ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬಂಕ್ ಗಳ ಮೇಲೆ ಕಾರ್ಡು ಶುಲ್ಕವಿಲ್ಲ: ಕೇಂದ್ರದ ಸ್ಪಷ್ಟನೆ

|
Google Oneindia Kannada News

ನವದೆಹಲಿ, ಜ. 9: ಪೆಟ್ರೋಲ್ ಬಂಕ್ ಗಳಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಕೆಯ ಮೇಲೆ ವಿಧಿಸಲಾಗುತ್ತಿರುವ ಶೇ. 1ರಷ್ಟು ಶುಲ್ಕವನ್ನು ಬಂಕ್ ಮಾಲೀಕರು ಅಥವಾ ಗ್ರಾಹಕರು ನೀಡಬೇಕಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಶೇ. 1ರಷ್ಟು ಶುಲ್ಕದ ಪಾವತಿ ಇನ್ನು ಮುಂದೆ ತೈಲ ಕಂಪನಿಗಳು ಅಥವಾ ಬ್ಯಾಂಕ್ ಗಳ ಜವಾಬ್ದಾರಿಯಾಗಲಿದೆ. ಈ ನಿಟ್ಟಿನಲ್ಲಿ ಆ ಎರಡೂ ವಲಯದ ಪ್ರತಿನಿಧಿಗಳ ನಡುವೆ ಮಾತುಕತೆ ನಡೆಯುತ್ತಿದೆ. ಮಾತುಕತೆಯು ಫಲಪ್ರದವಾಗಿ ಇಬ್ಬರಲ್ಲೊಬ್ಬರು ಈ ಶುಲ್ಕದ ಜವಾಬ್ದಾರಿ ಹೊರಲಿದ್ದಾರೆಂದು ಅವರು ತಿಳಿಸಿದ್ದಾರೆ.

No burden on petrol bunks and customers for card transaction in petrol bunks: Centre

ಇದೇ ತಿಂಗಳ 13ರ ಮಧ್ಯರಾತ್ರಿಯಿಂದ ಪೆಟ್ರೋಲ್ ಬಂಕ್ ಗಳಲ್ಲಿ ಕ್ರೆಡಿಟ್, ಡೆಬಿಟ್ ಕಾರ್ಡ್ ಬಳಕೆ ನಿಲ್ಲಿಸಲು ಪೆಟ್ರೋಲ್ ಬಂಕ್ ಗಳ ಮಾಲೀಕರ ಸಂಘ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಪರಿಹರಿಸಲು ಬ್ಯಾಂಕಿಂಗ್ ವಲಯದ ಉನ್ನತ ಅಧಿಕಾರಿಗಳು ಹಾಗೂ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಪದಾಧಿಕಾರಿಗಳ ನಡುವೆ ಮಾತುಕತೆ ಸಾಗಿದೆ.

ಸಚಿವರ ಈ ಭರವಸೆಯ ಹಿನ್ನೆಲೆಯಲ್ಲಿ ಜ. 13ರಂದು ನಡೆಯಲಿರುವ ಪೆಟ್ರೋಲ್ ಬಂಕ್ ಮಾಲೀಕರ ಸಭೆ ರದ್ದಾಗುವ ಸಾಧ್ಯತೆಗಳಿವೆ. ಕಾರ್ಡು ಶುಲ್ಕದ ಹೊರೆಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಪೆಟ್ರೋಲ್ ಬಂಕ್ ಗಳ ಮಾಲೀಕರು ಅಂದು ಸಭೆ ನಡೆಸಿದ ಬಂಕ್ ಗಳಲ್ಲಿ ಕಾರ್ಡ್ ನಿಷೇಧದ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿತ್ತು.

ಏತನ್ಮಧ್ಯೆ, ಬ್ಯಾಂಕುಗಳು, ಪೆಟ್ರೋಲ್ ಬಂಕ್ ಗಳಲ್ಲಿ ಕಾರ್ಡುಗಳ ಬಳಕೆ ಮೇಲಿನ ಶೇ. 1ರಷ್ಟು ಶುಲ್ಕ ವಿಧಿಸುವ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡಲು ಸಿದ್ಧವಿಲ್ಲ ಎಂದು ಹೇಳಿರುವುದರಿಂದ ಸಮಸ್ಯೆ ಕಗ್ಗಂಟಾಗಿದೆ.

English summary
Petroleum minister Dharmendra Pradhan said that 1% surcharge will not be imposed on petrol bunks or customers. Further he said, that surcharge will be paid by either banks or petroleum companies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X