ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಗೆಲ್ಲುವ ಸಾಧ್ಯತೆಯೇ ಇಲ್ಲ : ಹಾರ್ದಿಕ್ ಕೆಂಡ

By Prasad
|
Google Oneindia Kannada News

Recommended Video

ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ, ಅಂದ್ರು ಹಾರ್ದಿಕ್ ಪಟೇಲ್ | Oneindia Kannada

ಅಹ್ಮದಾಬಾದ್, ಡಿಸೆಂಬರ್ 14 : "ಗುಜರಾತ್ ನಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಏನೇ ಹೇಳಲಿ, ಎಂಥದೇ ಫಲಿತಾಂಶ ನೀಡಲಿ, ಭಾರತೀಯ ಜನತಾ ಪಕ್ಷ ಯಾವುದೇ ಕಾರಣಕ್ಕೂ ಬಹುಮತ ಪಡೆಯುವುದಿಲ್ಲ, ಅಧಿಕಾರಕ್ಕೆ ಬರುವುದಿಲ್ಲ!"

ಹೀಗೆಂದು ಅತ್ಯಂತ ಖಡಾಖಂಡಿತವಾಗಿ ನುಡಿದವರು ಪಾಟಿದಾರ್ ಅನಾಮತ್ ಆಂದೋಲನ ಸಮಿತಿಯ ಅಧ್ಯಕ್ಷ, ಭಾರತೀಯ ಜನತಾ ಪಕ್ಷದ ಪಾಲಿನ ಮುಳ್ಳಾಗಿರುವ ಯುವ ನಾಯಕ ಹಾರ್ದಿಕ್ ಪಟೇಲ್. ಡಿಸೆಂಬರ್ 18ರವರೆಗೆ ಕಾದು ನೋಡಿ, ಏನಾಗುತ್ತದೆಂದು ಎಂದು ಸವಾಲು ಎಸೆದಿದ್ದಾರೆ.

ಹಾರ್ದಿಕ್ ಪಟೇಲ್ ಚುನಾವಣೆಗೆ ಯಾಕೆ ನಿಂತಿಲ್ಲ? ಕಾರಣ ಬಹಿರಂಗಹಾರ್ದಿಕ್ ಪಟೇಲ್ ಚುನಾವಣೆಗೆ ಯಾಕೆ ನಿಂತಿಲ್ಲ? ಕಾರಣ ಬಹಿರಂಗ

ಎಬಿಪಿ ನ್ಯೂಸ್, ಇಂಡಿಯಾ ಟುಡೆ, ಸಿವೋಟರ್, ನ್ಯೂಸ್ ನೇಷನ್, ಇಂಡಿಯಾ ಟಿವಿ, ಟೈಮ್ಸ್ ನೌ ವಿಎಂಆರ್, ರಿಪಬ್ಲಿಕ್ ಟಿವಿ, ಚಾಣಕ್ಯ ಮುಂತಾದ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆಯ ತಲೆಯ ಮೇಲೆ ಬಾರಿಸಿದಂತೆ ಹಾರ್ದಿಕ್ ಪಟೇಲ್, ಬಿಜೆಪಿ ಗೆಲ್ಲುವುದಿಲ್ಲ ಎಂದು ಘಂಟಾಷೋಷವಾಗಿ ಸಾರಿದ್ದಾರೆ.

ಗುಜರಾತ್ ಎಲ್ಲಾ ಎಕ್ಸಿಟ್ ಪೋಲ್ ಗಳಲ್ಲೂ ಬಿಜೆಪಿಗೆ ಬಹುಮತ!ಗುಜರಾತ್ ಎಲ್ಲಾ ಎಕ್ಸಿಟ್ ಪೋಲ್ ಗಳಲ್ಲೂ ಬಿಜೆಪಿಗೆ ಬಹುಮತ!

ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ನಲ್ಲಿರುವ ದೋಷದ ಲಾಭ ಪಡೆದಿರುವುದು ಈ ಚುನಾವಣೋತ್ತರ ಸಮೀಕ್ಷೆಗಳಿಂದ ಸಾಬೀತಾಗಿದೆ ಎಂದು ಕೆಂಡ ಕಾರಿದ್ದಾರೆ. ಚುನಾವಣೆಯನ್ನು ನ್ಯಾಯಯುತವಾಗಿ ನಡೆಸಿದ್ದರೆ ಬಿಜೆಪಿ ಗೆಲ್ಲುವ ಸಾಧ್ಯತೆಯೇ ಇದ್ದಿದ್ದಿಲ್ಲ ಎಂದು ಹಾರ್ದಿಕ್ ಹೇಳಿಕೆ ನೀಡಿದ್ದಾರೆ.

ಮೋದಿಗೆ ಹಾರ್ದಿಕ್ ಪಟೇಲ್ ಸೆಡ್ಡು

ಮೋದಿಗೆ ಹಾರ್ದಿಕ್ ಪಟೇಲ್ ಸೆಡ್ಡು

ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ರಾಜ್ಯಾದ್ಯಂತ ಚಳವಳಿ ನಡೆಸುತ್ತಿರುವ ಹಾರ್ದಿಕ್ ಪಟೇಲ್ ಅವರು ನರೇಂದ್ರ ಮೋದಿಗೆ ಸೆಡ್ಡು ಹೊಡೆದಿದ್ದರು. ರಾಜ್ಯದ ಎಲ್ಲೆಡೆ ಅವರು ನಡೆಸಿದ ಪ್ರಚಾರ ಸಭೆಗಳಲ್ಲಿ ಕೆಲ ಬಿಜೆಪಿ ನಾಯಕರಿಗಿಂತ ಹೆಚ್ಚು ಜನರ ಜಮಾವಣೆಯಾಗುತ್ತಿದ್ದುದು ಅವರು ಜನಪ್ರಿಯತೆಗೆ ಹಿಡಿದ ಕನ್ನಡಿಯಾಗಿತ್ತು.

