2019ರಲ್ಲೂ ಮೋದಿ ಎದುರಿಸುವುದನ್ನು ಮರೆತುಬಿಡಿ: ವಿರೋಧ ಪಕ್ಷದ ನಾಯಕ

Posted By:
Subscribe to Oneindia Kannada

ನವದೆಹಲಿ, ಮಾ 11: ಸದ್ಯಕ್ಕೆ ಬಿಡಿ, 2019ರಲ್ಲೂ ಪ್ರಧಾನಮಂತ್ರಿ ನರೇಂದ್ರ ಮೋದಿಯವನ್ನು ಎದುರಿಸಲು ದೇಶದ ಯಾವುದೇ ರಾಜಕೀಯ ಮುಖಂಡರಿಗೆ ಸಾಧ್ಯವಿಲ್ಲ. ಈ ಹೇಳಿಕೆ ನೀಡಿರುವುದು ಬಿಜೆಪಿಯವರಲ್ಲ, ವಿರೋಧ ಪಕ್ಷದ ಮುಖಂಡರೊಬ್ಬರು.

ಪ್ರಧಾನಿ ಮೋದಿಯನ್ನು ಟೀಕಿಸುವುದರಲ್ಲಿ ಮಂಚೂಣಿಯಲ್ಲಿರುವ ನಾಯಕರಲ್ಲೊಬ್ಬರಾದ ಜಮ್ಮು, ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ, ಮೋದಿಯಯನ್ನು ಎದುರಿಸಲು ಸದ್ಯಕ್ಕೆ ಯಾರಿಗೂ ಸಾಧ್ಯವಿಲ್ಲ ಎಂದಿದ್ದಾರೆ.

 No leader can take PM Modi even in 2019 election, Omar Abdullah

ಉತ್ತರಪ್ರದೇಶ ಮತ್ತು ಉತ್ತರಾಖಾಂಡ್ ಚುನಾವಣಾ ಫಲಿತಾಂಶವನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಒಮರ್ ಅಬ್ದುಲ್ಲಾ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲೂ ಮೋದಿಯನ್ನು ಎದುರಿಸುವಂತಹ ನಾಯಕನು ಸದ್ಯಕ್ಕೆ ದೇಶದ ಮುಂದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Live :ಗೋವಾ | ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್

ಮಣಿಪುರ, ಪಂಜಾಬ್ ಮತ್ತು ಗೋವಾದಲ್ಲಿನ ಕಾಂಗ್ರೆಸ್ ಪಕ್ಷದ ಸಾಧನೆ ಬಿಜೆಪಿಯನ್ನು ಸೋಲಿಸಲು ಸಾಧ್ಯವೇ ಇಲ್ಲ ಎನ್ನುವವರಿಗೆ ಉತ್ತರವಾಗಿದೆ ಎಂದು ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ವಿರೋಧ ಪಕ್ಷಗಳು ಮೋದಿ ವಿರುದ್ದ ತಮ್ಮ ಕಾರ್ಯತಂತ್ರವನ್ನು ಬದಲಿಸಬೇಕಾಗಿದೆ. ಇಲ್ಲದಿದ್ದರೆ 2024ರಲ್ಲೂ ಮೋದಿಯವನ್ನು ಎದುರಿಸುವುದು ಅಸಾಧ್ಯವಾಗಬಹುದು ಎಂದು ಅಬ್ದುಲ್ಲಾ ಹೇಳಿದ್ದಾರೆ.

ಸ್ವಾತಂತ್ರ್ಯಾನಂತರ ದೇಶ ಕಂಡ ಜನಪ್ರಿಯ ನಾಯಕರಲ್ಲಿ ಮೋದಿ ಕೂಡಾ ಒಬ್ಬರು. ಉತ್ತರಪ್ರದೇಶ ಮತ್ತು ಉತ್ತರಾಖಾಂಡ್ ರಾಜ್ಯದ ಚುನಾವಣಾ ಫಲಿತಾಂಶ, ಮೋದಿ ಜನಪ್ರಿಯತೆಯನ್ನು ಇನ್ನಷ್ಟು ಏರಿಸಿದೆ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Forget 2019, no leader can take on Narendra Modi then', says opposition leader, National Conference's Omar Abdullah
Please Wait while comments are loading...