ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಹಿತಿಯೇ ಇಲ್ಲದ ಮೇಲೆ ಅಮಿತ್ ಶಾ ಆ ಪದ ಬಳಸಿದ್ದು ತಪ್ಪಲ್ಲವೇ?

|
Google Oneindia Kannada News

ನವದೆಹಲಿ, ಜ 21: ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ (RTI) ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರಿಸಿದ ಕೇಂದ್ರ ಗೃಹ ಸಚಿವಾಲಯ ನಿಜಾಂಶವನ್ನು ಒಪ್ಪಿಕೊಂಡಿದೆ. ಸಾಕೇತ್ ಗೋಖಲೆ ಎನ್ನುವವರು ಅರ್ಜಿಯನ್ನು ಸಲ್ಲಿಸಿದ್ದರು.

ಕೇಂದ್ರ ಗೃಹಸಚಿವ ಅಮಿತ್ ಶಾ ವಿರೋಧಿಗಳನ್ನು ಟೀಕಿಸುವಾಗ ಸಾಮಾನ್ಯವಾಗಿ ಬಳಸುವ ಪದ 'ತುಕ್ಡೆ ತುಕ್ಡೆ ಗ್ಯಾಂಗ್'. ಈ ಗ್ಯಾಂಗ್ ಯಾವುದು, ಇದರ ಸದಸ್ಯರು ಯಾರು ಎನ್ನುವ ಮಾಹಿತಿಯನ್ನು ದೇಶಕ್ಕೆ ನೀಡಿ ಎಂದು ಸಾಕೇತ್ ಅರ್ಜಿಯನ್ನು ಸಲ್ಲಿಸಿದ್ದರು.

ಸ್ವಿಸ್ ಬ್ಯಾಂಕ್ ಖಾತೆದಾರರ ವಿವರ ಬಹಿರಂಗಪಡಿಸಲು ಕೇಂದ್ರ ಸರ್ಕಾರ ನಕಾರಸ್ವಿಸ್ ಬ್ಯಾಂಕ್ ಖಾತೆದಾರರ ವಿವರ ಬಹಿರಂಗಪಡಿಸಲು ಕೇಂದ್ರ ಸರ್ಕಾರ ನಕಾರ

ಈ ಅರ್ಜಿಗೆ ಗೃಹ ಸಚಿವಾಲಯ, 'ಇಂತಹ ಗ್ಯಾಂಗ್ ಬಗ್ಗೆ ನಮ್ಮಲ್ಲಿ ಯಾವುದೇ ಮಾಹಿತಿಯಿಲ್ಲ' ಎಂದು ಉತ್ತರಿಸಿದೆ. ಇದನ್ನು, ಸಾಕೇತ್ ದಾಖಲೆ ಸಮೇತ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಾಕೇತ್ ಟ್ವೀಟ್ ಐದು ಸಾವಿರಕ್ಕೂ ಹೆಚ್ಚು ರಿಟ್ವೀಟ್ ಆಗಿದೆ.

No Informaion On Tuke Tukde Gang: MHA Reply To RTI Application

ಚುನಾವಣೆಗೆ ಸಿದ್ದವಾಗಿರುವ ದೆಹಲಿ ಅಸೆಂಬ್ಲಿ ಚುನಾವಣೆಯ ಪ್ರಚಾರದ ಸಂದರ್ಭದಲ್ಲೂ ಅಮಿತ್ ಶಾ, ತುಕ್ಡೆ ತುಕ್ಡೆ ಗ್ಯಾಂಗ್ ಎನ್ನುವ ಪದವನ್ನು ಬಳಸಿದ್ದರು. ಈ ಗ್ಯಾಂಗಿಗೆ ದೆಹಲಿಯ ಜನತೆ ಸರಿಯಾದ ಪಾಠವನ್ನು ಕಲಿಸಬೇಕೆಂದು ಅಮಿತ್ ಶಾ ಮನವಿ ಮಾಡಿದ್ದರು.

ಇನ್ನು ಕೇಂದ್ರ ವಿದೇಶಾಂಗ ಖಾತೆಯ ಸಚಿವ ಎಸ್.ಜೈಶಂಕರ್, "ನಾವು ಕಲಿಯುತ್ತಿದ್ದಾಗ ಇಂತಹ ತುಕ್ಡೆ ತುಕ್ಡೆ ಗ್ಯಾಂಗ್​ಗಳು ಜೆಎನ್​ಯು ನಲ್ಲಿ ಇರಲಿಲ್ಲ" ಎನ್ನುವ ಹೇಳಿಕೆಯನ್ನು ನೀಡಿದ್ದರು.

"ದೇಶವನ್ನು ಇಬ್ಬಾಗ ಮಾಡುವ ತುಕ್ದೆ ತುಕ್ಡೆ ಗ್ಯಾಂಗ್ ಪರವಾಗಿ ದೀಪಿಕಾ ಪಡುಕೋಣೆ ನಿಂತಿದ್ದಾರೆ. ಸೈದ್ಧಾಂತಿಕವಾಗಿ ಕಣ್ಣಿಗೆ ಕಣ್ಣಿಟ್ಟು ನೋಡದೆ ಇತರೆ ಯುವತಿಯರ ಮೇಲೆ ಹಲ್ಲೆ ನಡೆಸುವ ಗ್ಯಾಂಗ್ ಜೊತೆ ನಿಂತಿರುವ ಅವರ ಹಕ್ಕನ್ನು ನಾನು ನಿರಾಕರಿಸುವುದಿಲ್ಲ. ಅದು ಅವರ ಸ್ವಾತಂತ್ರ್ಯ" ಎಂದು ಸ್ಮೃತಿ ಇರಾನಿ ಕೂಡಾ ವ್ಯಂಗ್ಯವಾಡಿದ್ದರು.

English summary
No Informaion On Tuke Tukde Gang: MHA (Ministry Of Home Affairs) Reply To RTI Application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X