ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ, ಫೆಬ್ರವರಿಯಲ್ಲಿ ಯಾವುದೇ ಬೋರ್ಡ್ ಪರೀಕ್ಷೆಗಳಿಲ್ಲ: ರಮೇಶ್ ಪೋಖ್ರಿಯಾಲ್

|
Google Oneindia Kannada News

ನವದೆಹಲಿ, ಡಿಸೆಂಬರ್ 22: ಜನವರಿ ಅಥವಾ ಫೆಬ್ರವರಿಯಲ್ಲಿ ಯಾವುದೇ ರೀತಿಯ ಬೋರ್ಡ್ ಪರೀಕ್ಷೆಗಳಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಡಾ. ರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.

ಪರೀಕ್ಷೆ ನಿಗದಿ ಕುರಿತು ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.ಬ್ರಿಟನ್‌ನಲ್ಲಿ ರೂಪಾಂತರಿತ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಕೂಡ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದೆ.

ಕೊರೊನಾ ವೈರಸ್ ರೂಪಾಂತರ ಬೇರೆ ದೇಶದಲ್ಲೂ ಇರಬಹುದು: WHOಕೊರೊನಾ ವೈರಸ್ ರೂಪಾಂತರ ಬೇರೆ ದೇಶದಲ್ಲೂ ಇರಬಹುದು: WHO

ಡಿಸೆಂಬರ್ 21 ರಿಂದ 23ರ ನಡುವೆ ಬ್ರಿಟನ್‌ನಿಂದ ಬಂದ ಎಲ್ಲಾ ಪ್ರಯಾಣಿಕರು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಒಂದು ವೇಳೆ ಪರೀಕ್ಷಾ ಫಲಿತಾಂಶವು ಪಾಸಿಟಿವ್ ಎಂದಾದರೇ, ವ್ಯಕ್ತಿಯು ಸ್ಪೈಕ್ ಜೀನ್-ಆಧಾರಿತ RT-ಪಿಸಿಆರ್ ಪರೀಕ್ಷೆಗೆ ಒಳಪಡಬೇಕು.

No Board Examinations Will Be Conducted In January Or February In India

ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರು ಕಳೆದ 14 ದಿನಗಳ ಪ್ರಯಾಣದ ಇತಿಹಾಸದ ಬಗ್ಗೆ ಘೋಷಿಸಬೇಕು. RT-ಪಿಸಿಆರ್ ಪರೀಕ್ಷೆಯನ್ನು ಬಳಸಿಕೊಂಡು COVID-19 ಗಾಗಿ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡಲು ಸ್ವಯಂ ಘೋಷಣಾ ನಮೂನೆಯನ್ನು ಭರ್ತಿ ಮಾಡಬೇಕು. ಕೊರೊನಾ ಪಾಸಿಟಿವ್ ಪರೀಕ್ಷೆ ಮಾಡುವ ಪ್ರಯಾಣಿಕರನ್ನು ಆಯಾ ರಾಜ್ಯ ಪ್ರಾಧಿಕಾರಗಳು ಸಾಂಸ್ಥಿಕ ಪ್ರತ್ಯೇಕತೆಯ ಸೌಲಭ್ಯಕ್ಕೆ ಕಳುಹಿಸಬೇಕು.

ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಬ್ರಿಟನ್‌ನಲ್ಲಿ ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದು, ವೈರಸ್‌ನ ಉಳಿದ ಸ್ವರೂಪಗಳನ್ನು ವೇಗವಾಗಿ ಆಕ್ರಮಿಸಿಕೊಳ್ಳುತ್ತಿದೆ. ಇದು ಅನೇಕ ದೇಶಗಳಲ್ಲಿ ಈಗಾಗಲೇ ಹರಡಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

ರಾಜ್ಯಕ್ಕೀಗ ಹೊಸ ಆತಂಕ; ಪರೀಕ್ಷೆಯಿಲ್ಲದೇ ಬ್ರಿಟನ್ ನಿಂದ ಬಂದ 138 ಮಂದಿರಾಜ್ಯಕ್ಕೀಗ ಹೊಸ ಆತಂಕ; ಪರೀಕ್ಷೆಯಿಲ್ಲದೇ ಬ್ರಿಟನ್ ನಿಂದ ಬಂದ 138 ಮಂದಿ

ರೂಪಾಂತರಿ ವೈರಸ್ ಶೇ 70ರಷ್ಟು ಹೆಚ್ಚು ಸೋಂಕು ಹರಡಬಲ್ಲದು ಎಂದು ಆರಂಭಿಕ ದತ್ತಾಂಶಗಳು ಹೇಳುತ್ತವೆ ಮತ್ತು ಹಾಲಿ ಇರುವ ಕೋವಿಡ್ ಲಸಿಕೆಗಳಲ್ಲಿ ಒಂದರ ಪ್ರತಿರಕ್ಷಣಾ ವ್ಯವಸ್ಥೆಯ ಸ್ಪಂದನೆ ಮೇಲೆ ಪರಿಣಾಮ ಬೀರಬಹುದು ಎಂಬ ಹೇಳಿಕೆಗಳ ಬಗ್ಗೆ ಈಗಲೇ ಅಂತಿಮ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

English summary
No Board examinations will be conducted in January or February. A decision on the conduct of examinations will be taken later: Union Education Minister Dr. Ramesh Pokhriyal Nishank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X