ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟಾರಿ-ವಾಘಾ ಗಡಿಯಲ್ಲಿ ಸಿಹಿ ಹಂಚಿಕೊಳ್ಳದ ಇಂಡೋ-ಪಾಕ್ ಯೋಧರು!

|
Google Oneindia Kannada News

ನವದೆಹಲಿ, ಜನವರಿ.26: ಭಾರತ-ಪಾಕಿಸ್ತಾನ ಗಡಿಯಲ್ಲಿ 71ನೇ ಗಣರಾಜ್ಯೋತ್ಸವ ದಿನ ಪ್ರತಿವರ್ಷಕ್ಕಿಂತ ಈ ವರ್ಷ ವಿಭಿನ್ನವಾಗಿತ್ತು. ಏಕೆಂದರೆ ಅಟಾರಿ ಹಾಗೂ ವಾಘಾ ಗಡಿಯಲ್ಲಿ ಇಂಡೋ-ಪಾಕಿಸ್ತಾನ ಯೋಧರು ಈ ವರ್ಷ ಸಿಹಿ ಹಂಚಿಕೊಳ್ಳಲಿಲ್ಲ.

ವಾಡಿಕೆಯಂತೆ ಸಿಹಿ ಹಂಚಿಕೊಳ್ಳುವ ಮೂಲಕ ಗಣರಾಜ್ಯೋತ್ಸವ ಸಂಭ್ರಮವನ್ನು ಆಚರಿಸಲು ಪಾಕಿಸ್ತಾನ್ ಯೋಧರಿಗೆ ಭಾರತವು ಸಂದೇಶ ರವಾನಿಸಿತ್ತು. ಆದರೆ, ಪಾಕಿಸ್ತಾನವು ಭಾರತದ ಸಂದೇಶವನ್ನು ತಿರಸ್ಕರಿಸಿದ್ದಾರೆ ಎಂದು ಬಿಎಸ್ಎಫ್ ಯೋಧರೊಬ್ಬರು ತಿಳಿಸಿದ್ದಾರೆ.

ಆರ್ಟಿಕಲ್ 370 ಬೆಂಬಲಿಸಿದರೆ ಕೇಸು ಕೈಬಿಡುವುದಾಗಿ ಆಮಿಷ: ಝಕೀರ್ ನಾಯ್ಕ್‌ಆರ್ಟಿಕಲ್ 370 ಬೆಂಬಲಿಸಿದರೆ ಕೇಸು ಕೈಬಿಡುವುದಾಗಿ ಆಮಿಷ: ಝಕೀರ್ ನಾಯ್ಕ್‌

ಪಾಕಿಸ್ತಾನದ ನಡೆಯಿಂದ ಈ ಬಾರಿ ಅಟಾರಿ ಹಾಗೂ ವಾಘಾ ಗಡಿಯಲ್ಲಿ ಯೋಧರು ಸಿಹಿ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬಿಎಸ್ಎಫ್ ಯೋಧರು ಮಾಹಿತಿ ನೀಡಿದ್ದಾರೆ. ಜಮ್ಮು-ಕಾಶ್ಮೀರಕ್ಕೆ 370ರ ಅಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಪಾಕಿಸ್ತಾನವು ಈ ನಡೆಯನ್ನು ಅನುಸರಿಸುತ್ತಿದೆ.

No Exchange Of Sweets Between BSF And Pakistani Rangers

ಸಿಹಿ ಹಂಚಿಕೊಳ್ಳಲು ಪಾಕ್ ಹಿಂದೇಟು:

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಪಾಕಿಸ್ತಾನ ಸೇನೆಯು ಭಾರತದ ಯೋಧರ ಜೊತೆ ಸಿಹಿ ಹಂಚಿಕೊಳ್ಳುವುದಕ್ಕೆ ನಿರಾಕರಿಸಿದೆ ಎಂದು ತಿಳಿದು ಬಂದಿದೆ. ಈ ಮೊದಲು ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ದೀಪಾವಳಿ, ಈದ್ ಮಿಲಾದ್ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಸಹೋರತ್ವದ ಸಂಕೇತವಾಗಿ ಅಟಾರಿ ಹಾಗೂ ವಾಘಾ ಗಡಿಯಲ್ಲಿ ಭಾರತೀಯ ಹಾಗೂ ಪಾಕಿಸ್ತಾನದ ಯೋಧರು ಸಿಹಿಯನ್ನು ಹಂಚಿಕೊಳ್ಳುತ್ತಿದ್ದರು.

English summary
71st Republic Day: No Exchange Of Sweets Between BSF And Pakistani Rangers In Attari-Wagah Border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X