ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿರೋಧಪಕ್ಷಗಳ ಆರೋಪದಲ್ಲಿ ಹುರುಳಿಲ್ಲ: ಇವಿಎಂ-ವಿವಿಪ್ಯಾಟ್ ತಾಳೆ ಸಂಪೂರ್ಣ ಪಕ್ಕಾ

|
Google Oneindia Kannada News

ನವದೆಹಲಿ, ಮೇ 25: ಈ ಬಾರಿಯ ಚುನಾವಣೆಯಲ್ಲಿ ಇವಿಎಂ ಮತಗಳ ಎಣಿಕೆಯ ಜತೆಯಲ್ಲಿ ಕನಿಷ್ಠ ಶೇ 50ರಷ್ಟು ವಿವಿಪ್ಯಾಟ್ ಮತಗಳನ್ನು ಎಣಿಸಿ ತಾಳೆ ನೋಡಬೇಕು ಎಂಬ ವಿರೋಧಪಕ್ಷಗಳ ಮನವಿಯನ್ನು ಸುಪ್ರೀಂಕೋರ್ಟ್ ಹಾಗೂ ಚುನಾವಣಾ ಆಯೋಗಗಳು ತಿರಸ್ಕರಿಸಿದ್ದವು. ಮತದಾನದಲ್ಲಿ ಯಾವುದೇ ಲೋಪವಾಗಿಲ್ಲ ಎಂಬುದನ್ನು ಸಾಬೀತುಪಡಿಸಲು ಇವಿಎಂ ಜತೆಗೆ ವಿವಿಪ್ಯಾಟ್ ಚೀಟಿಗಳ ಎಣಿಕೆಯೂ ಮುಖ್ಯ ಎಂದು ಆಗ್ರಹಿಸಲಾಗಿತ್ತು.

ಕಳೆದ ಬಾರಿಯ ಚುನಾವಣೆಗಳಿಗಿಂತ ಅಧಿಕ ಪ್ರಮಾಣದಲ್ಲಿ ವಿವಿಪ್ಯಾಟ್‌ ಮತಗಳನ್ನು ತಾಳೆಹಾಕಿ ನೋಡಲಾಗಿತ್ತು. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿನ ಐದು ಮತಗಟ್ಟೆಗಳ ವಿವಿಪ್ಯಾಟ್‌ಗಳ ಮತಗಳನ್ನು ಲೆಕ್ಕಮಾಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು.

ಇವಿಎಂ ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ: ಐಪಿಎಸ್ ಅಧಿಕಾರಿ ರೂಪಾಇವಿಎಂ ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ: ಐಪಿಎಸ್ ಅಧಿಕಾರಿ ರೂಪಾ

ಪ್ರಸಕ್ತ ಚುನಾವಣೆಯಲ್ಲಿ 90 ಕೋಟಿ ಜನರು ಮತಚಲಾಯಿಸಿದ್ದಾರೆ. ಚುನಾವಣೆಗಾಗಿ ಚುನಾವಣಾ ಆಯೋಗ 22.3 ಲಕ್ಷ ಬ್ಯಾಲಟ್ ಘಟಕ, 16.3 ಲಕ್ಷ ನಿಯಂತ್ರಣ ಘಟಕ ಮತ್ತು 17.3 ಲಕ್ಷ ವಿವಿಪ್ಯಾಟ್‌ಗಳನ್ನು ಬಳಸಿತ್ತು.

No mismatch reported in EVM and VVPAT vote tallies

ಈ 17.3 ಲಕ್ಷ ವಿವಿಪ್ಯಾಟ್‌ಗಳಲ್ಲಿ 20,625 ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಕೆ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ 4,125 ಸ್ಲಿಪ್‌ಗಳನ್ನು ಎಣಿಕೆ ಮಾಡಲಾಗಿತ್ತು. ಚುನಾವಣಾ ಆಯೋಗದ ಮಾಹಿತಿ ಪ್ರಕಾರ, 20,625 ವಿವಿಪ್ಯಾಟ್‌ಗಳಲ್ಲಿ ಒಂದೇ ಒಂದು ಕಡೆಯೂ ಮತಗಳ ತಾಳೆಯಲ್ಲಿ ವ್ಯತ್ಯಾಸ ಕಂಡುಬಂದಿಲ್ಲ.

ಇವಿಎಂ-ವಿವಿಪ್ಯಾಟ್ ತಾಳೆ: ವಿಪಕ್ಷಗಳ ಮನವಿ ತಿರಸ್ಕರಿಸಿದ ECಇವಿಎಂ-ವಿವಿಪ್ಯಾಟ್ ತಾಳೆ: ವಿಪಕ್ಷಗಳ ಮನವಿ ತಿರಸ್ಕರಿಸಿದ EC

2013-14ರಲ್ಲಿ ವಿವಿಪ್ಯಾಟ್ ಪರಿಚಯವಾದ ಸಂದರ್ಭದಿಂದಲೂ ಈ ಪ್ರಕ್ರಿಯೆಯಲ್ಲಿ ಒಮ್ಮೆಯೂ ಲೋಪ ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಇವಿಎಂ ಮತ್ತು ವಿವಿಪ್ಯಾಟ್‌ಗಳ ವಿಶ್ವಾಸಾರ್ಹತೆ ಪ್ರಶ್ನಿಸಿದ್ದ ವಿರೋಧಪಕ್ಷಗಳು ಅದರ ವಿರುದ್ಧ ವ್ಯಾಪಕ ಪ್ರಚಾರ ನಡೆಸಿದ್ದವು. ಇವಿಎಂಅನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಶೇ 100ರಷ್ಟು ವಿವಿಪ್ಯಾಟ್‌ಗಳ ಎಣಿಕೆಯೂ ನಡೆಯಬೇಕು ಎಂದು ಆಗ್ರಹಿಸಿದ್ದವು.

English summary
Election Commission data shows EVM-VVPAT tally was completely perfect. There was no single report on mismatch of counting tally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X