ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಕೆ, ICMRನಿಂದ ಮಹತ್ವದ ಸ್ಪಷ್ಟನೆ

|
Google Oneindia Kannada News

ನವದೆಹಲಿ, ಮೇ 27: ''ಕೊವಿಡ್-19 ವಿರುದ್ಧ ಮಲೆರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೊಕ್ವಿನ್ ಯಾವುದೇ ಕೆಲಸ ಮಾಡುವುದಿಲ್ಲ, ಎಚ್ ಸಿಕ್ಯೂ ಬಳಕೆಯಿಂದ ಸೈಡ್ ಎಫೆಕ್ಟ್ ಬಹಳ'' ಎಂದು ಅಮೆರಿಕ ಸರ್ಕಾರದ ಸಂಶೋಧಕರು ಹೇಳಿರಬಹುದು ಆದರೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ಈ ಬಗ್ಗೆ ಸ್ಪಷ್ಟನೆ ನೀಡಿದೆ.

ಮಾರಣಾಂತಿಕ ಕೋವಿಡ್-19 ಚಿಕಿತ್ಸೆಗಾಗಿ ಪ್ರಸ್ತಾಪಿಸಲಾಗಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೋಮೈಸಿನ್ ಕಾಂಬಿನೇಷನ್ ಮನುಷ್ಯನ ದೇಹಕ್ಕೆ ಮಾರಕವಾಗಿದ್ದು, ಇವುಗಳಿಂದ ಕಾರ್ಡಿಯೋ ವ್ಯಾಸ್ಕ್ಯುಲಾರ್ ಸಿಸ್ಟಮ್ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಎಂಬ ಅಂಶ ಅಧ್ಯಯನದ ಮೂಲಕ ತಿಳಿದುಬಂದಿದೆ ಎಂದು ಅಮೆರಿಕದ ಸಂಸ್ಥೆ ಹೇಳಿದೆ.

HCQ ಔಷಧ ಸೇವನೆ ನಿಲ್ಲಿಸಿದ ಟ್ರಂಪ್, ಕಾರಣ ಬಹಿರಂಗ! HCQ ಔಷಧ ಸೇವನೆ ನಿಲ್ಲಿಸಿದ ಟ್ರಂಪ್, ಕಾರಣ ಬಹಿರಂಗ!

ಆದರೆ, ಮಲೇರಿಯಾಕ್ಕೆ ಬಳಸುವ ಎಚ್‌ಸಿಕ್ಯೂ ಮಾತ್ರೆಯಿಂದ ಯಾವುದೇ ಪ್ರಮುಖ ಅಡ್ಡಪರಿಣಾಮಗಳಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ಸ್ಪಷನೆ ನೀಡಿದೆ.

ಭಾರತದಲ್ಲಿಎಚ್ ಸಿಕ್ಯೂ ಬಳಕೆ ಕುರಿತಂತೆ ಸ್ಪಷ್ಟನೆ

ಭಾರತದಲ್ಲಿಎಚ್ ಸಿಕ್ಯೂ ಬಳಕೆ ಕುರಿತಂತೆ ಸ್ಪಷ್ಟನೆ

ಭಾರತದಲ್ಲಿಎಚ್ ಸಿಕ್ಯೂ ಬಳಕೆ ಕುರಿತಂತೆ ನಡೆಸಿದ ಅಧ್ಯಯನಗಳಲ್ಲಿ ಯಾವುದೇ ದೊಡ್ಡ ಅಡ್ಡಪರಿಣಾಮಗಳು ಕಂಡುಬಂದಿಲ್ಲ ಎಂದು ಐಸಿಎಂಆರ್ ಡಿಜಿ ಬಲರಾಮ್ ಭಾರ್ಗವ ಹೇಳಿದ್ದಾರೆ. ಐಸಿಎಂಆರ್ ಡಿಜಿ ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿ ನಡೆಸಿ, ಈ ಔಷಧದ ಜೈವಿಕ ವಿಶ್ವಾಸಾರ್ಹತೆ, ಇನ್-ವಿಟ್ರೊ ಡೇಟಾ ಮತ್ತು ಸುರಕ್ಷತೆಯನ್ನು ತೆಗೆದುಕೊಳ್ಳುವುದರಿಂದ, ನಾವು ಇದನ್ನು ಕಠಿಣ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಶಿಫಾರಸು ಮಾಡುತ್ತೇವೆ, ವೈದ್ಯರ ನೆರವಿಲ್ಲದೆ ಬಳಕೆ ಮಾಡುವುದು ಅಪಾಯಕಾರಿ ಎಂದಿದ್ದಾರೆ.

ಆರೋಗ್ಯ ಕಾರ್ಯಕರ್ತರಿಗೆ ಸಲಹೆ

ಆರೋಗ್ಯ ಕಾರ್ಯಕರ್ತರಿಗೆ ಸಲಹೆ

ಇದೇ ವೇಳೆ ಅವರು ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ಇದನ್ನು ಕೋವಿಡ್ -19 ರ ತಡೆಗಟ್ಟುವ ಚಿಕಿತ್ಸೆಯಾಗಿ ಬಳಸುವುದನ್ನು ಮುಂದುವರಿಸಬೇಕು. ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಎಚ್ ಸಿಕ್ಯೂ ಬಳಕೆ ಬಗ್ಗೆ ಮಾರ್ಗಸೂಚಿ ನೀಡಲಾಗಿದೆ. ಒಂದು ಅಧ್ಯಯನ ಪ್ರಕರಣದಲ್ಲಿ ಒಬ್ಬ ಸಿಬ್ಬಂದಿಯ ಇಸಿಜಿ ಪರೀಕ್ಷಿಸಲಾಗಿದೆ. ಎಚ್ ಸಿಕ್ಯೂ ಬಳಕೆಯಿಂದ ವಾಂತಿ, ತಲೆ ಸುತ್ತುವಿಕೆಯಂಥ ಪರಿಣಾಮಗಳು ಬಿಟ್ಟರೆ ಮಾರಣಾಂತಿಕ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ ಎಂದು ಬಲರಾಮ್ ಭಾರ್ಗವ ಹೇಳಿದರು.

