ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲವ್ ಜಿಹಾದ್ ಕಾನೂನು ಬಗ್ಗೆ ಕೇಂದ್ರ ಗೃಹ ಸಚಿವಾಲಯ ಹೇಳಿದ್ದೇನು?

|
Google Oneindia Kannada News

ನವದೆಹಲಿ, ಫೆಬ್ರವರಿ 02: ಅಂತರ್ ಧರ್ಮೀಯ ವಿವಾಹಗಳಿಗಾಗಿ ಬಲವಂತವಾಗಿ ಧಾರ್ಮಿಕ ಮತಾಂತರ ಮಾಡುವುದನ್ನು ತಡೆಯಲು, ಮುಖ್ಯವಾಗಿ ಲವ್ ಜಿಹಾದ್ ತಡೆಗಟ್ಟಲು ಕೆಲ ರಾಜ್ಯಗಳಲ್ಲಿ ಹೊಸ ಕಾಯ್ದೆಗಳು ಜಾರಿಗೆ ಬಂದಿವೆ ಹಾಗೂ ವಿವಾದಕ್ಕೆ ಕಾರಣವಾಗಿವೆ. ಆದರೆ, ಈ ಬಗ್ಗೆ ಕೇಂದ್ರದಿಂದ ಯಾವುದೇ ಕಾನೂನು ಜಾರಿಯಾಗುವುದೇ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

''ಅಂತರ್ ಧರ್ಮೀಯ ವಿವಾಹಕ್ಕಾಗಿ ಬಲವಂತವಾಗಿ ಮತಾಂತರ ಮಾಡುವುದರ ವಿರುದ್ಧ ಕ್ರಮ ಜರುಗಿಸುವುದು ಆಯಾ ರಾಜ್ಯಗಳಿಗೆ ಸಂಬಂಧಿಸಿದ ವಿಚಾರ, ಕಾನೂನಿನ ಕ್ರಮ ಸೂಕ್ತ ಕ್ರಮ ಜರುಗಿಸಲು ಪೊಲೀಸ್ ಬಳಕೆ ಮಾಡಲು ಸಂವಿಧಾನದ ಏಳನೇ ಪರಿಚ್ಛೇದದಲ್ಲಿ ಅವಕಾಶವಿದೆ. ಆದರೆ, ಕಾನೂನು ಜಾರಿ ಬಗ್ಗೆ ಪರ ವಿರೋಧ ಚರ್ಚೆ ಮಾನ್ಯತೆ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.

'ಲವ್ ಜಿಹಾದ್' ಕಾನೂನು ವಿವಾದ: ಪರಿಶೀಲನೆಗೆ ಕೋರ್ಟ್ ಒಪ್ಪಿಗೆ, ತಡೆ ನೀಡಲು ನಕಾರ'ಲವ್ ಜಿಹಾದ್' ಕಾನೂನು ವಿವಾದ: ಪರಿಶೀಲನೆಗೆ ಕೋರ್ಟ್ ಒಪ್ಪಿಗೆ, ತಡೆ ನೀಡಲು ನಕಾರ

''ಧಾರ್ಮಿಕ ಮತಾಂತರ ಕುರಿತಂತೆ ರಾಜ್ಯಗಳು ಹೊರತಂದಿರುವ ಕಾನೂನಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳುವುದು, ಮತಾಂತರ ತಡೆಯುವುದು, ತನಿಖೆ ನಡೆಸುವುದು ಮುಂತಾದ ಸೂಕ್ತ ಕ್ರಮಗಳನ್ನು ಪೊಲೀಸ್ ಇಲಾಖೆ ಜರುಗಿಸಬಹುದು. ಇವೆಲ್ಲವೂ ರಾಜ್ಯ ಹಾಗೂ ಕೇಂದ್ರಾಡಳಿತದ ಆಡಳಿತ ವ್ಯಾಪ್ತಿಗೆ ಒಳಪಟ್ಟಿವೆ'' ಎಂದು ಕೇಂದ್ರ ಗೃಹ ಸಚಿವಾಲಯ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ.

No intention to bring central love jihad law in the country: Kishan Reddy

'ಲವ್ ಜಿಹಾದ್' ವಿರುದ್ಧ ಕಾನೂನು ಜಾರಿಗೊಳಿಸಲು ಕರ್ನಾಟಕ, ಹರ್ಯಾಣ ಮುಂತಾದ ರಾಜ್ಯಗಳಲ್ಲಿ ಚರ್ಚೆ ಜಾರಿಯಲ್ಲಿದೆ. ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಉತ್ತರಾಖಂಡ್ ನಲ್ಲಿ ಕಾನೂನು ಜಾರಿಯಾಗಿದೆ. ಈ ಪ್ರಕರಣದಲ್ಲಿ ಅಪರಾಧಿಯಾದವರಿಗೆ ಕನಿಷ್ಠ 5 ವರ್ಷ ಕಠಿಣ ಸಜೆ ವಿಧಿಸಲು ಆ ರಾಜ್ಯಗಳು ಮುಂದಾಗಿವೆ. ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಜಾರಿಯಲ್ಲಿದೆ.

English summary
The Ministry of Home Affairs on Tuesday said issues related to religious conversions are primarily the concerns of state governments, adding that law enforcement agencies take action whenever such instances of violation come to the fore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X