ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಗನಯಾನ: ಬಾಹ್ಯಾಕಾಶಕ್ಕೆ ಹೋಗಲು ಹಲ್ಲು ಸರಿ ಇರ್ಬೇಕು

|
Google Oneindia Kannada News

ನವದೆಹಲಿ, ನವೆಂಬರ್ 17: ಬಹುತೇಕ ಪೈಲಟ್‌ಗಳ ಅರ್ಜಿ ತಿರಸ್ಕೃತವಾಗಲು ಹಲ್ಲು ಮುಖ್ಯ ಕಾರಣ ಎಂಬುದು ತಿಳಿದುಬಂದಿದೆ.

ಅಂತರಿಕ್ಷಕ್ಕೆ ಹೋಗುವವರು ದೈಹಿಕವಾಗಿ ಸದೃಢರಾದರಷ್ಟೇ ಸಾಲದು ಅವರ ಹಲ್ಲುಗಳು ಕೂಡ ಸರಿ ಇರಬೇಕು.

ಚಂದ್ರಯಾನ-2 ವೈಫಲ್ಯದ ಕಾರಣವನ್ನು ಕೊನೆಗೂ ಬಿಚ್ಚಿಟ್ಟ ಇಸ್ರೋಚಂದ್ರಯಾನ-2 ವೈಫಲ್ಯದ ಕಾರಣವನ್ನು ಕೊನೆಗೂ ಬಿಚ್ಚಿಟ್ಟ ಇಸ್ರೋ

2022ರಲ್ಲಿ ಮೊದಲ ಬಾರಿಗೆ ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ಗಗನಯಾನವನ್ನು ಕೈಗೊಳ್ಳಲು ಉದ್ದೇಶಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹಲ್ಲು ಸರಿ ಇಲ್ಲ ಎಂದು ಸಾಕಷ್ಟು ಆಕಾಂಕ್ಷಿಗಳ ಹೆಸರನ್ನು ಸ್ವೀಕರಿಸಿದೆ.

 No Entry To Space For IAF Test Pilots With Bad Teeth

ಗಗನಯಾನ ಯೋಜನೆಯಡಿ ಮೂವರನ್ನು ಅಂತರಿಕ್ಷಕ್ಕೆ ಕಳುಹಿಸುವ ಸಲುವಾಗಿ ಈ ಹಿಂದೆಯೇ ಇಸ್ರೋ ಅರ್ಜಿ ಆಹ್ವಾನಿಸಿತ್ತು.ಜುಲೈ ಹಾಗೂ ಆಗಸ್ಟ್‌ನಲ್ಲಿ ನಡೆದ ಪರೀಕ್ಷೆ ವೇಳೆ ಬಹುತೇಕರು ತಿರಸ್ಕೃತವಾಗಲು ದಂತ ಸಮಸ್ಯೆಯೇ ಕಾರಣವಾಗಿತ್ತು.

ಯುರೋಪಿನ ಬಾಹ್ಯಾಕಾಶ ಸಂಸ್ಥೆಗಳ ಪ್ರಕಾರ , ಗಗನಯಾತ್ರಿಗಳ ಹಲ್ಲು ಸರಿ ಇರಬೇಕು. ಏಕೆಂದರೆ ಬಾಹ್ಯಾಕಾಶಯಾನದ ವೇಳೆ ಅಲುಗಾಟ ಬಲಿಷ್ಠವಾಗಿರುತ್ತದೆ.

ಸರಿಯಾದ ಜೋಡಣೆಯಾಗದ ಹಲ್ಲುಗಳು ಸಡಿಲಗೊಳ್ಳಬಹುದು ಅಥವಾ ಕಳಚಿ ಬೀಳಬಹುದು. ಹಲ್ಲಿನ ಕುಳಿಗಳೂ ಇದ್ದರೆ ವಾತಾವರಣದ ಒತ್ತಡದಿಂದಾಗಿ ನೋವು ಕಾಣಿಸಿಕೊಳ್ಳಬಹುದು.

ಗಗನಯಾನಕ್ಕೆ ಇಸ್ರೋಸದ್ಯ 12 ಮಂದಿಯ ಹೆಸರನ್ನು ಅಂತಿಮಗೊಳಿಸಿದೆ.60 ಮಂದಿಯಿಂದ ಅರ್ಜಿಯೂ ಬಂದಿತ್ತು, ಅವರನ್ನು ರಷ್ಯಾದ ತಜ್ಞರ ಸಹಾಯದೊಂದಿಗೆ 12 ಮಂದಿಯ ಹೆಸರನ್ನಷ್ಟೇ ಇಸ್ರೋ ಅಂತಿಮಗೊಳಿಸಿದೆ. ಉಳಿದಂತೆ ಕಿವಿ ಕೊಂಚ ಮಂದವಾಗಿರುವುದು ಹಾಗೂ ದೃಷ್ಟಿ ದೋಷವಿರುವ ಕಾರಣಕ್ಕೆ ಕೆಲವರನ್ನು ತಿರಸ್ಕರಿಸಲಾಗಿದೆ.

English summary
The Russians are so particular about teeth in the selection process, perhaps because they had to abort a mission due to a toothache.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X