75 ವರ್ಷಗಳ ಮಿತಿ ಸಡಿಲ: ಅಡ್ವಾಣಿ, ಎಂಎಂ ಜೋಶಿ ಸ್ಪರ್ಧೆಗೆ ನಿರ್ಬಂಧವಿಲ್ಲ!
ನವದೆಹಲಿ, ಮಾರ್ಚ್ 10: ಲೋಕಸಭೆ ಚುನಾವಣೆ 2019ರಲ್ಲಿ ಬಿಜೆಪಿಯ ಹಿರಿಯ ಮುಖಂಡರು ಸ್ಪರ್ಧಿಸಲು ಇದ್ದ ಆತಂಕ ಈಗ ದೂರಾಗಿದೆ. ಚುನಾವಣೆಯಲ್ಲಿ 75 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಬಿಜೆಪಿಯಿಂದ ಸ್ಪರ್ಧೆ ನಡೆಸುವ ಕುರಿತಾಗಿದ್ದ ಗೊಂದಲಕ್ಕೆ ತೆರೆ ಎಳೆಯಲಾಗಿದೆ
ಐದು ವರ್ಷದಲ್ಲಿ 365 ಪದ, 92% ಹಾಜರಾತಿ: ಅಡ್ವಾಣಿ ಸಂಸತ್ ಲೆಕ್ಕಾಚಾರ
ಹೀಗಾಗಿ, ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯಲ್ಲಿರುವ 75 ವರ್ಷ ಮೇಲ್ಪಟ್ಟ ಹಿರಿಯ ನಾಯಕರು ಅಭ್ಯರ್ಥಿಗಳಾಗಿ ಕಣಕ್ಕಿಳಿಯಬಹುದಾಗಿದೆ. ಆದರೆ, 75 ವರ್ಷ ಮೇಲ್ಪಟ್ಟವರಿಗೆ ಸರ್ಕಾರದ ಖಾತೆ ನೀಡುವುದಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಲೋಕಸಭೆ ಚುನಾವಣೆ: ಅಡ್ವಾಣಿ, ಜೋಶಿ ಸ್ಪರ್ಧಿಸುತ್ತಾರಾ?
ಬಿಜೆಪಿಯಲ್ಲಿ ಎಲ್.ಕೆ.ಅಡ್ವಾಣಿ(91), ಮುರಳಿ ಮನೋಹರ್ ಜೋಶಿ(84), ಶಾಂತ ಕುಮಾರ್(85), ಕಲ್ರಾಜ್ ಮಿಶ್ರಾ(77) ಹಾಗೂ ಭಗತ್ ಸಿಂಗ್ ಕೊಶ್ಯಾರಿ(77) ಅವರುಗಳು ಸ್ಪರ್ಧಿಸಲು ಯಾವುದೇ ಅಡ್ಡಿಯಿಲ್ಲ. ಒಂದು ವೇಳೆ ಈ ಬಾರಿ ಎಲ್ ಕೆ ಅಡ್ವಾಣಿ ಅವರು ಲೋಕಸಭೆಗೆ ಸ್ಪರ್ಧಿಸಿದರೆ, ಕಣದಲ್ಲಿರುವ ಅತ್ಯಂತ ಹಿರಿಯ ಅಭ್ಯರ್ಥಿ ಎನಿಸಲಿದ್ದಾರೆ.