಡ್ ಪಾವತಿಗೆ ನೀಡಲಾಗುತ್ತಿರುವ ಕ್ಯಾಶ್ ಬ್ಯಾಕ್ ಹಿಂಪಡೆಯಲಾಗುತ್ತದೆ.

No more discounts on card payment charges at petrol pumps

2016ರಲ್ಲಿ 500 ರೂ ಹಾಗೂ 1 ಸಾವಿರ ರೂ ನೋಟುಗಳ ನಿಷೇಧ ಮಾಡಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರ ಮತ್ತು ಪ್ಲಾಸ್ಟಿಕ್ ಕರೆನ್ಸಿ ಅಂದರೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಪ್ರೋತ್ಸಾಹಕ್ಕಾಗಿ ಹಲವು ಕೊಡುಗೆಗಳನ್ನು ಘೋಷಣೆ ಮಾಡಿತ್ತು.

ಶತಕದತ್ತ ಪೆಟ್ರೋಲ್ ಬಿರುಸಿನ ಹೆಜ್ಜೆ, ಗ್ರಾಹಕರ ಜೇಬಿಗೆ ಇನ್ನೂ ವಜ್ಜೆ ಶತಕದತ್ತ ಪೆಟ್ರೋಲ್ ಬಿರುಸಿನ ಹೆಜ್ಜೆ, ಗ್ರಾಹಕರ ಜೇಬಿಗೆ ಇನ್ನೂ ವಜ್ಜೆ

ಹಾಗಾದರೆ ಆ ಕೊಡುಗೆಗಳು ಏನು ಎಂದು ನೋಡುವುದಾದರೆ ಪೆಟ್ರೋಲ್ ಬಂಕ್ ಗಳಲ್ಲಿ ಕಾರ್ಡ್ ಅಥವಾ ಆನ್‌ಲೈನ್ ಮೂಲಕ ಹಣ ಪಾವತಿಸಿದರೆ ಗ್ರಾಹಕರಿಗೆ 75 ಪೈಸೆಯಷ್ಟು ಕ್ಯಾಶ್ ಬ್ಯಾಕ್ ನೀಡಲಾಗುತ್ತಿತ್ತು. ಬಳಿಕ ಕೆಲವೇ ತಿಂಗಳುಗಳಲ್ಲಿ ಅದನ್ನು 25 ಪೈಸೆಗೆ ಇಳಿಸಲಾಗಿತ್ತು.

ಈ ರೀತಿ ಗ್ರಾಹಕರಿಗೆ ತೈಲ ಕಂಪನಿಗಳು ಒಟ್ಟು 1431 ಕೋಟಿರೂ. ಪಾವತಿ ಮಾಡಿದೆ. ಅಲ್ಲದೆ, 2017-18ನೇ ಸಾಲಿನಲ್ಲಿ ಕ್ಯಾಶ್‌ಬ್ಯಾಕ್‌ಗಾಗಿ 2000 ಕೋಟಿ ರು. ವ್ಯಯವಾಗುವ ಸಾಧ್ಯತೆಯಿದೆ ಎಂದು ತೈಲ ಕಂಪನಿಗಳು ಅಂದಾಜಿಸಿವೆ. ಹಾಗಾಗಿ 2019ರ ಆರಂಭದಿಂದಲೇ ಈ ಕ್ಯಾಶ್ ಬ್ಯಾಕ್ ಕೊಡುಗೆಯನ್ನು ಹಿಂಪಡೆಯಲು ಮುಂದಾಗಿವೆ.

English summary
Oil marketing companies are looking to wind down discounts on fuel purchased via electronic means, three people aware of the plans said, more than a month after they trimmed such discounts for fleet customers using loyalty programmes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X