ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರದಕ್ಷಿಣೆ ದೂರು ದಾಖಲಾದ ಕೂಡಲೇ ಯಾರನ್ನೂ ಬಂಧಿಸುವ ಹಾಗಿಲ್ಲ: ಸುಪ್ರೀಂ

ವರದಕ್ಷಿಣೆ ದೂರು ದಾಖಲಾದ ಕೂಡಲೇ ಆರೋಪಿಯನ್ನು ಬಂಧಿಸುವ ಹಾಗಿಲ್ಲ ಎಂದ ಸುಪ್ರೀಂ ಕೋರ್ಟ್. ದೂರು ಬಂದ ಕೂಡಲೇ ಮೊದಲು ಪ್ರಾಥಮಿಕ ತನಿಖೆ ನಡೆಸಬೇಕು. ಆ ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡು ಬಂದವರನ್ನು ಮಾತ್ರ ಬಂಧಿಸಬೇಕು ಎಂದ ನ್ಯಾಯಾಲಯ.

|
Google Oneindia Kannada News

ನವದೆಹಲಿ, ಜುಲೈ 27: ವರದಕ್ಷಿಣೆ ಕಿರುಕುಳದ ದೂರು ಬಂದ ತಕ್ಷಣ ಯಾವುದೇ ಮಹಿಳೆಯ ಪತಿ ಹಾಗೂ ಆತನ ಮನೆಯವರನ್ನು ತಕ್ಷಣಕ್ಕೆ ಬಂಧಿಸಕೂಡದೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಮಗಳ ಮದುವೆಗೆ ಟೀ ಮಾರೋನು ಕೊಟ್ಟಿದ್ದು 1.50 ಕೋಟಿ ವರದಕ್ಷಿಣೆಮಗಳ ಮದುವೆಗೆ ಟೀ ಮಾರೋನು ಕೊಟ್ಟಿದ್ದು 1.50 ಕೋಟಿ ವರದಕ್ಷಿಣೆ

ದೂರು ದಾಖಲಿಸಿಕೊಂಡ ನಂತರ, ಪ್ರಾಥಮಿಕ ತನಿಖೆಯನ್ನು ಕೈಗೊಂಡು ಆ ತನಿಖೆಯಲ್ಲಿ ಗಂಡ ಅಥವಾ ಆತನ ಮನೆಯವರು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಮಾತ್ರ ಬಂಧನಕ್ಕೆ ಕ್ರಮ ಕೈಗೊಳ್ಳಬೇಕೆಂದು ಅದು ಸೂಚಿಸಿದೆ.

No Immediate Arrest Under Dowry Harassment Law, Says Supreme Court

ಇತ್ತೀಚಿನ ವರ್ಷಗಳಲ್ಲಿ, ವರದಕ್ಷಿಣ ಕಿರುಕುಳ ಕಾನೂನನ್ನು ಸಾಕಷ್ಟು ಮಹಿಳೆಯರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಸಾಕಷ್ಟು ದೂರುಗಳು ಬಂದಿದ್ದವು. ಈ ದೂರುಗಳನ್ನು ಆಯಾ ಕಾಲಕ್ಕೆ ಪರಿಶೀಲಿಸುತ್ತಾ ಬಂದಿರುವ ಸುಪ್ರೀಂ ಕೋರ್ಟ್, ವರದಕ್ಷಿಣ ಕಾನೂನಿನಲ್ಲಿ ಮಾರ್ಪಾಟು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ, ಸೂಚನೆಗಳನ್ನು ನೀಡುತ್ತಾ ಬಂದಿತ್ತು.

ಮದುವೆ ಮರುದಿನವೇ ವರನನ್ನು ಸೆರೆಮನೆಗಟ್ಟಿದ ವಧುಮದುವೆ ಮರುದಿನವೇ ವರನನ್ನು ಸೆರೆಮನೆಗಟ್ಟಿದ ವಧು

ಜುಲೈ 27ರಂದು ಇಂಥದ್ದೇ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ದೂರು ದಾಖಲಿಸಿದ ತಕ್ಷಣ ಪತಿ ಹಾಗೂ ಆತನ ಸಂಬಂಧಿಕರನ್ನು ಬಂಧಿಸುವ ಕ್ರಮಕ್ಕೆ ತಿಲಾಂಜಲಿ ನೀಡಿದೆ.

English summary
Immediate arrests - an integral process followed by the police in dowry harassment cases - was ruled out today by the Supreme Court. The top court said as in any other case, the police will now have to conduct a preliminary inquiry before making any arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X