ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಿಂದ ಗಡಿ ನುಸುಳುವಿಕೆ ಪ್ರಯತ್ನ ನಡೆದಿಲ್ಲ ಎಂದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಸಪ್ಟೆಂಬರ್.16: ಕಳೆದ ಆರು ತಿಂಗಳಿನಿಂದ ಭಾರತ ಚೀನಾ ಗಡಿಯಲ್ಲಿ ಯಾವುದೇ ರೀತಿ ಒಳನುಸುಳುವಿಕೆಯ ಪ್ರಯತ್ನ ನಡೆದಿಲ್ಲ ಎಂದು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯನಾದ್ ರಾಯ್ ಅವರು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ್ದಾರೆ.

ಜಮ್ಮು-ಕಾಶ್ಮೀರದ ಗಡಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ 594 ಬಾರಿ ಪಾಕಿಸ್ತಾನ ಸೇನೆಯಿಂದ ಒಳನುಸುಳುವಿಕೆ ಪ್ರಯತ್ನ ನಡೆದಿದೆ. ಈ ಪೈಕಿ 312 ಬಾರಿ ನಡೆಸಿದ ಒಳನುಸುಳುವಿಕೆಯ ಪ್ರಯತ್ನ ಯಶಸ್ವಿಯಾಗಿದೆ ಎಂದು ಗೃಹ ಸಚಿವಾಲಯವು ಮಾಹಿತಿ ನೀಡಿದೆ.

ಭಾರತ-ಚೀನಾ ನಡುವೆ ಎಚ್ಚರಿಕೆಗೂ ಮೀರಿದ ಗುಂಡಿನ ಸದ್ದುಭಾರತ-ಚೀನಾ ನಡುವೆ ಎಚ್ಚರಿಕೆಗೂ ಮೀರಿದ ಗುಂಡಿನ ಸದ್ದು

ಕಳೆದ ಆರು ತಿಂಗಳಿನಲ್ಲಿ ಜಮ್ಮು-ಕಾಶ್ಮೀರ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆಯಿಂದ 47 ಬಾರಿ ಒಳನುಸುಳುವಿಕೆ ಪ್ರಯತ್ನ ನಡೆದಿದೆ. ಆದರೆ ಭಾರತ ಚೀನಾದ ಗಡಿಯಲ್ಲಿ ಯಾವುದೇ ರೀತಿ ಒಳನುಸುಳುವಿಕೆ ಬಗ್ಗೆ ವರದಿಯಾಗಿಲ್ಲ ಎಂದು ರಾಜ್ಯಸಭೆಗೆ ಗೃಹ ಸಚಿವಾಲಯವು ಮಾಹಿತಿ ನೀಡಿದೆ.

No Infiltration Along Sino-Indian Border In Last 6 Months: Govt Informed The Rajya Sabha

3 ವರ್ಷಗಳಲ್ಲಿ 582 ಉಗ್ರರ ಹತ್ಯೆ:

ಭಾರತ ಮತ್ತು ಚೀನಾ ಗಡಿಯಲ್ಲಿ ಒಳನಸುಳುವಿಕೆ ಪ್ರಯತ್ನಗಳು ಕಳೆದ ಆರು ತಿಂಗಳ ಅವಧಿಯಲ್ಲಿ ನಡೆದಿಲ್ಲ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯನಾದ್ ರಾಯ್ ಅವರು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ್ದಾರೆ. ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಮತ್ತೊಬ್ಬ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ. ಕೃಷ್ಣಾ ರೆಡ್ಡಿ 3 ವರ್ಷಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿ ಪ್ರದೇಶದಲ್ಲಿ 582 ಉಗ್ರರನ್ನು ಹತ್ಯೆಗಯ್ಯಲಾಗಿದೆ ಎಂದು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು. ಈ ಮೂರು ವರ್ಷಗಳ ಅವಧಿಯಲ್ಲೇ 46 ಉಗ್ರರನ್ನು ಸೆರೆ ಹಿಡಿಯಲಾಗಿದೆ. ಜಮ್ಮು ಕಾಶ್ಮೀರ ಗಡಿಯಲ್ಲಿ 2018 ರಿಂದ 2020ರ ಸಪ್ಟೆಂಬರ್.08ರವರೆಗೂ ಉಗ್ರರು ನಡೆಸಿರುವ ದಾಳಿಯಿಂದಾಗಿ 76 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.

English summary
No Infiltration Along Sino-Indian Border In Last 6 Months: Govt Informed The Rajya Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X