• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈತರು ರಾಷ್ಟ್ರವಿರೋಧಿಗಳಲ್ಲ, ಅವರ ಸ್ಥಿತಿಯನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ: ಬಾಬಾ ರಾಮ್‌ದೇವ್

|
Google Oneindia Kannada News

ಡೆಹ್ರಾಡೂನ್,ಜನವರಿ 06: ರೈತರು ಎಂದಿಗೂ ರಾಷ್ಟ್ರ ವಿರೋಧಿಗಳಲ್ಲ ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ.

ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವರ ಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ ಎಂದರು.

ಸೋನಿಯಾ ಗಾಂಧಿ, ಮಾಯಾವತಿಗೆ ಭಾರತ ರತ್ನ ನೀಡಿ: ಮಾಜಿ ಮುಖ್ಯಮಂತ್ರಿ ಆಗ್ರಹಸೋನಿಯಾ ಗಾಂಧಿ, ಮಾಯಾವತಿಗೆ ಭಾರತ ರತ್ನ ನೀಡಿ: ಮಾಜಿ ಮುಖ್ಯಮಂತ್ರಿ ಆಗ್ರಹ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈಯ್ಯಲು ವಿರೋಧ ಪಕ್ಷಗಳಿಗೆ ಯಾವುದೇ ವಿಷಯವಿಲ್ಲದ ಕಾರಣ ಕೊರೋನಾ ಲಸಿಕೆ ವಿಷಯದಲ್ಲಿ ಅವರನ್ನು ಎಳೆದು ತರುತ್ತಿದ್ದಾರೆ ಎಂದು ರಾಮದೇವ್ ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ರೈತರ ವಿರುದ್ಧ ಯಾವುದೇ ದ್ವೇಷವಿಲ್ಲ, ಅವರು (ಮೋದಿ) ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಮತ್ತು ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ ಮೊದಲ ಪ್ರಧಾನಿಯಾಗಿದ್ದಾರೆ.

ಚಳಿ ತೀರಾ ಉತ್ತುಂಗದಲ್ಲಿರುವ ಸಮಯದಲ್ಲೇ ರೈತರು ಪ್ರತಿಭಟನೆ ನಡೆಸುತ್ತಿರುವುದು ಆತಂಕದ ಸಂಗತಿಯಾಗಿದೆ. ಸರ್ಕಾರ ಈಗಾಗಲೇ ರೈತರ ಬಗ್ಗೆ ಕಾಳಜಿ ವಹಿಸಿದೆ. ಮತ್ತು ಅವರ ಸಮಸ್ಯೆಗಳನ್ನು ಸರಿಪಡಿಸುವ ಭರವಸೆ ನೀಡಿದೆ.

English summary
Yoga Guru Baba Ramdev on Tuesday said that some people are taking advantage of farmers and that not a single farmer in this country is anti-national.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X