ಹಾರ್ದಿಕ್ ಅವರನ್ನು ಬಳಸಿಕೊಂಡಿತೆ ಕಾಂಗ್ರೆಸ್?

ಹಾರ್ದಿಕ್ ಅವರನ್ನು ಬಳಸಿಕೊಂಡಿತೆ ಕಾಂಗ್ರೆಸ್?

ಹಾರ್ದಿಕ್ ಪಟೇಲ್ ಅವರು ಯಾವಾಗ ಕಾಂಗ್ರೆಸ್ ಜೊತೆ ಮೈತ್ರಿ ಬೆಳೆಸಿಕೊಂಡರೋ, ಅವರ ಜನಪ್ರಿಯತೆ ಕುಂದುತ್ತಾ ಬಂದಿತು. ಇದು ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಕಂಡುಬಂದಿತ್ತು. ಕಾಂಗ್ರೆಸ್ ಪಕ್ಷ ಅವರ ಜೊತೆ ಮೈತ್ರಿ ಮಾಡಿಕೊಂಡು ಅವರಿಗೆ ಮೋಸ ಮಾಡಿದೆ ಎಂದು ಜನರು ಆಡಿಕೊಂಡಿದ್ದರು.

ಚುನಾವಣೆಯಲ್ಲಿ ಏಕೆ ಸ್ಪರ್ಧಿಸಲಿಲ್ಲ ಹಾರ್ದಿಕ್

ಚುನಾವಣೆಯಲ್ಲಿ ಏಕೆ ಸ್ಪರ್ಧಿಸಲಿಲ್ಲ ಹಾರ್ದಿಕ್

ಅಷ್ಟೊಂದು ಜನಪ್ರಿಯತೆ ಇದ್ದರೂ ಅವರು ಚುನಾವಣೆಯಲ್ಲಿ ಏಕೆ ಸ್ಪರ್ಧಿಸಲಿಲ್ಲ ಎಂಬುದು ಚಿದಂಬರ ರಹಸ್ಯವಾಗಿತ್ತು. 23 ವರ್ಷದ ತರುಣ ನಾಯಕ, ತನಗೆ ಚುನಾವಣೆಯಲ್ಲಿ ನಿಲ್ಲುವಷ್ಟು ಇನ್ನೂ ವಯಸ್ಸಾಗಿಲ್ಲ. ವಯಸ್ಸಾದ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹಾರಿಕೆಯ ಉತ್ತರ ನೀಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾರಾಟ

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾರಾಟ

ಅವರ ಜನಪ್ರಿಯತೆ, ಪಾಟಿದಾರ್ ಸಮುದಾಯದ ಪರವಾಗಿ ನಡೆಸುತ್ತಿರುವ ಹೋರಾಟ ಏನೇ ಇರಲಿ, ಅವರಿಗೆ ಸಂಬಂಧಿಸಿದ ಕೆಲ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸುತ್ತಾಟ ನಡೆಸಿದ್ದು ಅವರ ಜನಪ್ರಿಯತೆಗೆ ಕುಂದುಂಟು ಮಾಡಿದ್ದು ಸುಳ್ಳಲ್ಲ. ಈ ವಿಡಿಯೋಗಳಲ್ಲಿ ಅಶ್ಲೀಲತೆ ಇಲ್ಲದಿದ್ದರೂ, ಕೆಲ ಮಹಿಳೆಯರೊಂದಿಗೆ ಕಾಣಿಸಿಕೊಂಡಿದ್ದು ಕೆಲವರಿಗೆ ಇಷ್ಟವಾಗಿರಲಿಲ್ಲ.

ಬಿಜೆಪಿಗೆ ಎನ್ಆರ್ಐ ಪಾಟಿದಾರರ ಬೆಂಬಲ

ಬಿಜೆಪಿಗೆ ಎನ್ಆರ್ಐ ಪಾಟಿದಾರರ ಬೆಂಬಲ

ಗುಜರಾತ್ ನಲ್ಲಿರುವ ಬಹುತೇಕ ಪಾಟಿದಾರ್ ಸಮುದಾಯದವರು ಹಾರ್ದಿಕ್ ಪಟೇಲ್ ಅವರಿಗೆ ಬೆಂಬಲ ನೀಡಿದ್ದರೆ, ಅನಿವಾಸಿ ಭಾರತೀಯ ಪಾಟಿದಾರರು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡಿ ಹಾರ್ದಿಕ್ ಪಟೇಲ್ ಅವರಿಗೆ ಭಾರೀ ಹೊಡೆತ ನೀಡಿದ್ದರು. ಪಾಟಿದಾರ್ ಸಮುದಾಯದವರು ಹೆಚ್ಚಾಗಿರುವ ಸೌರಾಷ್ಟ್ರದಲ್ಲಿಯೂ ಬಿಜೆಪಿ ಹೆಚ್ಚಿನ ಮತಗಳಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.

English summary
Patidar Anamat Andolan Samiti (PAAS) leader Hardik Patel has trashed the exit poll survey by various agencies and has stated that there is no chance that BJP will win the Gujarat assembly elections. All the exit polls have predicted landlide victory for BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X