ಕೊರೊನಾ ಕದನದ ನಡುವೆ 2ನೇ ವಿಶ್ವಯುದ್ಧದ ಲಸಿಕೆ ಟ್ರೆಂಡ್ಕೊರೊನಾ ಕದನದ ನಡುವೆ 2ನೇ ವಿಶ್ವಯುದ್ಧದ ಲಸಿಕೆ ಟ್ರೆಂಡ್

ಯುರೋಪಿಯನ್ ಮೆಡಿಸನ್ ಏಜೆನ್ಸಿಯಿಂದ ವಿರೋಧ

ಯುರೋಪಿಯನ್ ಮೆಡಿಸನ್ ಏಜೆನ್ಸಿಯಿಂದ ವಿರೋಧ

ಯುರೋಪಿಯನ್ ಮೆಡಿಸನ್ ಏಜೆನ್ಸಿ, ಕೊರೊನಾರೋಗಿಗಳಿಗೆ ಎಚ್ ಸಿಕ್ಯೂ ನೀಡುವುದನ್ನು ವಿರೋಧಿಸಿದ್ದು, ಕ್ಲಿನಿಕಲ್ ಟ್ರಯಲ್ ಅಥವಾ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಬಳಸುವಂತೆ ಸೂಚಿಸಿದೆ. ಇದರ ಸೈಡ್ ಎಫೆಕ್ಟ್ ಗಳಲ್ಲಿ ಹೃದಯಕ್ಕೆ ಹಾನಿ, ಹೃದಯ ಬಡಿತದಲ್ಲಿ ಏರುಪೇರು, ವಾಂತಿ, ಭೇದಿ, ತಲೆ ಸುತ್ತುವಿಕೆ ಮುಂತಾದ ಪರಿಣಾಮಗಳಿವೆ. ಕೋವಿಡ್ -19 ಅನ್ನು ವಿವಿಧ ದೇಶಗಳಲ್ಲಿ ನಡೆಸಲಾಗುತ್ತಿರುವ ಸಂಶೋಧನಾ ಚಿಕಿತ್ಸೆ, ಕ್ಲಿನಿಕಲ್ ಟ್ರಯಲ್ ಗಾಗಿ ಎಚ್ ಸಿಕ್ಯೂ ಬಳಕೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಬೆನ್ನಲೇ ಐಸಿಎಂಆರ್ ಸ್ಪಷ್ಟನೆ ಮಹತ್ವ ಪಡೆದುಕೊಂಡಿದೆ.

ಪ್ಲೇಕ್ವೆನಿಲ್ ಬ್ರ್ಯಾಂಡ್ ಹೆಸರಿನಲ್ಲಿ ಎಚ್ ಸಿಕ್ಯೂ

ಪ್ಲೇಕ್ವೆನಿಲ್ ಬ್ರ್ಯಾಂಡ್ ಹೆಸರಿನಲ್ಲಿ ಎಚ್ ಸಿಕ್ಯೂ

ಪ್ಲೇಕ್ವೆನಿಲ್ ಬ್ರ್ಯಾಂಡ್ ಹೆಸರಿನಲ್ಲಿ ನೀಡಲಾಗುವ ಹೈಡ್ರೋಕ್ಸಿಕ್ಲೋರೊಕ್ವೆನ್(HCQ) ಮಲೇರಿಯಾ ಅಲ್ಲದೆ ರುಮಾಟಾಯಿಡ್ ಆರ್ಥೈಟಿಸ್ ಗೂ ಬಳಸಲಾಗುತ್ತದೆ. ಹೃದಯ, ಶ್ವಾಸಕೋಶ, ಜ್ವರ, ಮೈಕೈ ನೋವು, ಸ್ನಾಯು ಸೆಳೆತ ಎಲ್ಲಕ್ಕೂ ಈ ಔಷಧಿ ಬಳಸಬಹುದು ಎಂದು ಜಾನ್ಸ್ ಹಾಪ್ಕಿನ್ ವಿಶ್ವ ವಿದ್ಯಾಲಯ ವರದಿ ನೀಡಿದೆ. ಹೈಡ್ರೋಕ್ಸಿಕ್ಲೋರೊಕ್ವೆನ್ ಜೊತೆಗೆ Anti biotic ಅಜಿಥ್ರೋಮೈಸಿನ್ ಸೇರಿಸಿ ಸರಿ ಪ್ರಮಾಣದಲ್ಲಿ ನೀಡುತ್ತಾ ಬಂದರೆ ಆರಂಭಿಕ ಹಂತದ ಕೊವಿಡ್ 19 ಸಾರ್ಸ್ CoV 2 ಇತ್ಯಾದಿ ಹೊಗಲಾಡಿಸಬಹುದು

ಕೋವಿಡ್-19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್: WHO ಕಡೆಯಿಂದ ಬಂತು ಎಚ್ಚರಿಕೆ!ಕೋವಿಡ್-19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್: WHO ಕಡೆಯಿಂದ ಬಂತು ಎಚ್ಚರಿಕೆ!

English summary
The Indian Council of Medical Research (ICMR) said on Tuesday that no major side-effects of antimalarial drug Hydroxychloroquine (HCQ) have been found in studies in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X