ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸರ್ಕಾರಕ್ಕೆ ಸಂಕಷ್ಟ; ಅವಿಶ್ವಾಸ ನಿರ್ಣಯ ಮಂಡಿಸಿದ ಕಾಂಗ್ರೆಸ್!

|
Google Oneindia Kannada News

ಇಂಪಾಲ, ಜೂನ್ 18 : ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ನೇತೃತ್ವದ ಮಣಿಪುರದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದೆ. ಬುಧವಾರ ಮೂವರು ಶಾಸಕರು ರಾಜೀನಾಮೆ ನೀಡಿದ ಬಳಿಕ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ.

Recommended Video

Congress party wants senior leaders : DK Shivakumar | Oneindia Kannada

2017ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಬಿಜೆಪಿ ಸರ್ಕಾರಕ್ಕೆ ಎನ್‌ಪಿಪಿಯ 9 ಶಾಸಕರು ಬೆಂಬಲ ನೀಡಿದ್ದರು. ಬುಧವಾರ ಅವರು ಬೆಂಬಲ ವಾಪಸ್ ಪಡೆದಿದ್ದರು.

ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ ಹುದ್ದೆಗೆ 12 ಶಾಸಕರ ರಾಜೀನಾಮೆ; ಬಿಜೆಪಿಗೆ ಗುಳೆ ವದಂತಿ ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ ಹುದ್ದೆಗೆ 12 ಶಾಸಕರ ರಾಜೀನಾಮೆ; ಬಿಜೆಪಿಗೆ ಗುಳೆ ವದಂತಿ

'ಸೆಕ್ಯುಲರ್ ಪ್ರೋಗ್ರೆಸೀವ್ ಫ್ರಂಟ್' ಎಂಬ ಹೊಸ ಮೈತ್ರಿಕೂಟ ರಾಜ್ಯದಲ್ಲಿ ರಚನೆಯಾಗಿದೆ. ಕಾಂಗ್ರೆಸ್ ಮತ್ತು ಎನ್‌ಪಿಪಿ ಈ ಮೈತ್ರಿಕೂಟದ ಪ್ರಮುಖ ಪಕ್ಷವಾಗಿದೆ. ತ್ರಿಣಮೂಲ ಕಾಂಗ್ರೆಸ್‌ನ ಒಬ್ಬರು, ಒಬ್ಬರು ಪಕ್ಷೇತರ ಶಾಸಕರು ಈ ಮೈತ್ರಿಕೂಟ ಬೆಂಬಲಿಸಿದ್ದಾರೆ.

ಅಲ್ಪ ಮತಕ್ಕೆ ಕುಸಿದ ಮಣಿಪುರದ ಬಿಜೆಪಿ ಸರ್ಕಾರ ಅಲ್ಪ ಮತಕ್ಕೆ ಕುಸಿದ ಮಣಿಪುರದ ಬಿಜೆಪಿ ಸರ್ಕಾರ

No Confidence Motion Against Manipur BJP Govt

ಮಣಿಪುರದ ಮಾಜಿ ಮುಖ್ಯಮಂತ್ರಿ ಓಕ್ರಾಮ್ ಇಬೋಬಿ ಈ ಮೈತ್ರಿಕೂಟವನ್ನು ಮುನ್ನೆಡೆಸುತ್ತಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಿರುವ ಮೈತ್ರಿಕೂಟದ ನಾಯಕರು ಬಿಜೆಪಿ ಸರ್ಕಾರ ಬಹುಮತ ಕಳೆದುಕೊಂಡಿದೆ. ತಕ್ಷಣ ವಿಶೇಷ ಅಧಿವೇಶನ ಕರೆಯಬೇಕು ಎಂದು ಮನವಿ ಮಾಡಿದ್ದಾರೆ.

ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿ ವಿಶ್ವಾಸ ಮತ ಸಾಬೀತು ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿ ವಿಶ್ವಾಸ ಮತ ಸಾಬೀತು

ರಾಜ್ಯಪಾಲರು ವಿಶೇಷ ಅಧಿವೇಶನ ಕರೆದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್‌ಗೆ ಬಹುಮತ ಸಾಬೀತು ಮಾಡಲು ಸೂಚನೆ ನೀಡಿದರೆ ಬಿಜೆಪಿಗೆ ಸಂಕಷ್ಟ ಎದುರಾಗಲಿದೆ. ಶಾಸಕರ ಬಲವಿಲ್ಲದೇ ಅಲ್ಪ ಮತಕ್ಕೆ ಕುಸಿದಿರುವ ಸರ್ಕಾರ ಪತನಗೊಳ್ಳಲಿದೆ.

60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿ 21, ಕಾಂಗ್ರೆಸ್ 28, ಎನ್‌ಪಿಎಫ್ 4, 1 ಟಿಎಂಸಿ, ಒಬ್ಬರು ಪಕ್ಷೇತರ ಶಾಸಕರು ಇದ್ದಾರೆ. ಕಾಂಗ್ರೆಸ್‌ಗೆ ಇತರ ಪಕ್ಷಗಳ ಜೊತೆ ಸೇರಿ ಮೈತ್ರಿಕೂಟ ಮಾಡಿಕೊಂಡಿದ್ದು ಬಿಜೆಪಿಗೆ ಸಂಕಷ್ಟ ತಂದಿದೆ.

English summary
Manipur Congress moved a no-confidence motion against the Biren Singh-led BJP government. Manipur government lost majority after 9 MLA's withdrew support on June 17, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X