ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಮಿಶ್ರಣ ಕುರಿತು ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಜೂನ್ 01:ಎರಡು ಪ್ರತ್ಯೇಕ ಕೊರೊನಾ ಲಸಿಕೆ ನೀಡುವುದರಿಂದ ಸಕಾರಾತ್ಮಕ ಪರಿಣಾಮ ಬೀರಲಿದೆ ಎನ್ನುವ ಕುರಿತು ಇನ್ನೂ ಸಾಬೀತಾಗದ ಹಿನ್ನೆಲೆಯಲ್ಲಿ ದೇಶದಲ್ಲಿ ಒಂದೇ ಲಸಿಕೆಯ ಎರಡು ಡೋಸ್ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಎರಡು ಬೇರೆ ಬೇರೆ ಲಸಿಕೆ ನೀಡುವ ಕುರಿತು ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ ಲಸಿಕೆ ನಿಯಮವನ್ನೂ ಕೂಡ ಬದಲಿಸಿಲ್ಲ, ಮೊದಲಿನ ನಿಯಮವೇ ಮುಂದುವರೆಯಲಿದೆ ಜನರು ಗೊಂದಲಕ್ಕೊಳಗಾಗುವುದು ಬೇಡ ಎಂದು ತಿಳಿಸಲಾಗಿದೆ.

ಎರಡು ಪ್ರತ್ಯೇಕ ಕೋವಿಡ್ ಲಸಿಕೆ ಡೋಸ್‌ ಪಡೆಯುವುದರಿಂದ ಏನಾಗುತ್ತೆ: ಕೇಂದ್ರ ಹೇಳಿದ್ದೇನು?ಎರಡು ಪ್ರತ್ಯೇಕ ಕೋವಿಡ್ ಲಸಿಕೆ ಡೋಸ್‌ ಪಡೆಯುವುದರಿಂದ ಏನಾಗುತ್ತೆ: ಕೇಂದ್ರ ಹೇಳಿದ್ದೇನು?

ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ಪಡೆದುಕೊಳ್ಳಬಹುದಾಗಿದೆ. ನೀತಿ ಆಯೋಗದ ವಿಕೆ ಪೌಲ್ ಮಾತನಾಡಿದ್ದು, ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ವೇಳಾಪಟ್ಟಿಯಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಹೇಳಿದ್ದಾರೆ.

No Mixing Of Vaccines, Everyone Will Get 2 Doses Of Covaxin, Covishield: Govt

ಕೋವಿಶೀಲ್ಡ್ ಲಸಿಕೆಯ ಬಳಿಕ ಎರಡನೇ ಡೋಸ್‌ನ್ನು 12 ವಾರಗಳ ನಂತರ ನೀಡಲಾಗುತ್ತದೆ ಮತ್ತು ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಬಳಿಕ 4-6 ವಾರಗಳಲ್ಲಿ ಎರಡನೇ ಡೋಸ್ ನೀಡಲಾಗುತ್ತದೆ.

ಕೊರೊನಾ ಲಸಿಕೆ ನೀಡುವ ಕುರಿತು ಯಾವುದೇ ಗೊಂದಲವಿಟ್ಟುಕೊಳ್ಳಬೇಡಿ ಮೊದಲ ಡೋಸ್ ಯಾವ ಲಸಿಕೆಯನ್ನು ಪಡೆದಿರುತ್ತೀರೋ ಎರಡನೇ ಡೋಸ್ ಕೂಡ ಅದೇ ಲಸಿಕೆಯದ್ದೇ ಪಡೆಯಬೇಕು ಯಾವುದೇ ಮಿಶ್ರಣವಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಲಸಿಕೆ ನೀಡುವವರ ಬೇಜವಾಬ್ದಾರಿಯಿಂದ ಹಲವು ಗ್ರಾಮೀಣ ಭಾಗಗಳಲ್ಲಿ ಎರಡೂ ಲಸಿಕೆಯ ಒಂದೊಂದು ಡೋಸ್ ನೀಡಲಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು.

English summary
The central government on Tuesday clarified that there will be no mixing of Covid-19 vaccine doses in India until enough scientific evidence on its effectiveness is gathered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X