ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದ್ಮಾವತ್ ಬಿಡುಗಡೆಗೆ ಸುಪ್ರೀಂಕೋರ್ಟಿನಿಂದ ಹಸಿರು ನಿಶಾನೆ

By Mahesh
|
Google Oneindia Kannada News

ನವದೆಹಲಿ, ಜನವರಿ 23: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹುನಿರೀಕ್ಷಿತ, ವಿವಾದಿತ ಚಿತ್ರ ಪದ್ಮಾವತ್ ಬಿಡುಗಡೆಗೆ ಇದ್ದ ಆತಂಕ ದೂರಾಗಿದೆ. ಜನವರಿ 25ರಂದು ಚಿತ್ರ ಬಿಡುಗಡೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳನ್ನು ಸುಪ್ರೀಂಕೋರ್ಟ್ ಇಂದು(ಜನವರಿ 23) ತಿರಸ್ಕರಿಸಿದೆ.

ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಪದ್ಮಾವತ್ ಬಿಡುಗಡೆಗೆ ನಿಷೇಧ ಹೇರುವಂತೆ ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಯನ್ನು ವಜಾ ಮಾಡಿದೆ. ದೇಶದಾದ್ಯಂತ ಪದ್ಮಾವತ್ ಬಿಡುಗಡೆಗೆ ಸುಪ್ರೀ ಆದೇಶ ನೀಡಿದೆ.

No ban on #Padmaavat SC rejects plea by Rajasthan, MP govts

ಪದ್ಮಾವತ್ ಚಿತ್ರ ಬಿಡುಗಡೆಯಾದರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂದು ರಾಜಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯ ಸರ್ಕಾರಗಳ ಪರವಾಗಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠವು ತಿರಸ್ಕರಿಸಿದೆ.

ಪದ್ಮಾವತ್ ವಿವಾದ: ಜನವರಿ 25ಕ್ಕೆ ಭಾರತ್ ಬಂದ್'ಪದ್ಮಾವತ್ ವಿವಾದ: ಜನವರಿ 25ಕ್ಕೆ ಭಾರತ್ ಬಂದ್'

ನಿಮಗೆ ಸಿನಿಮಾ ನೋಡಲು ಕಷ್ಟವಾದರೆ, ಚಿತ್ರಮಂದಿರಕ್ಕೆ ಹೋಗಬೇಡಿ, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವುದು ಆಯಾ ರಾಜ್ಯದ ಜವಾಬ್ದಾರಿ' ಎಂದು ಹೇಳಿದ್ದಾರೆ. ಸೆನ್ಸಾರ್ ಬೋರ್ಡ್ ಅನುಮತಿ ನೀಡಿದ ನಂತರ ಜನವರಿ 25ರಂದು ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ ಮಾಡಲಾಗಿದೆ.

ಚಿತ್ರ ಬಿಡುಗಡೆ ದಿನಾಂಕ ನಿಗದಿಯಾದರೂ ಆತಂಕ ದೂರಾಗಿಲ್ಲ. ಪದ್ಮಾವತಿ ಚಿತ್ರ ಬಿಡುಗಡೆ ದಿನ (ಜನವರಿ 25) ಭಾರತ್ ಬಂದ್ ಆಚರಣೆಗೆ ಶ್ರೀಕಾರ್ಣಿಸೇನಾ ಕರೆ ನೀಡಿದೆ. ಈ ನಡುವೆ ರಾಜಸ್ಥಾನ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಚಿತ್ರವನ್ನು ನಿಷೇಧಿಸಲಾಗಿತ್ತು.

ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ನಟಿ, ರಾಣಿ ಪದ್ಮಾವತಿ ಪಾತ್ರಧಾರಿ ದೀಪಿಕಾ ಪಡುಕೋಣೆ ಅವರಿಗೆ ಈಗಾಗಲೇ ಸೇನಾದಿಂದ ಜೀವ ಬೆದರಿಕೆಯಿದೆ. ಅಂಬಾಲಾದಲ್ಲಿ ಕಾರ್ಣಿಸೇನಾ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಗುಜರಾತಿನಲ್ಲಿ ಚಿತ್ರ ಪ್ರದರ್ಶನ ಮಾಡದಿರಲು ಅಲ್ಲಿನ ಪ್ರದರ್ಶಕರ ಸಂಘ ನಿರ್ಧರಿಸಿದೆ.

English summary
No ban on #Padmaavat. Supreme Court today(Jan 23) rejected plea by Rajasthan, Madhya Pradesh governments and also dismisses plea by Karni Sena
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X