ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಹೂಡಿಕೆಗೆ ಚೀನಾದ ಯಾವ ಕಂಪೆನಿಗೂ ಅನುಮತಿ ನೀಡಿಲ್ಲ

|
Google Oneindia Kannada News

ನವದೆಹಲಿ, ಫೆಬ್ರವರಿ 23: ಭಾರತದಲ್ಲಿ ಹೂಡಿಕೆ ಮಾಡಲು ಯಾವುದೇ ಚೀನೀ ಕಂಪೆನಿಗಳಿಗೆ ಹಸಿರು ನಿಶಾನೆ ನೀಡಿಲ್ಲ. ಇದುವರೆಗೂ ಯಾವ ಅಂತಹ ಪ್ರಸ್ತಾವಗಳಿಗೂ ಒಪ್ಪಿಗೆ ನೀಡಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಗಡಿಯಲ್ಲಿನ ಉದ್ವಿಗ್ನತೆ ಕಡಿಮೆಯಾಗುತ್ತಿದ್ದಂತೆಯೇ ಚೀನಾದಿಂದ ಹೂಡಿಕೆ ಪ್ರಸ್ತಾಪಗಳು ಹರಿದುಬರುತ್ತಿವೆ ಎಂಬ ವರದಿಗಳನ್ನು ನಿರಾಕರಿಸಲಾಗಿದೆ.

ಹಾಂಕಾಂಗ್ ಮೂಲದ ಮೂರು ಕಂಪೆನಿಗಳ ಪ್ರಸ್ತಾಪವನ್ನು ಮಾತ್ರ ಜನವರಿ 22ರಂದು ನಡೆದ ಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಮೂರು ಪ್ರಸ್ತಾಪಗಳು ಸಿಟಿಜನ್ ವಾಚಸ್, ನಿಪ್ಪಾನ್ ಪೈಂಟ್ಸ್ ಮತ್ತು ನೆಟ್‌ಪ್ಲೇಗಳಿಂದ ಬಂದಿತ್ತು. ಮೂರರಲ್ಲಿ ಎರಡು ಜಪಾನಿ ಕಂಪೆನಿಗಳು ಮತ್ತು ಒಂದು ಎನ್‌ಆರ್‌ಐಗೆ ಸೇರಿದ್ದವಾಗಿವೆ ಎಂದು ಮೂಲಗಳು ಹೇಳಿವೆ.

ಅಮೆರಿಕದ ಸ್ನೇಹ ಬೇಕೇ ಬೇಕು, ಆದರೆ ತಂಟೆಗೆ ಬಂದ್ರೆ ಚೆನ್ನಾಗಿರಲ್ಲ!ಅಮೆರಿಕದ ಸ್ನೇಹ ಬೇಕೇ ಬೇಕು, ಆದರೆ ತಂಟೆಗೆ ಬಂದ್ರೆ ಚೆನ್ನಾಗಿರಲ್ಲ!

ಕಳೆದ ವರ್ಷದ ಜೂನ್ ತಿಂಗಳಲ್ಲಿ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನೀ ಸೈನಿಕರು ನಡುವೆ ನಡೆದ ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾದ ಬಳಿಕ ಸರ್ಕಾರವು ವಿದೇಶಿ ನೇರ ಹೂಡಿಕೆ ನೀತಿಯಲ್ಲಿ ಬದಲಾವಣೆ ಮಾಡುವ ಮೂಲಕ ಚೀನಾಕ್ಕೆ ಸ್ಪಷ್ಟ ಸಂದೇಶ ನೀಡಿತ್ತು.

No Chinese Company Has Been Permitted To Invest In India After Easing Of Border Tensions

ಬ್ರಿಕ್ಸ್ ಶೃಂಗಸಭೆಗೆ ಭಾರತ ಆತಿಥ್ಯ: ಚೀನಾದ ಬೆಂಬಲಬ್ರಿಕ್ಸ್ ಶೃಂಗಸಭೆಗೆ ಭಾರತ ಆತಿಥ್ಯ: ಚೀನಾದ ಬೆಂಬಲ

'ಸರ್ಕಾರವು ದೃಢವಾದ ಎಫ್‌ಡಿಐ ನೀತಿಯನ್ನು ಜಾರಿಗೊಳಿಸಿದೆ. ತಿದ್ದುಪಡಿ ನೀತಿಯ ಪ್ರಕಾರ ಭಾರತದ ಗಡಿಯನ್ನು ಹಂಚಿಕೊಂಡಿರುವ ದೇಶಗಳು ಭದ್ರತಾ ವಿಶ್ಲೇಷಣೆಗೆ ಒಳಪಡಬೇಕು ಮತ್ತು ಕೂಲಂಕಷ ವಿಶ್ಲೇಷಣೆ ಬಳಿಕವೇ ಅನುಮತಿ ನೀಡಲಾಗುತ್ತದೆ. ಸರದಿಯಲ್ಲಿರುವ ಯಾವುದೇ ಪ್ರಸ್ತಾಪಗಳನ್ನು ಕಠಿಣ ಪರಿಶೀಲನೆಗೆ ಒಳಪಡಿಸಲಾಗುವುದು' ಎಂದು ಮೂಲಗಳು ತಿಳಿಸಿವೆ.

English summary
Government sources says no Chinese company has been permitted to invest in India after easing of border tensions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X