ದೂರು ನೀಡಲು ಹೋದರೆ ಪಾಠ ಹೇಳಿದ ಪೊಲೀಸರು!

By: ಅನುಶಾ ರವಿ
Subscribe to Oneindia Kannada

ಉದಯಪುರ, ಏಪ್ರಿಲ್ 11: ಭಾರತದಲ್ಲಿ ಬೇಲಿಯೇ ಎದ್ದು ಹೊಲಮೇಯುವ ಸನ್ನಿವೇಶವೇ ಹೆಚ್ಚು. ರಕ್ಷಣೆಯ ನಿರೀಕ್ಷೆಯಿಟ್ಟುಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿದರೆ, ರಕ್ಷಣೆಯ ಭರವಸೆಯ ಬದಲು ಒಂದಷ್ಟು ಪುಕ್ಕಟೆ ಪಾಠ ಕೇಳಬೇಕಾಗುತ್ತದೆ. ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ಇಂಥದೇ
ಘಟನೆ ನಡೆದಿದೆ.

ವಿಕೃತ ಕಾಮಿಯೊಬ್ಬನ ಕುರಿತು 17 ವರ್ಷದ ಯುವತಿ ಪೊಲೀಸರಿಗೆ ದೂರು ನೀಡುವುದಕ್ಕೆ ತೆರಳಿದಾಗ ಪೊಲೀಸರು ಆಕೆಗೆ ನೀಡಿದ ಪುಕ್ಕಟೆ ಸಲಹೆಗಳ ಕುರಿತು ಆಕೆಯ ಅಕ್ಕ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಸಹಾಯ ಮಾಡಬೇಕಾದ ಪೊಲೀಸರೇ, ಅಪರಾಧಿಗಳದ್ದೇನೂ ತಪ್ಪಿಲ್ಲ ಎಂಬಂತೆ ಅವರ ಪರ ನಿಂತರೆ ನಮ್ಮನ್ನೆಲ್ಲ ಕಾಪಾಡುವವರು ಯಾರೆಂದು ಆಕೆ ಪ್ರಶ್ನಿಸಿದ್ದಾರೆ.[ಬಿಗ್ ಬಜಾರ್ ಮ್ಯಾನೇಜರ್ ಮೇಲೆ ಲೈಂಗಿಕ ಕಿರುಕುಳ ಆರೋಪ]

No country for women?

ಆಕೆಯ ಫೇಸ್ ಬುಕ್ ಪೋಸ್ಟ್ ನೋಡಿದ ಕೇಂದ್ರ ಸಚಿವೆ ಮನೇಕಾ ಗಾಂಧಿ, ಆಕೆಯ ಸಂಪರ್ಕ ಸಂಖ್ಯೆ ನೀಡುವಂತೆ ಕೇಳಿದ್ದಾರಲ್ಲದೆ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ, ನ್ಯಾಯ ಒದಗಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.[ಬೆಂಗಳೂರಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ]

https://twitter.com/Manekagandhibjp/status/851312002572013568?ref_src=twsrc%5Etfw&ref_url=http%3A%2F%2Fwww.oneindia.com%2Findia%2Fno-country-for-women-pervert-blackmails-udaipur-teen-police-indulge-in-victim-shaming-2401012.html

ಘಟನೆಯ ವಿವರ
ರಾಜಸ್ತಾನದ ಉದಯಪುರದಲ್ಲಿ 17 ವರ್ಷದ ಯುವತಿಯೊಬ್ಬಳು ತನಗೆ ಸಾಮಾಜಿಕ ಜಾಲತಾಣಗಳ ಮೂಲಕ ತೊಂದರೆ ನೀಡುತ್ತಿದ್ದ ವಿಕೃತ ಕಾಮಿಯೊಬ್ಬನಿಂದಾಗಿ ತೀರಾ ತೊಂದರೆ ಅನುಭವಿಸುತ್ತಿದ್ದಳು. ಆಕೆಯ ಚಿತ್ರಗಳನ್ನು ಎಡಿಟ್ ಮಾಡಿ, ಅಶ್ಲೀಲಗೊಳಿಸಿ ಕಳಿಸುತ್ತಿದ್ದ ಆತನ ಉಪಟಳ ದಿನೇ ದಿನ ಹೆಚ್ಚಾಗುತ್ತಿದ್ದಂತೆ ಭಯಗೊಂಡ ಯುವತಿ ಮನೆ ಜನರಿಗೆ ಈ ವಿಷಯ ತಿಳಿಸಿದ್ದಳು.[ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ: ಯುವತಿ ಬಂಧನ]

ಘಟನೆಯನ್ನು ನಿರ್ಲಕ್ಷ್ಯಿಸುವುದು ಸರಿಯಲ್ಲ ಎಂದು ಈ ಬಗ್ಗೆ ದೂರು ನೀಡುವುದಕ್ಕೆ ತನ್ನ ತಂದೆಯೊಂದಿಗೆ ಯುವತಿ ಸೂರಜ್ ಪೊಲ್ ಸೈಬರ್ ಅಪರಾಧ ಶಾಖೆಗೆ ಬಂದು ದೂರುನೀಡಿದ್ದಳು. ದೂರು ದಾಖಲಿಸಿಕೊಂಡ ಪೊಲೀಸರು, ಹುಡುಗಿಯರು ತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಆಕೆಗೆ ಗಂಟೆಗಟ್ಟಲೆ ಪಾಠ ಕೂಡ ಮಾಡಿದ್ದಾರೆ!

ಸಾಮಾಜಿಕ ಜಾಲತಾಣಗಳಲ್ಲಿರುವ ನಿಮ್ಮ ಎಲ್ಲಾ ಖಾತೆಗಳನ್ನೂ ಇಂದೇ ನಿಷ್ಕ್ರಿಯಗೊಳಿಸಿಬಿಡಿ, ಆಗ ಇಂಥ ತೊಂದರೆಗಳು ಹುಟ್ಟಿಕೊಳ್ಳುವುದೇ ಇಲ್ಲ, ಹಾಗೇ ನಿಮ್ಮ ಮಗಳಿಗೆ ಫೋನ್ ಉಪಯೋಗಿಸುವುದಕ್ಕೂ ಬಿಡಬೇಡಿ ಎಂದು ಯುವತಿಗೆ ಮಾತ್ರವಲ್ಲದೆ ಆಕೆಯ ತಂದೆಗೂ ಪಾಠ ಮಾಡಿದ್ದಾರೆ.

ಇದರಿಂದ ಕುಪಿತಗೊಂಡ ಆಕೆ ಮನೆಗೆ ಬಂದು ತನ್ನ ಅಳಲನ್ನು ತನ್ನ ಸಹೋದರಿಯ ಬಳಿ ತೋಡಿಕೊಂಡಿದ್ದಾರೆ. ಇದೀಗ ಅವರು ಫೇಸ್ ಬುಕ್ ಗೆ ಹಾಕಿರುವ ಪೋಸ್ಟ್ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: No country for women?
English summary
All that a 17-year-old girl from Udaipur and her father wanted was to file a complaint against a pervert but instead of support from the police department, the duo got a lecture on how the girl should delete all her social media accounts. The entire incident was narrated by the 17-year-old's elder sister on Facebook. The post has now gone viral with union minister Maneka Gandhi taking note.
Please Wait while comments are loading...