ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಪ್ ಬ್ಯಾನ್ ಆಗ್ಬೇಕೆ? ಸರ್ಕಾರವನ್ನು ಕೇಳಿ ಎಂದ ಸುಪ್ರೀಂ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜೂನ್ 29: ದೇಶದ ಭದ್ರತೆಗೆ ಕಂಟಕವಾಗಿರುವ ಸಾಮಾಜಿಕ ಜಾಲತಾಣಗಳು, ಅಪ್ಲಿಕೇಷನ್ ಗಳನ್ನು ನಿಷೇಧಿಸಬೇಕು, ಮುಖ್ಯವಾಗಿ ವಾಟ್ಸಪ್ ಬ್ಯಾನ್ ಆಗ್ಬೇಕು ಎಂದು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಾಟ್ಸಪ್ ನಿಷೇಧ ಕುರಿತಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಬುಧವಾರದಂದು ಕೋರ್ಟ್ ತಿರಸ್ಕರಿಸಿದೆ.

ಹರ್ಯಾಣ ಮೂಲದ ಆರ್​ಟಿಐ ಕಾರ್ಯಕರ್ತ ಸುಧೀರ್ ಯಾದವ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಅವರು ಅರ್ಜಿಯನ್ನು ತಿರಸ್ಕರಿಸಿ, ನಿಷೇಧ ಹೇರಿಕೆ ಕೋರ್ಟಿನಿಂದ ಸಾಧ್ಯವಿಲ್ಲ, ಈ ಬಗ್ಗೆ ಭಾರತ ಸರ್ಕಾರಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಅರ್ಜಿದಾರರಿಗೆ ಸೂಚಿಸಲಾಗಿದೆ.[ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?]

SC says 'No' to ban on WhatsApp; Petitioner told to approach government

ಕ್ಷಣಾರ್ಧದಲ್ಲಿ ಸಂದೇಶ ರವಾನೆ ಮಾಡಿಕೊಳ್ಳುವ, ಮಾಹಿತಿ ವಿನಿಮಯ ಮಾಡಿಕೊಳ್ಳಲು ಅನುಕೂಲಕರವಾದ ವಾಟ್ಸಪ್ ನಂಥ ಅಪ್ಲಿಕೇಷನ್​ಗಳಿಂದ ಭಯೋತ್ಪಾದನಾ ಚಟುವಟಿಕೆ, ಅನೈತಿಕ, ಅಕ್ರಮ ಚಟುವಟಿಕೆಗಳು ಹೆಚ್ಚಾಗಿವೆ. ಹೀಗಾಗಿ ಕೂಡಲೇ ಇಂಥ ಅಪ್ಲಿಕೇಷನ್ ಗಳನ್ನು ನಿಷೇಧಿಸಬೇಕು ಎಂದು ಸುಧೀರ್ ಯಾದವ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.[ವಾಟ್ಸಪ್ ರಿಪ್ಲೈ, ಉಲ್ಲೇಖ ಸಂದೇಶ ಸೌಲಭ್ಯ ಬಳಕೆ ಹೇಗೆ?]

ಇಬ್ಬರು ವ್ಯಕ್ತಿಗಳ ನಡುವೆ ನಡೆದ ಸಂಭಾಷಣೆ ಅಥವಾ ಇನ್ನಾವುದೇ ಸಂದೇಶಗಳನ್ನು ಸರ್ಕಾರ ಬಯಸಿದಾಗ ನೀಡುವಂತೆ ಇರಬೇಕು. ಆದರೆ, ಈಗ ವಾಟ್ಸಪ್ ನಲ್ಲಿ ಇನ್ ಕ್ರಿಪ್ಶನ್ ತಂತ್ರಜ್ಞಾನ ಬಳಕೆ ಮಾಡುತ್ತಿರುವುದರಿಂದ ಸಂದೇಶಗಳ ಮೇಲಿನ ನಿಯಂತ್ರಣ ಸಾಧ್ಯವಾಗುವುದಿಲ್ಲ.[ಯುವ ಪೀಳಿಗೆಯ ಆಯ್ಕೆ: ಫೇಸ್ಬುಕ್? ವಾಟ್ಸಪ್?]

ಒಂದು 256 ಬಿಟ್ encryted ಸಂದೇಶವನ್ನು ಡಿಕೋಡ್ ಮಾಡಲು ಸಾಧ್ಯವೆ ಇಲ್ಲ. ಹೀಗಾಗಿ ಭಯೋತ್ಪಾದಕರಿಗೆ ಸಂದೇಶ ರವಾನೆ ರಹದಾರಿ ಸಿಕ್ಕಿದ್ದಂತೆ ಆಗುತ್ತದೆ. ಹೀಗಾಗಿ ನಿಷೇಧ ಹೇರಿ ಎಂದು ಅರ್ಜಿಯಲ್ಲಿ ಹೇಳಲಾಗಿದೆ,

English summary
A petition seeking a ban on WhatsApp was today rejected by the Supreme Court of India. A bench headed by the Chief Justice of India, T S Thakur rejected the petition filed by Haryana based RTI activist, Sudhir Yadav. The Bench directed the petitioner to approach the government of India instead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X